ಮಂಗಳವಾರ, ಜನವರಿ 31, 2023
18 °C
ಬಿದ್ದರೂ ಛಲ ಬಿಡದ ಓಟಗಾರ ಬಂಬ್ರಾಣಬೈಲು ವಂದಿತ್ ಶೆಟ್ಟಿ

ಮೂಲ್ಕಿ ಸೀಮೆಯ ಅರಸು ಕಂಬಳದ ಫಲಿತಾಂಶ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮೂಲ್ಕಿ: ಇತಿಹಾಸ ಪ್ರಸಿದ್ಧ ಮೂಲ್ಕಿ ಸೀಮೆಯ ‘ಮೂಡಾಯಿ– ಪಡ್ಡಾಯಿ’ ಜೋಡುಕರೆ ಅರಸು ಕಂಬಳ ಕೂಟದಲ್ಲಿ ಒಟ್ಟು 150 ಜೊತೆ ಕೋಣಗಳು ಭಾಗವಹಿಸಿದ್ದವು.

ಕನೆಹಲಗೆಯಲ್ಲಿ 5 ಜೊತೆ, ಅಡ್ಡಹಲಗೆ 7, ಹಗ್ಗ ಹಿರಿಯ 15, ನೇಗಿಲು ಹಿರಿಯ 26, ಹಗ್ಗ ಕಿರಿಯ 17, ನೇಗಿಲು ಕಿರಿಯ 80 ಜೊತೆ ಕೋಣಗಳು ಭಾಗವಹಿಸಿದ್ದವು.

ಬಿದ್ದರೂ ಛಲ ಬಿಡದ ಓಟಗಾರ: ಹಗ್ಗ ಹಿರಿಯ ವಿಭಾಗದ ಫೈನಲ್‌ ಸ್ಪರ್ಧೆಯಲ್ಲಿ ನಂದಳಿಕೆ ಶ್ರೀಕಾಂತ್ ಭಟ್ ಅವರ ಕೋಣಗಳನ್ನು ಬಂಬ್ರಾಣಬೈಲು ವಂದಿತ್ ಶೆಟ್ಟಿ ಅವರು ಓಡಿಸುತ್ತಿರುವಾಗ ಕರೆಯಲ್ಲಿ ಆಯಾ ತಪ್ಪಿ ಬಿದ್ದರೂ ಹಗ್ಗವನ್ನು ಬಿಡದೆ ಜಾರಿಕೊಂಡು ಬಂದು ಪ್ರಥಮ ಸ್ಥಾನವನ್ನು ಪಡೆದುಕೊಂಡರು. ರೋಚಕ ದೃಶ್ಯ ಎಲ್ಲರನ್ನೂ ಕಣ್ತುಂಬಿಕೊಂಡರಲ್ಲದೇ ಹರ್ಷೋದ್ಘಾರದಿಂದ ಕರಾಡತಾನ ನಡೆಸಲಾಯಿತು. ಬಹುಮಾನ ವಿತರಣೆಯಲ್ಲಿ ವಿಶೇಷವಾಗಿ ಗೌರವಿಸಲಾಯಿತು.

ಸೆನ್ಸರ್ ಎಡವಟ್ಟು: ಸ್ಪರ್ಧೆಯೊಂದರಲ್ಲಿ ಕೋಣಗಳ ಫಲಿತಾಂಶ ನೀಡುವಾಗ ಸೆನ್ಸರ್‌ನ ತಾಂತ್ರಿಕ ದೋಷದಿಂದಾಗಿ ಕೆಲ ಕಾಲ ಗೊಂದಲ ಸೃಷ್ಟಿಯಾಯಿತು. ಸೆನ್ಸರ್‌ ತೀರ್ಪಿಗೆ ಕೋಣದ ಯಜಮಾನರೊಬ್ಬರು ಆಕ್ಷೇಪ ವ್ಯಕ್ತಪಡಿಸಿದ್ದರಿಂದ ವಿಡಿಯೊ ವೀಕ್ಷಣೆ ಮಾಡಲಾಯಿತು. ಆಗ ಸೆನ್ಸರ್ ಎಡವಟ್ಟು ಮೇಲ್ನೋಟಕ್ಕೆ ತಿಳಿದುಬಂತು. ತೀರ್ಪುಗಾರರ ಘೋಷಣೆಗೆ ಪ್ರಾಮುಖ್ಯ ನೀಡಿ ಎರಡೂ ಕಡೆಯವರನ್ನು ಸಮಿತಿಯವರು ಹಾಗೂ ತೀರ್ಪುಗಾರರ ತಂಡವು ಸಮಾಧಾನ ಪಡಿಸಿ, ಸೆನ್ಸರ್ ತಂಡಕ್ಕೆ ಎಚ್ಚರಿಕೆ ನೀಡಿದ ಘಟನೆ ನಡೆಯಿತು.

