ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಜೆಒಎಸ್‌ಎಸ್‌ಎ ಕೌನ್ಸೆಲಿಂಗ್ ಇಂದಿನಿಂದ

Published 10 ಜೂನ್ 2024, 3:27 IST
Last Updated 10 ಜೂನ್ 2024, 3:27 IST
ಅಕ್ಷರ ಗಾತ್ರ

ಮಂಗಳೂರು: ಐಐಟಿ, ಎನ್ಐಟಿ, ಐಐಎಸ್ಟಿ, ಐಐಐಟಿ ಮತ್ತು ಇತರ ಜಿಎಫ್‌ಟಿ ಪ್ರವೇಶಕ್ಕಾಗಿ ಜಂಟಿ ಸೀಟು ಹಂಚಿಕೆ ಪ್ರಾಧಿಕಾರ (ಜೆಒಎಸ್‌ಎಸ್‌ಎ) ನಡೆಸುವ ಕೌನ್ಸೆಲಿಂಗ್ ಪ್ರಕ್ರಿಯೆ ಇದೇ 10ರಿಂದ ಪ್ರಾರಂಭವಾಗಲಿದೆ.

ಐಐಟಿಗಳಿಗೆ ಜಂಟಿ ಸಮಾಲೋಚನೆ ಮತ್ತು ಸೀಟು ಹಂಚಿಕೆಗಾಗಿ ಕೇಂದ್ರ ಸೀಟು ಹಂಚಿಕೆ ಮಂಡಳಿ (ಸಿಎಸ್ಎಬಿ) ಮತ್ತು ಐಐಟಿಗಳ ಜಂಟಿ ಪ್ರವೇಶ ಮಂಡಳಿ (ಜೆಎಬಿ-ಐಐಟಿ) ಮತ್ತು ಎನ್ಐಟಿ ವ್ಯ‌ವಸ್ಥೆಗಳನ್ನು ಒಳಗೊಂಡ  ಜೆಒಎಸ್ಎಎಯನ್ನು ಶಿಕ್ಷಣ ಸಚಿವಾಲಯ ರಚಿಸಿದೆ. ಇದು 31 ಎನ್ಐಟಿಗಳು, ಐಐಎಸ್‌ಟಿ, 26 ಐಐಐಟಿಗಳು, 3 ಯೋಜನೆ ಮತ್ತು ವಾಸ್ತುಶಿಲ್ಪ ಶಾಲೆಗಳು (ಎಸ್‌ಪಿಎಗಳು) ಮತ್ತು 37 ಜಿಎಫ್‌ಟಿಐಗಳನ್ನು (ಕೇಂದ್ರ / ರಾಜ್ಯ ಸರ್ಕಾರದ ಅನುದಾನಿತ ತಾಂತ್ರಿಕ ಸಂಸ್ಥೆಗಳು) ಒಳಗೊಂಡಿದೆ.

ಎನ್ಐಟಿಕೆ ಸುರತ್ಕಲ್ ಮತ್ತು ಐಐಟಿ ಮದ್ರಾಸ್ (ಜೆಎಬಿ-ಐಐಟಿ) ನೊಂದಿಗೆ 2024ರ ಜಂಟಿ ಸೀಟು ಹಂಚಿಕೆ ಪ್ರಾಧಿಕಾರವು ಜಂಟಿಯಾಗಿ ಸಮನ್ವಯ ಸಾಧಿಸುತ್ತಿದೆ. ಐಐಟಿಗಳಿಗೆ ಸೀಟು ಹಂಚಿಕೆಯು ಅಭ್ಯರ್ಥಿಗಳ ಜೆಇಇ (ಅಡ್ವಾನ್ಸ್ಡ್) ರ‍್ಯಾಂಕ್‌ ಆಧರಿಸಿದೆ. ಆದರೆ ಎನ್ಐಟಿ ಪ್ಲಸ್‌ ವ್ಯವಸ್ಥೆಗೆ ಸೀಟು ಹಂಚಿಕೆಯು ಅಭ್ಯರ್ಥಿಗಳ ಜೆಇಇ (ಮೇನ್‌) ರ‍್ಯಾಂಕ್‌  ಆಧರಿಸಿದೆ. ಜೆಇಇ (ಮೇನ್‌) ಅರ್ಹತೆ ಪಡೆದ ಎಲ್ಲಾ ಅಭ್ಯರ್ಥಿಗಳು ಎನ್ಐಟಿ ಪ್ಲಸ್‌ ವ್ಯವಸ್ಥೆಯಲ್ಲಿ ಭಾಗವಹಿಸಲು ಅರ್ಹರಾಗಿರುತ್ತಾರೆ.

2024ರ ಜೆಇಇ-ಮೇನ್‌ನಲ್ಲಿ ಸುಮಾರು 15 ಲಕ್ಷ ಅಭ್ಯರ್ಥಿಗಳು ಎನ್ಐಟಿ ಪ್ಲಸ್‌  ವ್ಯವಸ್ಥೆಗಾಗಿ ಸುಮಾರು 42 ಸಾವಿರ ಸೀಟುಗಳ ಆಯ್ಕೆ ಪ್ರಕ್ರಿಯೆಯಲ್ಲಿ ಭಾಗವಹಿಸಲು ಅರ್ಹರಾಗಿದ್ದಾರೆ. ವಿವಿಧ ವರ್ಗಗಳಿಗೆ (ಇಡಬ್ಲ್ಯುಎಸ್– ಒಬಿಸಿ-ಎನ್‌ಸಿಎಲ್– ಎಸ್‌ಟಿ– ಎಸ್‌ಟಿ– ಪಿಡಬ್ಲ್ಯುಡಿ) ಸ್ಥಾನಗಳನ್ನು ಕಾಯ್ದಿರಿಸುವುದು ಭಾರತ ಸರ್ಕಾರದ ಮಾನದಂಡಗಳ ಪ್ರಕಾರವಾಗಿದೆ. ಸಂಪೂರ್ಣ ಸೀಟು ಹಂಚಿಕೆ, ಶುಲ್ಕ ಪಾವತಿ ಮತ್ತು ಪ್ರಮಾಣಪತ್ರ ಪರಿಶೀಲನೆ ಪ್ರಕ್ರಿಯೆ ಆನ್ ಲೈನ್ ನಲ್ಲಿ (https://josaa.nic.in) ಲಭ್ಯ.

