ಪ್ರಾಧ್ಯಾಪಕಿಗೆ ಕಿರುಕುಳ ನೀಡಿದ್ದ ಆರೋಪಿಗಳಿಗೆ ಜಾಮೀನು
ಮಂಗಳೂರು: ಬಂಟ್ವಾಳದ ಕಾಲೇಜೊಂದರ ಪ್ರಾಧ್ಯಾಪಕಿಗೆ ಮಾನಸಿಕ ಕಿರುಕುಳ ನೀಡುತ್ತಿದ್ದ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸ್ ಕಸ್ಟಡಿಯಲ್ಲಿದ್ದ ಆರೋಪಿಗಳಿಗೆ ನ್ಯಾಯಾಲಯ ಜಾಮೀನು ನೀಡಿದೆ.
ಕಾಲೇಜಿನ ಸಂಚಾಲಕ, ಬಂಟ್ವಾಳ ಸಿದ್ಧಕಟ್ಟೆ ಮೇಗಿನ ಉಳಿರೋಡಿ ನಿವಾಸಿ ಪ್ರದೀಪ್ ಪೂಜಾರಿ ಹಾಗೂ ಕ್ರೀಡಾ ತರಬೇತಿದಾರ ಹೆಬ್ರಿ ನಾಡ್ಪಾಲು ನಿವಾಸಿ ತಾರಾನಾಥ ಬಿ.ಎಸ್.ಶೆಟ್ಟಿಗೆ ನ್ಯಾಯಾಲಯ ಜಾಮೀನು ನೀಡಿದೆ. ಪ್ರಮುಖ ಆರೋಪಿ ಕಾಲೇಜಿನ ಸಂಚಾಲಕ ಬೆಳ್ತಂಗಡಿಯ ಲಾಯಿಲ ನಿವಾಸಿ ಪ್ರಕಾಶ್ ಶೆಣೈಗೆ ನ್ಯಾಯಾಲಯ ಕಳೆದ ಶುಕ್ರವಾರ ಜಾಮೀನು ನೀಡಿತ್ತು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.