ಮೂಲ್ಕಿ: ಐಕಳದ ಪಾಂಪೈ ಕಾಲೇಜಿನಲ್ಲಿ ಫೆ.8ರಂದು ಶ್ರೀಧರ ಡಿ.ಎಸ್. ಅವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಮೂಲ್ಕಿ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನವನ್ನು ಯಶಸ್ವಿಗೊಳಿಸಬೇಕು ಎಂದು ಪಾಂಪೈ ಶಿಕ್ಷಣ ಸಂಸ್ಥೆಗಳ ಸಂಚಾಲಕ ಓಸ್ವಾಲ್ಡ್ ಮೊಂತೆರೊ ಹೇಳಿದರು.

ಕಾಲೇಜಿನಲ್ಲಿ ನಡೆದ ಸಮ್ಮೇಳನದ ಸಿದ್ಧತಾ ಸಭೆಯಲ್ಲಿ ಅವರು ಮಾತನಾಡಿದರು.

ಕಸಾಪ ಮೂಲ್ಕಿ ಘಟಕದ ಅಧ್ಯಕ್ಷ ಮಿಥುನ ಕೊಡೆತ್ತೂರು ಮಾತನಾಡಿ, ಸಮ್ಮೇಳನದಲ್ಲಿ ವಿವಿಧ ಗೋಷ್ಠಿಗಳು, ಓದುಗರಿಗೆ ಗೌರವಾರ್ಪಣೆ, ಕೃತಿಗಳ ಬಿಡುಗಡೆ, ಪುಸ್ತಕ ಮಾರಾಟ ಮಳಿಗೆಗಳಿಗೆ ಅವಕಾಶ ನೀಡಲಾಗಿದೆ. ಬಂದ ಎಲ್ಲರಿಗೂ ಪುಸ್ತಕದ ಕೊಡುಗೆ ನೀಡಲಾಗುವುದು ಎಂದರು.

ಸಮ್ಮೇಳನ ಸಮಿತಿಯ ಅಧ್ಯಕ್ಷ ಪೃಥ್ವಿರಾಜ್ ಆಚಾರ್ಯ, ಹಿಲ್ಡಾ ಡಿಸೋಜ, ಪುರುಷೋತ್ತಮ ಕೆ.ವಿ., ಎರಿಕ್ ಪಾಯಸ್, ಸ್ವರಾಜ್ ಶೆಟ್ಟಿ, ಜೊಸ್ಸಿಪಿಂಟೊ, ರೋಹನ್ ಡಿಕೋಸ್ತ, ಧನಂಜಯ ಶೆಟ್ಟಿಗಾರ್, ಯಾದವ ಸಸಿಹಿತ್ಲು, ವಾಸುದೇವ ಬೆಳ್ಳೆ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.