ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಂಟ್ವಾಳ: ಮಾರ್ಚ್‌ 2ರಂದು ‘ಮೂಡೂರು-ಪಡೂರು’ ಕಂಬಳ

ಅತಿಥಿಗಳಿಗೆ ಪ್ರತ್ಯೇಕ ಗ್ಯಾಲರಿ ಅಳವಡಿಕೆಗೆ ಆದ್ಯತೆ: ಮಾಜಿ ಸಚಿವ ರೈ
Published 27 ಫೆಬ್ರುವರಿ 2024, 12:36 IST
Last Updated 27 ಫೆಬ್ರುವರಿ 2024, 12:36 IST
ಅಕ್ಷರ ಗಾತ್ರ

ಬಂಟ್ವಾಳ: ಇಲ್ಲಿನ ನಾವೂರು ಗ್ರಾಮದ ಕೂಡಿಬೈಲು ಎಂಬಲ್ಲಿ ‘ಬಂಟ್ವಾಳ ಕಂಬಳ’ ಎಂದೇ ಗುರುತಿಸಿಕೊಂಡ 13ನೇ ವರ್ಷದ ಹೊನಲು ಬೆಳಕಿನ ‘ಮೂಡೂರು-ಪಡೂರು’ ಜೋಡುಕರೆ ಬಯಲು ಕಂಬಳವು ಮಾರ್ಚ್‌ 2ರಂದು ಹಲವು ನಡೆಯಲಿದೆ ಎಂದು ಕಂಬಳ ಸಮಿತಿ ಗೌರವಾಧ್ಯಕ್ಷ, ಮಾಜಿ ಸಚಿವ ಬಿ.ರಮಾನಾಥ ರೈ ತಿಳಿಸಿದರು.

ಇಲ್ಲಿನ ಬಿ.ಸಿ.ರೋಡಿನಲ್ಲಿ ಮಂಗಳವಾರ ಆಮಂತ್ರಣಪತ್ರ ಬಿಡುಗಡೆ ಅವರು ಮಾತನಾಡಿದರು.

ನಾವೂರು ಗ್ರಾಮದ ಕೂಡಿಬೈಲು ಗದ್ದೆಯಲ್ಲಿ ಮೂರನೇ ವರ್ಷ ನಡೆಯಲಿರುವ ಕಂಬಳದಲ್ಲಿ ಅತಿಥಿಗಳಿಗೆ ಪ್ರತ್ಯೇಕ ‘ವಿಐಪಿ ಗ್ಯಾಲರಿ’ ಅಳವಡಿಸಲು ಚಿಂತನೆ ನಡೆಸಲಾಗಿದೆ. ಈ ಬಾರಿ ಸೋಲೂರು ಆರ್ಯ ಈಡಿಗ ಮಹಾ ಸಂಸ್ಥಾನದ ಪೀಠಾಧಿಪತಿ ವಿಖ್ಯಾತಾನಂದ ಸ್ವಾಮೀಜಿ, ಅಳದಂಗಡಿ ಅರಮನೆ ತಿಮ್ಮಣ್ಣರಸ ಡಾ.ಪದ್ಮಪ್ರಸಾದ ಅಜಿಲ, ಅಲ್ಲಿಪಾದೆ ಸಂತ ಅಂತೋನಿ ಚರ್ಚ್‌ ಧರ್ಮಗುರು ಫೆಡ್ರಿಕ್ ಮೊಂತೆರೊ ಕಂಬಳ ಉದ್ಘಾಟಿಸುವರು ಎಂದು ಅವರು ಮಾಹಿತಿ ನೀಡಿದರು

