ಮಂಗಳೂರು: ಕೊರೊನಾ ವೈರಸ್ ಸೋಂಕು ಪೀಡಿತ ರೋಗಿಗಳಿಗೆ ವೆಂಟಿಲೇಟರ್ಗೆ ಪೂರಕವಾಗಿ ಆಮ್ಲಜನ ಪೂರೈಕೆ ಮಾಡುವಂತಹ ದೇಶಿಯ ಶೈಲಿಯ ಬಬಲ್ ಆಕ್ಸಿಜನ್ ಹೆಲ್ಮೆಟ್ ತಯಾರಿಸಲಾಗಿದೆ.

ದೇಶದಲ್ಲಿಯೇ ಮೊದಲ ಬಾರಿಗೆ ಇಂತಹ ಜೀವ ರಕ್ಷಕ ತಯಾರಿಸಿದ್ದು ಮಂಗಳ ಆಸ್ಪತ್ರೆ ವೈದ್ಯ ತಂಡದ ಹೆಮ್ಮೆ. ಕೋವಿಡ್–19 ರೋಗಿಗಗಳು ಈ ಸಾಧನ ಬಳಕೆ ಮಾಡುವುದರಿಂದ ಇತರರಿಗೆ ಸೋಂಕು ಹರಡುವುದಿಲ್ಲ ಎಂದು ಮಂಗಳೂರಿನ ಮಂಗಳಾ ಆಸ್ಪತ್ರೆ ವೈದ್ಯಕೀಯ ನಿರ್ದೇಶಕ ಡಾ.ಗಣಪತಿ ಪಿ. ಗುರುವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಕೋವಿಡ್–19 ದೂರ ಮಾಡುವ ಹಾಗೂ ಸಮಾಜಕ್ಕೆ ಕೊಡುಗೆ ನೀಡುವ ಹಂಬಲದಿಂದ ಒಂದು ತಂಡವಾಗಿ ಈ ಬಬಲ್ ಹೆಲ್ಮೆಟ್ ತಯಾರಿಸಿದ್ದೇವೆ. ಈ ಹೆಲ್ಮೆಟ್ ದರ ₹ 5 ರಿಂದ ₹ 6 ಸಾವಿರ ಇದ್ದು, ಹೆಚ್ಚು ಖರೀದಿ ಮಾಡಿದಲ್ಲಿ ಬೆಲೆ ಕೂಡಾ ಕಡಿಮೆ ಆಗುತ್ತದೆ ಎಂದು ಅವರು ತಿಳಿಸಿದರು.

ಈಗ ಕೋವಿಡ್– 19 ರೋಗಿಗಳಿಗೆ ವೆಂಟಿಲೇಟರ್ ಬಳಕೆ ಮಾಡಲಾಗುತ್ತಿದ್ದು, ಬದಲಿಯಾಗಿ ಈ ಆಕ್ಸಿಜನ್ ಹೆಲ್ಮೆಟ್ ಬಳಸಬಹುದು. ಕಡಿಮೆ ಖರ್ಚು, ಉಪಯೋಗಿಸುವಾಗ ಯಾವುದೇ ಅಡಚಣೆ ಆಗಲ್ಲ. ಮುಖಗವಸಿಗಿಂತ ಹೆಚ್ಚಿನ ಪ್ರಮಾಣದಲ್ಲಿ ಸುರಕ್ಷಿತ. ಇದನ್ನು ಧರಿಸಿ ಟಿವಿ ನೋಡಬಹುದು, ಪೇಪರ್ ಓದಬಹುದು. ಈ ಉಪಕರಣದ ಪೇಟೆಂಟ್ ಪಡೆಯುಲು ಆಸ್ಪತ್ರೆ ಆಡಳಿತ ಮಂಡಳಿ ನಿರ್ಧರಿಸಿದೆ ಎಂದು ಅವರು ತಿಳಿಸಿದರು.

ಇದನ್ನು ಸ್ಥಳೀಯವಾಗಿ ತಯಾರಿಸಲಾಗಿದೆ. ಗುಣಮಟ್ಟದ ಪ್ಲಾಸ್ಟಿಕ್, ಎರಡು ರಿಂಗ್, ಗಮ್, ಗುಣಮಟ್ಟದ ರಬ್ಬರ್ ಬಳಸಲಾಗಿದೆ ಎಂದು ಡಾ.ಹರ್ಷ ಹಾಗೂಡಾ.ಜಯಪ್ರಕಾಶ್ ಮಾಹಿತಿ ನೀಡಿದರು.

ಆಸ್ಪತ್ರೆಯ ನಿರ್ದೇಶಕಿ ಡಾ.ಅನಿತಾ ಜಿ. ಭಟ್, ವೈದ್ಯ ಡಾ.ಮೋಹನ್ ಇದ್ದರು.

ಕೋವಿಡ್ –19 ರೋಗಿಗಳ ಸಂಖ್ಯೆ ಏಕಕಾಲದಲ್ಲಿ ಏರಿಕೆ ಕಂಡು ಬಂದರೆ ಎಲ್ಲ ರೋಗಿಗಳಿಗೆ ವೆಂಟಿಲೇಟರ್ ಕಲ್ಪಿಸುವುದು ಕಷ್ಟ. ಬಬಲ್ ಆಕ್ಸಿಜನ್ ಹೆಲ್ಮೆಟ್ ಈ ವೇಳೆ ಸಹಾಯಕ. ಇದು ಮಂಗಳಾ ಆಸ್ಪತ್ರೆ ವೈದ್ಯರ ಮೊದಲ ಸಂಶೋಧನೆಯಲ್ಲ. ಮಂಗಳೂರ ಪೊಲೀಸ್ ಸಿಬ್ಬಂದಿಗೆ ಮೂರು ಲೇಯರ್ನ 2,000 ಮಾಸ್ಕ್ಗಳನ್ನು ನೀಡಲಾಗಿದೆ ಮಂಗಳೂರಿನ ಮಂಗಳಾ ಆಸ್ಪತ್ರೆ ನಿರ್ದೇಶಕ ಡಾ.ಗಣಪತಿ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.