ಫಲಿತಾಂಶ ವಿವರ:
ಕನೆಹಲಗೆ: (ನೀರು ನೋಡಿ ಬಹುಮಾನ)

ಕಾಂತಾವರ ಬೇಲಾಡಿ ಬಾವ ಅಶೋಕ್ ಶೆಟ್ಟಿ (ಪ್ರ)
ಹಲಗೆ ಮುಟ್ಟಿದವರು: ತೆಕ್ಕಟ್ಟೆ ಸುಧೀರ್ ದೇವಾಡಿಗ

ಬಾರ್ಕೂರು ಶಾಂತಾರಾಮ ಶೆಟ್ಟಿ (ದ್ವಿ)
ಹಲಗೆ ಮುಟ್ಟಿದವರು: ಬೈಂದೂರು ರಾಘವೇಂದ್ರ ಪೂಜಾರಿ

ಅಡ್ಡ ಹಲಗೆ: ಮೋರ್ಲ ಪ್ರಾಪ್ತಿ ಗಿರೀಶ್ ಆಳ್ವ (ಪ್ರ)
ಹಲಗೆ ಮುಟ್ಟಿದವರು: ಮುಳಿಕಾರು ಕೆವುಡೇಲು ಅಣ್ಣಿ ದೇವಾಡಿಗ

ಮೇರಮಜಲ್ ಮಿಷನ್ ಗೋಡ್ವಿನ್ ವಾಸ್ (ದ್ವಿ)
ಹಲಗೆ ಮುಟ್ಟಿದವರು: ಬೈಂದೂರು ಮಹೇಶ್ ಪೂಜಾರಿ

ಹಗ್ಗ ಹಿರಿಯ: ನಂದಳಿಕೆ ಶ್ರೀಕಾಂತ್ ಭಟ್ ‘ಬಿ’ (ಪ್ರ)
ಓಡಿಸಿದವರು: ಬಂಬ್ರಾಣ ಬೈಲು ವಂದಿತ್ ಶೆಟ್ಟಿ

ಪದವು ಕಾನಡ್ಕ ಫ್ಲೇವಿ ಡಿಸೋಜ ‘ಬಿ’ (ದ್ವಿ)
ಓಡಿಸಿದವರು: ಬೈಂದೂರು ವಿವೇಕ್ ಪೂಜಾರಿ

ಹಗ್ಗ ಕಿರಿಯ: ಕೊಳಕೆ ಇರ್ವತ್ತೂರು ಭಾಸ್ಕರ ಎಸ್ ಕೋಟ್ಯಾನ್ (ಪ್ರ)
ಓಡಿಸಿದವರು: ಕೊಳಕೆ ಇರ್ವತ್ತೂರು ಆನಂದ್

ನಿಟ್ಟೆ ಪರಪ್ಪಾಡಿ ಸುರೇಶ್ ಕೋಟ್ಯಾನ್ (ದ್ವಿ)
ಓಡಿಸಿದವರು: ಅತ್ತೂರು ಕೋಡಂಗೆ ಸುಧೀರ್ ಸಾಲ್ಯಾನ್

ನೇಗಿಲು ಹಿರಿಯ: ಬೆಳ್ಳಿಪ್ಪಾಡಿ ಕೈಪ ಕೇಶವ ಮಂಕು ಭಂಡಾರಿ ‘ಬಿ’ (ಪ್ರ)
ಓಡಿಸಿದವರು: ಮಿಜಾರು ಅಶ್ವಥಪುರ ಶ್ರೀನಿವಾಸ ಗೌಡ

ಮೂಡಬಿದ್ರಿ ನ್ಯೂ ಪಡಿವಾಳ್ಸ್ ಹಾರ್ದಿಕ್ ಹರ್ಷವರ್ಧನ ಪಡಿವಾಳ್ (ದ್ವಿ)
ಓಡಿಸಿದವರು: ಬೈಂದೂರು ವಿವೇಕ್ ಪೂಜಾರಿ

ನೇಗಿಲು ಕಿರಿಯ: ವರಪಾಡಿ ಬಡಗುಮನೆ ದಿವಾಕರ ಚೌಟ (ಪ್ರ)
ಓಡಿಸಿದವರು: ಪಟ್ಟೆ ಗುರುಚರಣ್

ಕಾರ್ಕಳ ಗುಂಡ್ಯಡ್ಕ ದುರ್ಗಾಪ್ರಸಾದ್ ನಿಲಯ ಪ್ರಶಾಂತ್ ಅನ್ನು ಶೆಟ್ಟಿ ‘ಎ’ (ದ್ವಿ)
ಓಡಿಸಿದವರು: ಭಟ್ಕಳ ಶಂಕರ್

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.