ಜಾಂಬೂರಿಯಲ್ಲಿ ಗಿನ್ನಿಸ್ ದಾಖಲೆ ಸಾಧ್ಯತೆ

ಮುಡಿಪು: ಮೂಡುಬಿದಿರೆಯಲ್ಲಿ ನಡೆಯಲಿರುವ ‘ಜಾಂಬೂರಿ’ಯ ಪೂರ್ವಸಿದ್ಧತೆ ಕುರಿತು ಉಳ್ಳಾಲ ತಾಲ್ಲೂಕು ವ್ಯಾಪ್ತಿಗೆ ಸಂಬಂಧಿಸಿ ಸಮಾಲೋಚನಾ ಸಭೆ ಇತ್ತೀಚೆಗೆ ಅಸೈಗೋಳಿಯ ಬಂಟರ ಭವನದಲ್ಲಿ ನಡೆಯಿತು.
ಶಾಸಕ ಯು. ಟಿ. ಖಾದರ್ ಮಾತನಾಡಿ, ‘ಜಾಂಬೂರಿಯು ಕರಾವಳಿ ಗೌರವನ್ನು ಹೆಚ್ಚಿಸುವ ಕಾರ್ಯಕ್ರಮವಾಗಿದೆ. ಪ್ರಥಮ ಬಾರಿಗೆ ನಮ್ಮ ದೇಶದಲ್ಲಿ ನಡೆತ್ತಿದ್ದು, ಸರ್ವರೂ ಸಹಕಾರ ನೀಡಬೇಕು’ ಎಂದರು.
ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಕರ್ನಾಟಕ ರಾಜ್ಯ ಮುಖ್ಯ ಆಯುಕ್ತ ಪಿ.ಜಿ.ಆರ್ ಸಿಂಧ್ಯಾ ಮಾತನಾಡಿ, ‘ ಮೂಡುಬಿದಿರೆಯ ಜಾಂಬೂರಿಯು ಅಂತರರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಳ್ಳುವುದರಲ್ಲಿ ಎರಡು ಮಾತಿಲ್ಲ’ ಎಂದರು.
ಡಾ. ಮೋಹನ್ ಆಳ್ವ ಮಾತನಾಡಿ, ‘ಈ ಬಾರಿಯ ಜಾಂಬೂರಿಯಲ್ಲಿ ವೈವಿಧ್ಯಮಯ ಕಾರ್ಯಕ್ರಮಗಳಿದ್ದು, ಗಿನ್ನಿಸ್ ದಾಖಲೆ ಆಗುವ ಸಾಧ್ಯತೆ ಇದೆ’ ಎಂದರು
ಜಾಂಬೂರಿ ತಾಲ್ಲೂಕು ಸಮಿತಿ ರಚಿಸಲಾಯಿತು. ಸತೀಶ್ ಕುಂಪಲ ಅವರು ಹೊರೆಕಾಣಿಕೆ ಕುರಿತು ಮಾಹಿತಿ ನೀಡಿದರು.
ಮಂಗಳೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಸುಬ್ರಹ್ಮಣ್ಯ ಯಪಡಿತ್ತಾಯ, ಮಾಜಿ ಸಚಿವ ನಾಗರಾಜ ಶೆಟ್ಟಿ, ಸೈಯದ್ ಮದನಿ ದರ್ಗಾದ ಅಧ್ಯಕ್ಷ ಅಬ್ದುಲ್ ರಶೀದ್, ಪ್ರಮುಖರಾದ ಈಶ್ವರ್, ಚಂದ್ರಹಾಸ್ ಅಡ್ಯಾಂತಾಯ, ಡಾ. ಪ್ರಶಾಂತ್ ಕುಮಾರ್, ಎಂ.ಜಿ ಕಜೆ, ಎಂ.ಎಚ್ ಮಲ್ಲಾರ್, ಜಗದೀಶ್ ಶೆಟ್ಟಿ , ರವೀಂದ್ರ ರೈ, ಜಾಂಬೂರಿ ಉಳ್ಳಾಲ ತಾಲೂಕು ಘಟಕದ ಅಧ್ಯಕ್ಷ ಪ್ರಸಾದ್ ರೈ ಕಲ್ಲಿಮಾರ್, ಪ್ರಚಾರ ಸಮಿತಿ ಮುಖ್ಯಸ್ಥ ತ್ಯಾಗಂ ಹರೇಕಳ ಇದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.