ಶುಕ್ರವಾರ, ಫೆಬ್ರವರಿ 3, 2023
25 °C
ಪ್ರಸಕ್ತ ಋತುವಿನ ಪ್ರಥಮ ಕಂಬಳದಲ್ಲಿ 214 ಜೊತೆ ಕೋಣಗಳು ಭಾಗಿ

ಕಕ್ಯಪದವು: 10ನೇ ವರ್ಷದ ಸತ್ಯ-ಧರ್ಮ ಜೋಡುಕರೆ ಕಂಬಳದ ಫಲಿತಾಂಶ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬಂಟ್ವಾಳ: ಇಲ್ಲಿನ ಉಳಿ ಗ್ರಾಮದ ಕಕ್ಯಪದವು ಮೈರ ಬರ್ಕೆಜಾಲು ಎಂಬಲ್ಲಿ ರಾಮಾಂಜನೇಯ ಗೆಳೆಯರ ಬಳಗದ ವತಿಯಿಂದ ಶನಿವಾರ ಆರಂಭಗೊಂಡ 10ನೇ ವರ್ಷದ ಹೊನಲು ಬೆಳಕಿನ ‘ಸತ್ಯ-ಧರ್ಮ’ ಜೋಡುಕರೆ ಬಯಲು ಕಂಬಳ ಭಾನುವಾರ ರಾತ್ರಿ ಸಮಾರೋಪಗೊಂಡಿತು.

ಈ ವರ್ಷದ ಪ್ರಥಮ ಕಂಬಳದಲ್ಲಿ ಒಟ್ಟು 214 ಜೊತೆ ಕೋಣಗಳು ಭಾಗವಹಿಸಿ ಗಮನ ಸೆಳೆದಿದೆ. ಕನೆಹಲಗೆಯಲ್ಲಿ 2 ಜೊತೆ, ಅಡ್ಡಹಲಗೆ 9, ಹಗ್ಗ ಹಿರಿಯ 19, ನೇಗಿಲು ಹಿರಿಯ 31, ಹಗ್ಗ ಕಿರಿಯ 26, ನೇಗಿಲು ಕಿರಿಯ 75, ನೇಗಿಲು ಸಬ್‌ ಸಬ್ ಜೂನಿಯರ್ ವಿಭಾಗದಲ್ಲಿ 52 ಜೊತೆ ಕೋಣಗಳು ಭಾಗವಹಿಸಿದ್ದವು.

ಫಲಿತಾಂಶ:

ಕನೆಹಲಗೆ: ಎರಡು ಜೊತೆ ಸಮಾನ ಬಹುಮಾನ ಹಂಚಿಕೊಂಡಿದೆ. ಬೇಲಾಡಿ ಬಾವ ಅಶೋಕ್ ಶೆಟ್ಟಿ, ಹಲಗೆ ಮುಟ್ಟಿದವರು– ತೆಕ್ಕಟ್ಟೆ ಸುಧೀರ್ ದೇವಾಡಿಗ ಮತ್ತು ವಾಮಂಜೂರು ತಿರುವೈಲುಗುತ್ತು ನವೀನ್ ಚಂದ್ರ ಆಳ್ವ ಹಲಗೆ ಮುಟ್ಟಿದವರು– ಬೈಂದೂರು ಭಾಸ್ಕರ ದೇವಾಡಿಗ

ಅಡ್ಡ ಹಲಗೆ: ನಾರಾವಿ ಯುವರಾಜ್ ಜೈನ್ (ಪ್ರ), ಹಲಗೆ ಮುಟ್ಟಿದವರು– ಭಟ್ಕಳ ಹರೀಶ್. ಪೆರಿಯಾವು ಗುತ್ತು ಸತೀಶ್ ಗಟ್ಟಿ (ದ್ವಿ), ಹಲಗೆ ಮುಟ್ಟಿದವರು– ಮುಳಿಕಾರು ಕೆವುಡೇಲು ಅಣ್ಣಿ ದೇವಾಡಿಗ

ಹಗ್ಗ ಹಿರಿಯ: ಕೊಳಚ್ಚೂರು ಕೊಂಡೊಟ್ಟು ಸುಕುಮಾರ್ ಶೆಟ್ಟಿ ‘ಎ‘ (ಪ್ರ), ಓಡಿಸಿದವರು– ಬಜಗೋಳಿ ಜೋಗಿಬೆಟ್ಟು ನಿಶಾಂತ್ ಶೆಟ್ಟಿ. ರಾಯಿ ಸಿತಲ ಅಗರಿ ರೂಪ ರಾಜೇಶ್ ಶೆಟ್ಟಿ ‘ಎ’ (ದ್ವಿ), ಓಡಿಸಿದವರು– ಬೈಂದೂರ್ ಹರೀಶ್

ಹಗ್ಗ ಕಿರಿಯ: ಕೊಳಕೆ ಇರ್ವತ್ತೂರು ಭಾಸ್ಕರ ಕೋಟ್ಯಾನ್ (ಪ್ರ), ಓಡಿಸಿದವರು– ಕೊಳಕೆ ಇರ್ವತ್ತೂರು ಆನಂದ್. ಬೆಳುವಾಯಿ ಪುತ್ತಿಗೆ ಪೆರೋಡಿ ಗುತ್ತು ತಾನಾಜಿ ಬಿ. ಶೆಟ್ಟಿ (ದ್ವಿ), ಓಡಿಸಿದವರು– ಮರೋಡಿ ಶ್ರೀಧರ್

ನೇಗಿಲು ಹಿರಿಯ: ಬೆಳ್ಳಿಪ್ಪಾಡಿ ಕೈಪ ಕೇಶವ ಮಂಕು ಭಂಡಾರಿ ‘ಬಿ’ (ಪ್ರ), ಓಡಿಸಿದವರು– ಮಿಜಾರು ಅಶ್ವತ್ಥಪುರ ಶ್ರೀನಿವಾಸ ಗೌಡ. ಕನಡ್ತ್ಯಾರ್ ಕೃಷ್ಣ ಶೆಟ್ಟಿ (ದ್ವಿ), ಓಡಿಸಿದವರು– ಕಾವೂರ್ ತೋಟ ಸುದರ್ಶನ್

ನೇಗಿಲು ಕಿರಿಯ: ಜೈ ತುಳುನಾಡ್ ಕಕ್ಯಪದವು ಪುನ್ಕೆದಡಿ ರಾಮಯ್ಯ ಭಂಡಾರಿ (ಪ್ರ), ಓಡಿಸಿದವರು– ಕಕ್ಯಪದವು ಪೆಂರ್ಗಾಲು ಕೃತಿಕ್. ಪಣೋಲಿಬೈಲು ಭಂಡಾರಮನೆ ಶಿವಾನಂದ ಕುಲಾಲ್ (ದ್ವಿ), ಓಡಿಸಿದವರು– ಪೆರಿಂಜೆ ಪ್ರಮೋದ್

ನೇಗಿಲು ಸಬ್ ಜೂನಿಯರ್: ಮರೋಡಿ ಕೆಳಗಿನಮನೆ ಕೃತೇಶ್ ಅಣ್ಣಿ ಪೂಜಾರಿ (ಪ್ರ), ಓಡಿಸಿದವರು– ಬೈಂದೂರು ವಿಶ್ವನಾಥ ದೇವಾಡಿಗ. ಭಟ್ಕಳ ಎಚ್.ಎನ್. ನಿವಾಸ ಪಿನ್ನುಪಾಲ್ (ದ್ವಿ) ಓಡಿಸಿದವರು– ಭಟ್ಕಳ ವಿನೋದ್

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು