ಬಂಟ್ವಾಳ: ತಾಲ್ಲೂಕಿನಲ್ಲಿ ಗರಿಷ್ಠ ಸಂಖ್ಯೆಯ ರೋಟರಿ ಕ್ಲಬ್ ಸಂಸ್ಥೆಗಳು ಸಾಮಾಜಿಕ ಸೇವಾ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದು, ಈ ಪೈಕಿ ಕಡಿಮೆ ಅವಧಿಯಲ್ಲಿ ಗರಿಷ್ಠ ಮಟ್ಟದ ಸಾಧನೆ ಮಾಡಿರುವ ಹೆಗ್ಗಳಿಕೆ ಲೊರೆಟ್ಟೊ ಹಿಲ್ಸ್ ರೋಟರಿ ಕ್ಲಬ್ಗೆ ಸಲ್ಲುತ್ತದೆ ಎಂದು ಇಂಟರ್ ಆಕ್ಟ್ ಕ್ಲಬ್ ಜಿಲ್ಲಾ ಉಪಾಧ್ಯಕ್ಷ ಬೊಂಡಾಲ ಚಿತ್ತರಂಜನ್ ಶೆಟ್ಟಿ ಹೇಳಿದರು.

ಇಲ್ಲಿನ ಅಗ್ರಾರ್ ಶಾಲೆಯಲ್ಲಿ ಶನಿವಾರ ಏರ್ಪಡಿಸಿದ್ದ ಇಂಟರ್ ಆಕ್ಟ್ ಕ್ಲಬ್ ಪದಗ್ರಹಣದಲ್ಲಿ ನೂತನ ಪದಾಧಿಕಾರಿಗಳಿಗೆ ಪ್ರತಿಜ್ಞಾವಿಧಿ ಬೋಧಿಸಿ ಅವರು ಮಾತನಾಡಿದರು.

ಲೊರೆಟ್ಟೊ ಹಿಲ್ಸ್ ರೋಟರಿ ಕ್ಲಬ್ ಅಧ್ಯಕ್ಷ ವಿಜಯ ಫೆರ್ನಾಂಡಿಸ್ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಇದೇ ವೇಳೆ ಅವರು ₹ 40 ಸಾವಿರ ವೆಚ್ಚದ 11 ಸೂಚನಾ ಫಲಕಗಳನ್ನು ಶಾಲೆಗೆ ಹಸ್ತಾಂತರಿಸಿದರು. ಮುಖ್ಯಶಿಕ್ಷಕಿ ಭಗಿನಿ ಪ್ರಶಾಂತಿ ಮೋನಿಸ್ ಮಾತನಾಡಿದರು.

ವಲಯ ಸೇನಾನಿ ರಾಮಚಂದ್ರ ಶೆಟ್ಟಿಗಾರ್, ಕ್ಲಬ್ನ ಕಾರ್ಯದರ್ಶಿ ಮೋಹನ್ ಕೆ.ಶ್ರೀಯಾನ್ ರಾಯಿ, ಮಾಜಿ ಅಧ್ಯಕ್ಷೆ ಶ್ರುತಿ ಮಾಡ್ತಾ, ಆಂಟೋನಿ ಸಿಕ್ವೇರಾ, ಸುರೇಶ ಶೆಟ್ಟಿ, ಪ್ರಮುಖರಾದ ಪಿ.ಜೆ.ರೋಡ್ರಿಗಸ್, ರಾಜೇಶ ಶೆಟ್ಟಿ ಸೀತಾಳ, ಸದಾನಂದ ಶೆಟ್ಟಿ, ಪ್ರೀತಂ ರಾಡ್ರಿಗಸ್, ಆಲ್ವಿನ್ ಮಿನೇಜಸ್, ಸೆಬೆಸ್ಟಿನ್ ಮಿನೇಜಸ್, ಗೀತಾ ಪಿ.ಬಲ್ಲಾಳ್, ರೂಪಾ ಆರ್.ಶೆಟ್ಟಿ, ವೀಡಾ ಮಿನೇಜಸ್, ಪ್ರೀತಾ ಸಿಕ್ವೇರ, ಶೆರಲ್ ರೋಡ್ರಿಗಸ್, ಸುಝಾನ್ ವಾಸ್, ಇಂಟರಾಕ್ಟ್ ಕ್ಲಬ್ ಅಧ್ಯಕ್ಷ ಅಭಿರಾಮ್ ಎಸ್., ಮಾಜಿ ಅಧ್ಯಕ್ಷೆ ನಿಯೋಲ ಫ್ರಾಂಕ್ ಮತ್ತಿತರರು ಹಾಜರಿದ್ದರು.

ಇದೇ ವೇಳೆ ಕ್ಲಬ್ನ ಸದಸ್ಯೆ ಕ್ಲಾರೆಟ್ ಡಿಸೋಜ ಹಣಕಾಸಿನ ಉಳಿತಾಯ ಬಗ್ಗೆ ಮಾಹಿತಿ ನೀಡಿದರು. ಕಾರ್ಯಕ್ರಮ ಸಂಯೋಜಕ ಪ್ರೀತೇಶ್ ಕಾರ್ಲ ಸ್ವಾಗತಿಸಿದರು. ಇಂಟರಾಕ್ಟ್ ಕ್ಲಬ್ ಕಾರ್ಯದರ್ಶಿ ರೀನಲ್ ವಂದಿಸಿದರು.

ಆರಂಭದಲ್ಲಿ ಶಾಲಾ ಕೈತೋಟದಲ್ಲಿ ಹಣ್ಣಿನ ಗಿಡಗಳ ನಾಟಿ ಮತ್ತು ಗೊಬ್ಬರ ಬಳಕೆಯ ಪ್ರಾತ್ಯಕ್ಷಿಕೆ ನಡೆಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.