ಶೃಂಗೇರಿ: ಅಂಬೇಡ್ಕರ್, ಬಸವಣ್ಣನ ವಿಚಾರಧಾರೆ ಅನುಷ್ಠಾನಕ್ಕೆ ತಂದಿರುವುದು ಕಾಂಗ್ರೆಸ್ ಪಕ್ಷ. ಬಿಜೆಪಿ ಅಧಿಕಾರದಿಂದ ಹೊರಗುಳಿದರೆ ಮಾತ್ರ ಸಂವಿಧಾನ ಉಳಿಯುತ್ತದೆ. ಅಂಬೇಡ್ಕರ್ ಕೇವಲ ಪರಿಶಿಷ್ಟ ಜಾತಿ ಮತ್ತು ಪಂಗಡಕ್ಕೆ ಮೀಸಲಾತಿ ನೀಡಿಲ್ಲ, ಹಿಂದೂ ಕೋಡ್ ಬಿಲ್ ತರುವ ಮೂಲಕ ಮಹಿಳಾ ಸಬಲೀಕರಣಕ್ಕೆ ಆದ್ಯತೆ ನೀಡಿದ್ದಾರೆ. ಹೆಣ್ಣುಮಕ್ಕಳಿಗೂ ಆಸ್ತಿ ಹಕ್ಕು ಕೊಟ್ಟಿರುವುದು ಅಂಬೇಡ್ಕರ್' ಎಂದು ಮಾಜಿ ಶಾಸಕ ಕಿಮ್ಮನೆ ರತ್ನಾಕರ್ ಹೇಳಿದರು.

ಶೃಂಗೇರಿಯ ಯುವ ಕಾಂಗ್ರೆಸ್ ಮತ್ತು ಬ್ಲಾಕ್ ಕಾಂಗ್ರೆಸ್ ವತಿಯಿಂದ ಆಯೋಜಿಸಿದ್ದ ಜೈ ಬಾಪು, ಜೈ ಭೀಮ್, ಜೈ ಸಂವಿಧಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ನಾವು ಪಕ್ಷ ಕಟ್ಟುವುದು ಅಧಿಕಾರ ಗ್ರಹಣಕ್ಕಾಗಿ ಅಲ್ಲ, ಬಡವರ ಕಲ್ಯಾಣಕ್ಕಾಗಿ. ಮೀಸಲಾತಿ ಬಗ್ಗೆ ಮಾತನಾಡುವ ಬಿಜೆಪಿಯವರು ಅಸ್ಪೃಶ್ಯತೆ ಬಗ್ಗೆ ಮಾತನಾಡುತ್ತಾರಾ? ಬಿಜೆಪಿಯವರು ಪ್ರಚಾರಕ್ಕಾಗಿ ವ್ಯತಿರಿಕ್ತ ಹೇಳಿಕೆ ನೀಡುತ್ತಾರೆ. ಬಿಜೆಪಿ ರಾಜಕೀಯಕ್ಕಾಗಿ ಹಿಂದೂವನ್ನು ಬಳಸುತ್ತಿದೆ. ಬಾಲರಾಮನ ಪ್ರಾಣ ಪ್ರತಿಷ್ಠಾಪನೆಯನ್ನು ಮೋದಿ ನೆರವೇರಿಸಿದರು. ಸಂಪ್ರದಾಯ ಪ್ರಕಾರ ಬ್ರಾಹ್ಮಣ ಮಾಡಬೇಕು ಎಂದಿದೆ. ಹಾಗಾದರೆ ಎಲ್ಲ ದೇವಸ್ಥಾನಗಳ ಪೂಜೆಗೆ ಇತರರಿಗೂ ಅವಕಾಶ ಕೊಡಿ’ ಎಂದು ಹೇಳಿದರು.

ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ವಿನಯಕುಮಾರ್ ಸೊರಕೆ ಮಾತನಾಡಿ, ಬಾಬಾ ಸಾಹೇಬ್ ಅಂಬೇಡ್ಕರ್ ಕೊಟ್ಟ ಸಂವಿಧಾನವೇ ಕಾಂಗ್ರೆಸ್ ಸಿದ್ದಾಂತ. ಮಹಾತ್ಮ ಗಾಂಧಿ ಭೇಟಿಕೊಟ್ಟ ಸ್ಥಳವನ್ನು ಸ್ಮಾರಕವಾಗಿ ನಿರ್ಮಿಸಲು ತೀರ್ಮಾನ ಮಾಡಿದ್ದೇವೆ. ಗಾಂಧಿ, ಅಂಬೇಡ್ಕರ್, ಸಂವಿಧಾನ ನಮ್ಮ ಮೂಲ ಮಂತ್ರ ಎಂದರು.

ಶಾಸಕ ಟಿ.ಡಿ.ರಾಜೇಗೌಡ ಮಾತನಾಡಿ, ಬುದ್ಧ, ಬಸವ, ಅಂಬೇಡ್ಕರ್, ನಾರಾಯಣಗುರುವಿನಂತಹ ಮಹಾನ್ ವ್ಯಕ್ತಿಗಳು ಕಟ್ಟಿದ ದೇಶ ಭಾರತ. ನಾಡಗೀತೆ, ರೈತ ಗೀತೆ ಆಶಯದಂತೆ ನಡೆದುಕೊಂಡರೆ ಇಡೀ ಪ್ರಪಂಚ ನಿಬ್ಬೆರಗಾಗಿ ಭಾರತದತ್ತ ನೋಡುವಂತಾಗುತ್ತದೆ ಎಂದರು.

ಯುವ ಕಾಂಗ್ರೆಸ್ ಘಟಕದ ನೂತನ ಪದಾಧಿಕಾರಿಗಳು ಹುದ್ದೆಯ ಜವಾಬ್ದಾರಿ ವಹಿಸಿಕೊಂಡರು. ದ್ವೀತಿಯ ಪಿಯುಸಿಯಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಆಧ್ಯಾತ್ಮಿಕ ಚಿಂತಕ ಲಕ್ಷ್ಮೀಶ್ ಗಬ್ಬಲಡ್ಕ ಪ್ರಧಾನ ಭಾಷಣ ಮಾಡಿದರು.

ಕೆಪಿಸಿಸಿ ಪ್ರಚಾರ ಸಮಿತಿ ಪ್ರಮುಖ ವಕ್ತಾರ ಸುಧೀರ್ ಕುಮಾರ್ ಮುರೊಳ್ಳಿ, ಕೊಪ್ಪ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕುಕ್ಕುಡಿಗೆ ರವೀಂದ್ರ, ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಶ್ರೀಜಿತ್ ಗೌಡ, ತಾಲ್ಲೂಕು ಯುವ ಕಾಂಗ್ರೆಸ್ ಅಧ್ಯಕ್ಷ ಪ್ರದೀಪ್ ಕಲ್ಲೋಳ್ಳಿ, ಕಾಂಗ್ರೆಸ್ ಮುಖಂಡ ಅನಿಲ್ ಹೊಸಕೊಪ್ಪ, ನವೀನ್ ಕರುವಾನೆ, ರಮೇಶ್ ಭಟ್, ಎಂ.ಎಚ್ ನಟರಾಜ್, ರಾಜ್ ಕುಮಾರ್ ಹೆಗ್ಡೆ ಇದ್ದರು.

ರಾಜಕೀಯಕ್ಕಾಗಿ ‘ಹಿಂದೂ’ ಬಳಸುವ ಬಿಜೆಪಿ ಗಾಂಧಿ ಭೇಟಿಕೊಟ್ಟ ಸ್ಥಳ ಸ್ಮಾರಕ ನಿರ್ಮಿಸಲು ತೀರ್ಮಾನ ನೂತನ ಪದಾಧಿಕಾರಿಗಳ ಪದಗ್ರಹಣ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.