ಜೂನ್ 10 ರಿಂದ ಪ್ರಾರಂಭವಾಗುವ ಜೋಸಾ ಪೋರ್ಟಲ್ ಮೂಲಕ ಐದು ಸುತ್ತಿನ ಕೌನ್ಸೆಲಿಂಗ್ ನಡೆಸಲಾಗುವುದು. ಅಭ್ಯರ್ಥಿಗಳು ಜೂನ್ 10ರಿಂದ 121 ವಿವಿಧ ಉನ್ನತ ಶಿಕ್ಷಣ ಸಂಸ್ಥೆಗಳಿಂದ ತಮ್ಮ ಆಯ್ಕೆಯ ಕೋರ್ಸ್‌ಗಳಿಗೆ (ಆಯ್ಕೆ-ಭರ್ತಿ) ನೋಂದಣಿಯನ್ನು ಪ್ರಾರಂಭಿಸಬಹುದು. ಜೂನ್ 18ರೊಳಗೆ ತಮ್ಮ ಆಯ್ಕೆಗಳನ್ನು ಲಾಕ್ ಮಾಡಬಹುದು. ಮೊದಲ ಸುತ್ತಿನ ಹಂಚಿಕೆಯನ್ನು ಜೂನ್ 20ರಂದು ಮಾಡಲಾಗುತ್ತದೆ. ಐದು ಸುತ್ತಿನ ಜೋಸಾದ ನಂತರ ಎನ್ಐಟಿ ಪ್ಲಸ್‌ ವ್ಯವಸ್ಥೆಯಲ್ಲಿ ಖಾಲಿ ಉಳಿದಿರುವ ಸ್ಥಾನಗಳನ್ನು ಜುಲೈ 29ರಿಂದ ಪ್ರಾರಂಭವಾಗುವ  ಸಿಎಸ್ಎಬಿ ಎರಡು ವಿಶೇಷ ಸುತ್ತುಗಳ ಮೂಲಕ ಭರ್ತಿ ಮಾಡಲಾಗುತ್ತದೆ. ಸೀಟುಗಳನ್ನು ನವೀಕರಿಸಲು ಬಯಸುವ ಅಭ್ಯರ್ಥಿಗಳು ಮತ್ತು / ಅಥವಾ ವ್ಯವಸ್ಥೆಗೆ ಪ್ರವೇಶಿಸುವ ಹೊಸ ಅಭ್ಯರ್ಥಿಗಳು ಸಿಎಸ್ಎಬಿ ಪೋರ್ಟಲ್ (https://csab.nic.in) ನಲ್ಲಿ ಸಿಎಸ್ಎಬಿ ವಿಶೇಷ ಸುತ್ತುಗಳಿಗೆ ಹೊಸದಾಗಿ ನೋಂದಾಯಿಸಿಕೊಳ್ಳಬೇಕು.

ಜೋಸಾ – ಸಿಎಸ್ಎಬಿ -2024 ಕೌನ್ಸೆಲಿಂಗ್ ಪ್ರಕ್ರಿಯೆಗೆ ಸಹಾಯ ಮಾಡಲು ದೇಶಾದ್ಯಂತ 52 ದಾಖಲೆ ಪರಿಶೀಲನಾ ಕೇಂದ್ರಗಳು (ವಿ.ಸಿಗಳು) ಮತ್ತು ಸಹಾಯ ಕೇಂದ್ರಗಳನ್ನು (ಎಚ್‌ಸಿ) ಸ್ಥಾಪಿಸಲಾಗಿದೆ (ವಿವರ ವೆಬ್‌ಸೈಟ್‌ನಲ್ಲಿದೆ). ಎಲ್ಲಾ ಪಾಲುದಾರರಿಗೆ ಕೌನ್ಸೆಲಿಂಗ್ ಪ್ರಕ್ರಿಯೆಗೆ ಅನುಕೂಲವಾಗುವಂತೆ ಎನ್ ಐಟಿಕೆ ಸುರತ್ಕಲ್ ನಲ್ಲಿರುವ ಸಿಎಸ್ ಎಬಿ ಪ್ರಧಾನ ಕಚೇರಿಯಲ್ಲಿ 10 ಭಾರತೀಯ ಭಾಷೆಗಳ ಬಹುಭಾಷಾ ಸಹಾಯ ಕೇಂದ್ರ ಸ್ಥಾಪಿಸಲಾಗಿದೆ. 

ಅಭ್ಯರ್ಥಿಗಳು ಮತ್ತು ಪೋಷಕರು  ಜೆಒಎಸ್ಎಸ್‌ಎ ಅಥವಾ ಸಿಎಸ್ಎಬಿ -2024 ವೆಬ್‌ಸೈಟ್ ಪರಿಶೀಲಿಸಬೇಕು ಎಂದು ಎನ್‌ಐಟಿಕೆ ಪ್ರಕಟಣೆಯಲ್ಲಿ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT