ಮಂಗಳೂರು: ಕಂಬಳ ಕರಾವಳಿಯ ಜನಪದ ಕ್ರೀಡೆ. ಆದರೆ, ಕಂಬಳ ಕೇವಲ ಕ್ರೀಡೆಯಾಗಿ ಉಳಿಯಬಾರದು. ಅದು ನಮ್ಮ ತುಳುನಾಡಿನ ಸಂಸ್ಕೃತಿಯನ್ನು ಬಿಂಬಿಸುವ ಉತ್ಸವ ಆಗಬೇಕು ಎಂದು ಬಿಜೆಪಿ ರಾಜ್ಯ ವಕ್ತಾರ ಗಣೇಶ್ ಕಾರ್ಣಿಕ್ ಹೇಳಿದರು.

ನಗರದ ಪತ್ತುಮುಡಿ ಸೌಧದಲ್ಲಿ ಶನಿವಾರ ನಡೆದ 4ನೇ ವರ್ಷದ ಮಂಗಳೂರು ಕಂಬಳದ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.

ಪ್ರವಾಸಿಗರನ್ನು ಆಕರ್ಷಿಸುವ ನೆಲೆಯಲ್ಲಿ ಕಂಬಳವನ್ನು ಉತ್ಸವದ ರೀತಿಯಲ್ಲಿ ನಡೆಸಬೇಕು. ಮಂಗಳೂರು ನಗರದಲ್ಲಿ ನಡೆಯುತ್ತಿರುವ ಏಕೈಕ ಕಂಬಳ ಇದಾಗಿದ್ದು, ನಗರ ವ್ಯಾಪ್ತಿಯ ಜನರ ಪಾಲಿಗೆ ಇದು ತುಳುವರ ಉತ್ಸವದ ರೀತಿ ನಡೆಯಬೇಕು. ಕಂಬಳದ ಜೊತೆಗೆ ತುಳುನಾಡಿನ ಸಂಸ್ಕೃತಿ, ಪರಂಪರೆ ಬಿಂಬಿಸುವ ಪ್ರದರ್ಶನಗಳು, ಸ್ಪರ್ಧೆಗಳನ್ನು ಹಮ್ಮಿಕೊಂಡರೆ, ಎಲ್ಲ ವಯೋಮಾನದ ಜನರು ಭಾಗವಹಿಸಲು ಪ್ರೇರಣೆ ಸಿಗುತ್ತದೆ. ಕಂಬಳವೂ ಆಕರ್ಷಣೆ ಪಡೆಯುತ್ತದೆ. ಟೂರಿಸಂ ಆಕರ್ಷಿಸುವ ನೆಲೆಯಲ್ಲಿ ಇಂತಹ ಉತ್ಸವಗಳು ಆಯೋಜನೆ ಆಗಬೇಕು ಎಂದು ಸಲಹೆ ನೀಡಿದರು.

ಜಿಲ್ಲಾ ಕಂಬಳ ಸಮಿತಿಯ ಅಧ್ಯಕ್ಷ ಪಿ.ಆರ್. ಶೆಟ್ಟಿ ಪೊಯ್ಯೇಲು ಮಾತನಾಡಿ, ಕಳೆದ ಬಾರಿ ಕಂಬಳಕ್ಕೆ ನಿಷೇಧದ ತೂಗುಗತ್ತಿ ಬಂದಾಗ, ಜಿಲ್ಲೆಯ ರಾಜಕಾರಣಿಗಳು ಪಕ್ಷಭೇದ ಮರೆತು ಬೆಂಬಲ ನೀಡಿದ್ದರು. ಈ ಬಾರಿಯೂ ಕೋವಿಡ್ ಕಾರಣದಿಂದ ಕಂಬಳ ಅಸಾಧ್ಯ ಎನ್ನುವಾಗ ಅಧಿಕಾರಿಗಳ ಜೊತೆ ಮಾತುಕತೆ ನಡೆಸಿ, ಕಂಬಳ ನಡೆಯುವಂತಾಗಲು ಕರಾವಳಿಯ ರಾಜಕೀಯ ಮುಖಂಡರು ಸಹಕಾರ ನೀಡಿದ್ದಾರೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಮಂಗಳೂರು ಕಂಬಳ ಸಮಿತಿ ಅಧ್ಯಕ್ಷ ಕ್ಯಾ. ಬೃಜೇಶ್ ಚೌಟ ಮಾತನಾಡಿ, ಮಂಗಳೂರು ಕಂಬಳವನ್ನು ಸಿಗ್ನೇಚರ್ ಈವೆಂಟ್ ಆಗಿ ಪರಿವರ್ತಿಸಲು ಎಲ್ಲರ ಸಹಕಾರವೂ ಬೇಕು. ಮಂಗಳೂರಿನ ಯುವಕರೇ ಸೇರಿಕೊಂಡು ನಡೆಸುತ್ತಿರುವ ಈ ಕಂಬವನ್ನು ತುಳುವರ ಉತ್ಸವ ರೀತಿಯಾಗಿ ಪರಿವರ್ತಿಸಲು ಕಂಬಳ ಅಭಿಮಾನಿಗಳ ಜೊತೆಗೆ ಸರ್ಕಾರ, ಸಾರ್ವಜನಿಕರು, ವಿವಿಧ ಸಂಘಟನೆಗಳ ಬೆಂಬಲ ಬೇಕಾಗುತ್ತದೆ ಎಂದು ಹೇಳಿದರು.

ಜಿಲ್ಲಾ ಕಂಬಳ ಸಮಿತಿಯ ಪ್ರಧಾನ ಕಾರ್ಯದರ್ಶಿ ವಿಜಯಕುಮಾರ್ ಕಂಗಿನಮನೆ, ಕೇಂದ್ರ ಸರ್ಕಾರದ ಸಾಮಾಜಿಕ ಹಕ್ಕು ಸಚಿವಾಲಯದ ಸದಸ್ಯ ಭಾಸ್ಕರದಾಸ್ ಎಕ್ಕಾರು, ಕರ್ನಾಟಕ ಕ್ರೈಸ್ತ ನಿಗಮದ ಅಧ್ಯಕ್ಷ ಜೋಯಲ್ ಡಿಸೋಜ, ಪಾಲಿಕೆ ಸದಸ್ಯರಾದ ರಾಧಾಕೃಷ್ಣ , ಕಿರಣ್ ಕುಮಾರ್ ಕೋಡಿಕಲ್, ಸಂದೀಪ್ ಗರೋಡಿ, ಭರತ್ ಕುಮಾರ್, ಕಂಬಳ ಸಮಿತಿಯ ಕಾರ್ಯಾಧ್ಯಕ್ಷ ನಂದನ್ ಮಲ್ಯ, ಪ್ರಧಾನ ಕಾರ್ಯದರ್ಶಿ ಸುಜಿತ್ ಪ್ರತಾಪ್, ಸಂಚಾಲಕ ಸಚಿನ್ ಶೆಟ್ಟಿ, ಖಜಾಂಚಿ ಪ್ರೀತಂ ರೈ, ಸಮಿತಿ ಸದಸ್ಯರು ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.