ಮಂಗಳವಾರ, 6 ಜನವರಿ 2026
×
ADVERTISEMENT
ADVERTISEMENT

ಕಂಬಳ: ಕರೆಯಾಚೆ ಕೆಸರೆರಚಾಟ ನಿಲ್ಲುವ ಹಂಬಲ

ಮಂಗಳೂರಿನಲ್ಲಿ ನಿರ್ಮಾಣವಾದ ಅಹಿತಕರ ಪ್ರಸಂಗ ತಾತ್ಕಾಲಿಕ ಶಮನ; ಶಿಸ್ತು ಮೂಡಿಸುವ ಕ್ರಮದ ಆಶಯ
Published : 5 ಜನವರಿ 2026, 6:48 IST
Last Updated : 5 ಜನವರಿ 2026, 6:48 IST
ಫಾಲೋ ಮಾಡಿ
Comments
ಕಂಬಳವೆಂಬ ಜಾತ್ರೆಯಲ್ಲಿ ಗೊಂದಲಗಳು ಇಲ್ಲದಾಗಲಿ ಎಂಬುದು ಸರ್ವರ ಆಶಯ

ಕಂಬಳವೆಂಬ ಜಾತ್ರೆಯಲ್ಲಿ ಗೊಂದಲಗಳು ಇಲ್ಲದಾಗಲಿ ಎಂಬುದು ಸರ್ವರ ಆಶಯ

–ಪ್ರಜಾವಾಣಿ ಚಿತ್ರ ಫಕ್ರುದ್ದೀನ್ ಎಚ್

ಕಂಬಳದ ಕರೆಯ ಕೆಸರಿನಿಂದ ಚಿಮ್ಮುವ ನೀರಿಗೆ ಸೊಬಗಿದೆ. ಆದರೆ ಹೊರೆಗೆ ಕೆಸರೆರಚಾಟ ಬೇಡ ಎಂಬುದು ಕಂಬಳ ಪ್ರಿಯರ ಬಯಕೆ 
ಕಂಬಳದ ಕರೆಯ ಕೆಸರಿನಿಂದ ಚಿಮ್ಮುವ ನೀರಿಗೆ ಸೊಬಗಿದೆ. ಆದರೆ ಹೊರೆಗೆ ಕೆಸರೆರಚಾಟ ಬೇಡ ಎಂಬುದು ಕಂಬಳ ಪ್ರಿಯರ ಬಯಕೆ 
ನಾನು ಕಂಬಳದಲ್ಲಿ ಶಿಸ್ತು ಮೂಡಿಸಲು ನಿರಂತರವಾಗಿ ಪ್ರಯತ್ನಿಸುತ್ತಿದ್ದೇನೆ. ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಆಗಾಗ ನೆನಪಿಸುತ್ತಿರುತ್ತೇನೆ. ಅದಕ್ಕೆ ಕೆಲವರು ಪದೇ ಪದೇ ತಗಾದೆ ತೆಗೆಯುತ್ತಾರೆ. ನನ್ನ ಬಗ್ಗೆ ವೃಥಾ ಆರೋಪಗಳು ಕೇಳಿಬರುತ್ತಲೇ ಇವೆ. ರಾಜ್ಯ ಕಂಬಳ ಸಂಸ್ಥೆ ಸ್ಥಾಪಿಸುವ ಪ್ರಯತ್ನಕ್ಕೆ ಹುಳಿ ಹಿಂಡಿದ್ದಾರೆ ಎಂದು ಹೇಳಿದವರು ಲೇಜರ್ ಬೀಮ್ ಪದ್ಧತಿ ಜಾರಿಗೆ ಬಂದಾಗಲೂ ಆಕ್ಷೇಪ ವ್ಯಕ್ತಪಡಿಸಿದರು. ಒಕ್ಕಾಡಿಗೋಳಿ ಕಂಬಳದ ವಿವಾದ ಒಬ್ಬ ವ್ಯಕ್ತಿ ತೋಟದ ಜಾಗವನ್ನೇ ಕಂಬಳ ಕರೆಗೆ ನೀಡಿದ್ದು ಮುಂತಾದ ವಿಷಯಗಳನ್ನು ಪ್ರಸ್ತಾಪಿಸಿದಾಗ ಮಂಗಳೂರು ಕಂಬಳದಲ್ಲಿ ವಿವಾದ ಮಾಡಿದರು.  ನನಗೆ 71 ವರ್ಷ ವಯಸ್ಸು. ಈಗಲೂ ಕಂಬಳಕ್ಕಾಗಿ ದುಡಿಯುತ್ತಿದ್ದೇನೆ. ಯಾವ ಕಂಬಳದಲ್ಲೂ ಸಂಭಾವನೆಯಾಗಿ ಕವರ್ ತೆಗೆದುಕೊಳ್ಳುತ್ತಿಲ್ಲ. ಆದರೂ ಮತ್ಸರದಿಂದ ಕೆಲವರು ದೂರುತ್ತಿದ್ದಾರೆ.
ಗುಣಪಾಲ ಕಡಂಬ ಜಿಲ್ಲಾ ಕಂಬಳ ಸಮಿತಿಯ ಕಾರ್ಯಾಧ್ಯಕ್ಷ 
ಕೆಲವರಿಗೆ ಪ್ರತಿಯೊಂದು ಸಂದರ್ಭದಲ್ಲೂ ಕ್ಯಾತೆ ತೆಗೆಯುವ ಸ್ವಭಾವ. ಅದು ನಿಲ್ಲಬೇಕು. ನಾನೀನ ಕಂಬಳಕ್ಕೆ ಸಂಬಂಧಿಸಿದ ಜವಾಬ್ದಾರಿಯುತ ಸ್ಥಾನದಲ್ಲಿದ್ದೇನೆ. ಮಂಗಳೂರು ಕಂಬಳದಲ್ಲಿ ಅನಗತ್ಯ ತಗಾದೆ ತೆಗೆದವರು ಏಕವಚನದಲ್ಲಿ ಕರೆದರು. ಅದು ಸರಿಯಲ್ಲ ಎಂದು ಹೇಳಿದ ನಂತರ ಏನೇನೋ ನಡೆಯಿತು. ಕಂಬಳದಲ್ಲಿ ಸಣ್ಣ‍ಪುಟ್ಟ ಅಸಮಾಧಾನದ ಘಟನೆಗಳು ಹಿಂದೆಯೂ ಆಗಿವೆ. ಅದಕ್ಕೆಲ್ಲ ಕುಳಿತು ಮಾತನಾಡಿ ಪರಿಹಾರ ಕಂಡುಕೊಳ್ಳಲಾಗಿದೆ. ಹಾಗೆಂದು ಅಂಥ ಪ್ರಸಂಗಗಳು ಆಗಾಗ ನಡೆಯುವುದು ಸರಿಯಲ್ಲ.
ಮುಚ್ಚೂರು ಲೋಕೇಶ್ ಶೆಟ್ಟಿ ರಾಜ್ಯ ಕಂಬಳ ಸಮಿತಿಯ ಕೋಶಾಧಿಕಾರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT