ಮಂಗಳೂರು: ಕಾಂಗ್ರೆಸ್ ಪಕ್ಷವು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇದೇ 5ರಿಂದ ‘ಕರಾವಳಿ ಪ್ರಜಾಧ್ವನಿ’ ಕಾರ್ಯಕ್ರಮವನ್ನು ಏರ್ಪಡಿಸಿದ್ದು, ಈ ಅಭಿಯಾನವನ್ನು ಯಶಸ್ವಿಯಾಗಿ ಸಂಘಟಿಸಲು ಪಕ್ಷದ ಮುಖಂಡ ಅಭಯಚಂದ್ರ ಜೈನ್ ಅವರನ್ನು ಜಿಲ್ಲಾ ಸಂಯೋಜಕರನ್ನಾಗಿ ಹಾಗೂ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮಮತಾ ಗಟ್ಟಿ ಅವರನ್ನು ಸಹ ಸಂಯೋಜಕಿಯನ್ನಾಗಿ ನೇಮಿಸಲಾಗಿದೆ.

ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಕೆ. ಹರೀಶ್ ಕುಮಾರ್ ಶಿಫಾರಸ್ಸಿನ ಮೇರೆಗೆ ಪ್ರತಿಯೊಂದು ವಿಧಾನಸಭಾ ಕ್ಷೇತ್ರಕ್ಕೂ ಉಸ್ತುವಾರಿಗಳನ್ನು ನೇಮಿಸಲಾಗಿದೆ. ಸುಳ್ಯ ಕ್ಷೇತ್ರಕ್ಕೆ ಶಕುಂತಳಾ ಶೆಟ್ಟಿ, ಪುತ್ತೂರಿಗೆ ಜೆ.ಆರ್. ಲೋಬೊ, ಬೆಳ್ತಂಗಡಿಗೆ ಶಶಿಧರ್ ಹೆಗ್ಡೆ, ಬಂಟ್ವಾಳಕ್ಕೆ ಬಿ.ಇಬ್ರಾಹಿಂ, ಮೂಡುಬಿದಿರೆಗೆ ಮಹಾಬಲ ಮಾರ್ಲ, ಮಂಗಳೂರು ಕ್ಷೇತ್ರಕ್ಕೆ ಕವಿತಾ ಸನಿಲ್, ಮಂಗಳೂರು ದಕ್ಷಿಣಕ್ಕೆ ಮೊಹಿಯುದ್ದೀನ್ ಬಾವ ಹಾಗೂ
ಮಂಗಳೂರು ಉತ್ತರಕ್ಕೆ ಐವನ್ ಡಿಸೋಜ ಅವರು ಉಸ್ತುವಾರಿಯಾಗಿ ನೇಮಕಗೊಂಡಿದ್ದಾರೆ ಎಂದು ವಿಧಾನ ಪರಿಷತ್ ಸದಸ್ಯ ಮಂಜುನಾಥ ಭಂಡಾರಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.