ಕಾಸರಗೋಡು: ದೈಹಿಕ ಶಿಕ್ಷಣ ಶಿಕ್ಷಕಿ, ಬೇಡಗಂ ಚೇರಿಪ್ಪಾಡಿ ನಿವಾಸಿ ಪ್ರೀತಿ (27) ಎಂಬುವರ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಅಪರಾಧಿಗಳಾದ ಆಕೆಯ ಪತಿ, ವೆಸ್ಟ್ ಎಳೆರಿ ಮಾಂಗೋಡ್ ಪೋವಂಕರ ನಿವಾಸಿ ರಾಜೇಶ್ ಕೃಷ್ಣ (39) ಎಂಬಾತನಿಗೆ 9 ವರ್ಷ ಕಠಿಣ ಸಜೆ, ₹ 2ಲಕ್ಷ ದಂಡ, ಪತಿಯ ತಾಯಿ ಶ್ರೀಲತಾ (59) ಎಂಬುವರಿಗೆ 7 ವರ್ಷ ಕಠಿಣ ಸಜೆ, ₹ 2ಲಕ್ಷ ದಂಡವನ್ನು ಜಿಲ್ಲಾ ಹೆಚ್ಚುವರಿ ನ್ಯಾಯಾಲಯ (ಪ್ರಥಮ) ವಿಧಿಸಿದೆ.