ಭಾನುವಾರ, 26 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಂಟ್ವಾಳ: ಗಾಳಿ ಸಹಿತ ಮಳೆ

Published 20 ಏಪ್ರಿಲ್ 2024, 13:03 IST
Last Updated 20 ಏಪ್ರಿಲ್ 2024, 13:03 IST
ಅಕ್ಷರ ಗಾತ್ರ

ಬಂಟ್ವಾಳ: ತಾಲ್ಲೂಕಿನ ಕೆಲವೆಡೆ ಶನಿವಾರ ಮುಂಜಾನೆ ಮಿಂಚು ಮತ್ತು ಗುಡುಗು ಸಹಿತ ಗಾಳಿ ಮಳೆಯಾಗಿದೆ.

ಇಲ್ಲಿನ ಸೋರ್ಣಾಡು, ರಾಯಿ, ಸಿದ್ಧಕಟ್ಟೆ, ವಾಮದಪದವು, ಕಾಡಬೆಟ್ಟು, ವಗ್ಗದಲ್ಲಿ ಶನಿವಾರ ನಸುಕಿನ 3 ಗಂಟೆಯಿಂದ 5 ಗಂಟೆವರೆಗೆ ಗಾಳಿ ಮಳೆಯಾಗಿದೆ. ಚರಂಡಿ ನಿರ್ವಹಣೆ ಇಲ್ಲದ ರಸ್ತೆಗಳಲ್ಲಿ ಮಣ್ಣು ತುಂಬಿಕೊಂಡು ಕೆಸರುಮಯವಾಗಿ ಪರಿವರ್ತನೆಗೊಂಡಿದೆ. ಹಲವೆಡೆ ಅಡಿಕೆ, ಬಾಳೆ ಗಿಡ ಮತ್ತು ರಬ್ಬರ್ ಮರಗಳು ಮುರಿದು ಬಿದ್ದಿವೆ. ರಾಯಿ ಸಮೀಪದ ಮುದ್ದಾಜೆ ಎಂಬಲ್ಲಿ ಅಡಿಕೆ ಮರ ಮುರಿದು ಬಿದ್ದು ನಷ್ಟ ಉಂಟಾಗಿದೆ ಎಂದು ಕೃಷಿಕರೊಬ್ಬರು ಅಳಲು ತೋಡಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT