ದ್ವಿತೀಯ ಭಾಷೆ ಇಂಗ್ಲಿಷ್ ಪ್ರಶ್ನೆ ಪತ್ರಿಕೆಯು ಕಳೆದ ವರ್ಷಕ್ಕಿಂತ ಭಿನ್ನವಾಗಿಲ್ಲ. ರಾಜ್ಯ ಮಟ್ಟದ ಮಾದರಿ ಪ್ರಶ್ನೆ ಪತ್ರಿಕೆಯಂತೆಯೇ ಎಸ್ಸೆಸ್ಸೆಲ್ಸಿ ಅಂತಿಮ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಇರುತ್ತದೆ. ಇಂಗ್ಲಿಷ್ ಸುಲಭದ ವಿಷಯ. ಚೆನ್ನಾಗಿ ಓದಿ, ಓದಿದ್ದನ್ನು ಬರೆದು ಅಭ್ಯಾಸ ಮಾಡಿ. ಆಗ ನೆನಪಿನಲ್ಲಿರುತ್ತದೆ. ಇಲ್ಲವಾದರೆ, ಅಕ್ಷರ ದೋಷ ಮತ್ತು ವ್ಯಾಕರಣ ದೋಷ ಆಗುವ ಸಾಧ್ಯತೆ ಇರುತ್ತದೆ. ಭಾಷಾ ವಿಷಯ ಆಗಿರುವ ಕಾರಣ ಇವುಗಳಿಗೆ ಅಂಕ ಕಡಿತವಾಗುತ್ತದೆ. ಹಿಂದಿನ ಐದು ವರ್ಷಗಳ ಪ್ರಶ್ನೆ ಪತ್ರಿಕೆ ಬಿಡಿಸಿದರೆ, ಓದು ಸುಲಭವಾಗುತ್ತದೆ. ಚಂದ್ರಯಾನ, ಮಾಲಿನ್ಯ, ಮೊಬೈಲ್ ಫೋನ್ ಪರಿಣಾಮ ಇಂತಹ ವಿಷಯಗಳ ಬಗ್ಗೆ ನಿಬಂಧ ಬರುವ ಸಾಧ್ಯತೆ ಇದ್ದು, ಹೆಚ್ಚು ಮನದಟ್ಟು ಮಾಡಿಕೊಳ್ಳಿ. ಯಾವುದೇ ಪ್ರಶ್ನೆಯನ್ನೂ ಬಿಡಬೇಡಿ. ಮೌಲ್ಯಮಾಪಕರಿಗೆ ಸಮಾಧಾನ ತರುವ ಉತ್ತರಗಳು ನಿಮ್ಮದಾಗಿರಲಿ-ಜಗನ್ನಾಥ್, ಇಂಗ್ಲಿಷ್ ಶಿಕ್ಷಕ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.