ಕಾಸರಗೋಡು: ಜಿಲ್ಲೆಯಲ್ಲಿ ಶುಕ್ರವಾರವೂ ಮಳೆ ಬಿರುಸಿನಿಂದ ಸುರಿಯಿತು. ಮಧೂರು ಮದನಂತೇಶ್ವರ ಸಿದ್ಧಿವಿನಾಯಕ ದೇವಾಲಯ ಜಲಾವೃತವಾಗಿದ್ದು, ಪೂಜಾ ಕಾರ್ಯಕ್ಕೆ ತೊಂದರೆಯಾಗಿತ್ತು.

ಗುಡ್ಡ ಕುಸಿಯುವ ಭೀತಿಯಿಂದ ಬೇವಿಂಜೆ, ವೀರಮಲೆ ಗುಡ್ಡ ಇರುವ ಪ್ರದೇಶಗಳ ರಸ್ತೆಯಲ್ಲಿ ಸಂಚಾರ ನಿಷೇಧಿಸಲಾಗಿದೆ ಎಂದು ಜಿಲ್ಲಾಧಿಕಾರಿ ಕೆ.ಇನ್ಬಶೇಖರ್ ತಿಳಿಸಿದ್ದಾರೆ.

ಮುಳ್ಳೇರಿಯ ಬಳಿಯ ಬೆಳ್ಳಿಗೆಯಲ್ಲಿ ಗ್ರಾಮ ಪಂಚಾಯಿತಿಯ ಸಾರ್ವಜನಿಕ ಬಾವಿ ಕುಸಿದಿದೆ. ಸಮೀಪದ ಮನೆಯೊಂದು ಅಪಾಯದ ಭೀತಿಯಲ್ಲಿದೆ.

ಕಾಸರಗೋಡು: ಪೆರುಂಬಳ ಬಳಿಯ ಕಕ್ಕಡಂ ಬೇನೂರು ರಸ್ತೆಯ ಅಬ್ದುಲ್ ಮಜೀದ್ ಎಂಬುವರ ಮನೆಯಲ್ಲಿ ಶುಕ್ರವಾರ ವಾಷಿಂಗ್ ಮೆಷಿನ್ನಲ್ಲಿ ಕಾಣಿಸಿಕೊಂಡ ಬೆಂಕಿ ಮನೆಗೆ ಹರಡಿದ್ದು, ಹಾನಿಯಾಗಿದೆ. ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.