ವಿಧಾನಸಭಾಧ್ಯಕ್ಷ ಯು.ಟಿ.ಖಾದರ್, ಸಚಿವರಾದ ಸಚಿವ ದಿನೇಶ ಗುಂಡೂರಾವ್, ಜಿ.ಪರಮೇಶ್ವರ, ರಾಮಲಿಂಗಾ ರೆಡ್ಡಿ, ಎಂ.ಬಿ.ಪಾಟೀಲ್, ಈಶ್ವರ ಬಿ.ಖಂಡ್ರೆ, ಡಾ.ಎಂ.ಸಿ.ಸುಧಾಕರ್, ಡಾ.ಶರಣ ಪ್ರಕಾಶ್ ಪಾಟೀಲ, ಮಂಕಾಳ ಎಸ್.ವೈದ್ಯ, ಕೆ.ಜೆ.ಜಾರ್ಜ್‌, ಕೆ.ಎನ್.ರಾಜಣ್ಣ, ಪ್ರಿಯಾಂಕ್‌ ಖರ್ಗೆ, ಎಸ್.ಎಸ್.ಮಲ್ಲಿಕಾರ್ಜುನ್‌, ಮುಖ್ಯಸಚೇತಕ ಸಲೀಂ ಅಹ್ಮದ್, ಸಂಸದ ಡಿ.ಕೆ.ಸುರೇಶ್, ಬಿಡಿಎ ಅಧ್ಯಕ್ಷ ಎನ್.ಎ.ಹ್ಯಾರಿಸ್, ಇಂಧನ ನಿಗಮ ಅಧ್ಯಕ್ಷ ಟಿ.ಡಿ.ರಾಜೇಗೌಡ, ಮುಖ್ಯಮಂತ್ರಿಯ ರಾಜಕೀಯ ಕಾರ್ಯದರ್ಶಿ ಕೆ.ಗೋವಿಂದ ರಾಜ್, ರಾಜ್ಯಸಭಾ ಸದಸ್ಯ ನಾಸಿರ್ ಹುಸೇನ್, ಜಿಲ್ಲಾ ಕಂಬಳ ಸಮಿತಿ ಅಧ್ಯಕ್ಷ ದೇವಿಪ್ರಸಾದ್ ಶೆಟ್ಟಿ ಐಕಳಬಾವ ಭಾಗವಹಿಸುವರು ಎಂದು ಅವರು ಮಾಹಿತಿ ನೀಡಿದರು.

‌ಎರಡು ಪವನ್ ಚಿನ್ನ ಬಹುಮಾನ:

ಈ ಬಾರಿ ಹಗ್ಗ ಹಿರಿಯ ಮತ್ತು ನೇಗಿಲು ಹಿರಿಯ ವಿಭಾಗದಲ್ಲಿ ಪ್ರಥಮ ಸ್ಥಾನ ಗೆದ್ದ ಕೋಣಗಳ ಮಾಲೀಕರಿಗೆ ಎರಡು ಪವನ್ ಚಿನ್ನದ ಪದಕ ಮತ್ತು ದ್ವಿತೀಯ ಸ್ಥಾನಕ್ಕೆ ಒಂದು ಪವನ್ ಚಿನ್ನದ ಪದಕ ನೀಡಲಾಗುವುದು ಎಂದು ಸಮಿತಿ ಪ್ರಧಾನ ಕಾರ್ಯದರ್ಶಿ ರಾಜೀವ ಶೆಟ್ಟಿ ಎಡ್ತೂರು ತಿಳಿಸಿದರು.

ಕಂಬಳ ಸಮಿತಿ ಅಧ್ಯಕ್ಷ ಪಿಯೂಸ್ ಎಲ್.ರಾಡ್ರಿಗಸ್, ಸಂಚಾಲಕ ಬಿ.ಪದ್ಮಶೇಖರ ಜೈನ್, ಕಾರ್ಯಾಧ್ಯಕ್ಷ ಚಂದ್ರಪ್ರಕಾಶ್ ಶೆಟ್ಟಿ, ಕೋಶಾಧಿಕಾರಿ ಫಿಲಿಪ್ ಫ್ರಾಂಕ್, ಉಪಾಧ್ಯಕ್ಷರಾದ ಬೇಬಿ ಕುಂದರ್, ಸುದೀಪ್ ಕುಮಾರ್ ಶೆಟ್ಟಿ, ಸುದರ್ಶನ್ ಜೈನ್, ಕೆ.ಮಾಯಿಲಪ್ಪ ಸಾಲ್ಯಾನ್, ಎಂ.ಎಸ್.ಮಹಮ್ಮದ್, ಪ್ರಮುಖರಾದ ರಾಜೇಶ್‌ ರಾಡ್ರಿಗಸ್, ಸುಭಾಶ್ಚಂದ್ರ ರೈ ಕುಳಾಲು, ಪ್ರವೀಣ ರಾಡ್ರಿಗಸ್, ಶಬೀರ್ ಸಿದ್ಧಕಟ್ಟೆ, ಜನಾರ್ದನ ಚೆಂಡ್ತಿಮಾರ್, ಉಮೇಶ ಕುಲಾಲ್, ಸಂದೇಶ ಶೆಟ್ಟಿ, ಪ್ರಶಾಂತ್ ಕುಲಾಲ್, ಪ್ರಕಾಶ ಆಳ್ವ, ಲೆಸ್ಟರ್ ರಾಡ್ರಿಗಸ್, ವೆಂಕಪ್ಪ ಪೂಜಾರಿ, ಮಂಜುಳಾ ಕುಶಲ, ಸೀತಾರಾಮ ಶಾಂತಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT