ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಸೌಹಾರ್ದದ ಪಾಠ ಅನುಸರಿಸಿ: ಯು.ಟಿ‌.ಖಾದರ್

Published 31 ಡಿಸೆಂಬರ್ 2023, 14:05 IST
Last Updated 31 ಡಿಸೆಂಬರ್ 2023, 14:05 IST
ಅಕ್ಷರ ಗಾತ್ರ

ಮುಡಿಪು: ಮಂಜನಾಡಿ ಕೇಂದ್ರ ಜುಮಾ‌ ಮಸೀದಿಯ ಸಮೀಪ ಅಂತ್ಯವಿಶ್ರಮ ಹೊಂದಿರುವ ಹಝ್ರತ್ ಅಸ್ಸಯ್ಯಿದ್ ಇಸ್ಮಾಯಿಲ್ ಅಲ್-ಬುಖಾರಿ ಅವರ ಹೆಸರಿನಲ್ಲಿ ನಡೆಯುತ್ತಿರುವ ಉರುಸ್‌ನಲ್ಲಿ ಸೌಹಾರ್ದ ಸಭೆ ನಡೆಯಿತು.

ಕರ್ನಾಟಕ ವಿಧಾನಸಭೆಯ ಅಧ್ಯಕ್ಷ ಯು.ಟಿ.ಖಾದರ್ ಮಾತನಾಡಿ, ಧರ್ಮ ಎಲ್ಲರನ್ನೂ ಒಟ್ಟುಗೂಡಿಸಬೇಕೇ ಹೊರತು ಅದು ದೂರಗೊಳಿಸಬಾರದು. ಧಾರ್ಮಿಕ,‌ ಲೌಕಿಕ ಶಿಕ್ಷಣದ ಮೂಲಕ ಶಾಂತಿ,‌ ಸಾಮರಸ್ಯ, ಸದೃಢ ರಾಷ್ಟ್ರ ನಿರ್ಮಾಣಕ್ಕೆ ನಾವೆಲ್ಲರೂ ಪಣತೊಡಬೇಕು ಎಂದರು.

ಮಂಜನಾಡಿ ಮುದರ್ರಿಸ್ ಅಹ್ಮದ್ ಬಾಖವಿ ಉದ್ಘಾಟಿಸಿದರು.

ಜಮಾಅತ್ ಅಧ್ಯಕ್ಷ ಅಬ್ದುಲ್ ಅಝೀಝ್ ಮೈಸೂರು ಬಾವ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಅಬ್ದುಲ್ ರಹಿಮಾನ್ ರಝ್ವಿ ದುಆ ನೆರವೇರಿಸಿದರು.

ಕೊಲ್ಯ ನಾಗಬ್ರಹ್ಮ ಕ್ಷೇತ್ರದ ಭಾಸ್ಕರ ಐತಾಲ್, ಸಂತ ಲಾರೆನ್ಸ್ ಚರ್ಚ್‌ನ ಫಾ.ಫೆಡ್ರಿಕ್ ಡಿಸೋಜ ಮಾತನಾಡಿದರು.

ಪ್ರಮುಖರಾದ ಸದಾಶಿವ ಉಳ್ಳಾಲ್, ಝುಬೈರ್ ಮೈಸೂರು, ಜ.ಸೋಯಿಬ್ ಪಠಾಣ್, ಹೈದರ್ ಪರ್ತಿಪ್ಪಾಡಿ, ಪ್ರಕಾಶ್ ಕುಂಪಲ, ಲತೀಫ್ ಗುರುಪುರ, ಜಗನ್ನಾಥ ರೈ ಮಂಜನಾಡಿ, ಮಂಜು ಮೈಸೂರು, ಎನ್.ಎಸ್.ಕರೀಂ, ಮೊಯ್ದಿನ್ ಹಾಜಿ, ಎಂ.ಎಸ್.ಮಹಮ್ಮದ್, ಆಲಿಕುಂಞಿ ಹಾಜಿ ಪಾರೆ, ಅಶ್ರಫ್ ಖಾನ್, ಮುಸ್ತಫಾ ಹಾಜಿ, ಇಬ್ರಾಹಿಂ, ಹನೀಫ್ ಎ.ಇ, ಅಥಾವುಲ್ಲಾ ಪರ್ತಿಪ್ಪಾಡಿ, ಮೊಯ್ದಿನ್ ಬಸರ, ಬಾಪಕುಂಞಿ, ಹಮೀದ್ ಆರಂಗಡಿ, ಎನ್.ಐ.ಮುಹಮ್ಮದ್, ಕುಂಞಿ ಚೌಕ, ಎ.ಇ.ಇಬ್ರಾಹಿಂ, ಟಿ.ಕುಂಞಿ ಭಾಗವಹಿಸಿಸಿದ್ದರು.

ಕೇಂದ್ರ ಜುಮಾ ಮಸೀದಿ ಪ್ರಧಾನ ಕಾರ್ಯದರ್ಶಿ ಅಝೀಝ್ ಪರ್ತಿಪ್ಪಾಡಿ ಸ್ವಾಗತಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT