ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಸರಗೋಡು: 105 ಮಂದಿಗೆ ಸೋಂಕು

Last Updated 26 ಜುಲೈ 2020, 5:22 IST
ಅಕ್ಷರ ಗಾತ್ರ

ಮಂಗಳೂರು: ನೆರೆಯ ಕಾಸರಗೋಡು ಜಿಲ್ಲೆಯಲ್ಲಿ 105 ಮಂದಿಗೆ ಕೋವಿಡ್‌ ಸೋಂಕು ತಗುಲಿರುವುದು ಶನಿವಾರ ದೃಢಪಟ್ಟಿದೆ. ಒಬ್ಬ ಸೋಂಕಿತೆ ಶನಿವಾರ ಮೃತಪಟ್ಟಿದ್ದು, ಸಾವಿನ ಸಂಖ್ಯೆ ನಾಲ್ಕಕ್ಕೇರಿದೆ.

ಶನಿವಾರ ಸೋಂಕು ದೃಢಪಟ್ಟವರಲ್ಲಿ 43 ಮಂದಿ ಚೆಂಗಳ ಪಂಚಾಯತ್‌ನ ನಾಲ್ಕನೇ ವಾರ್ಡ್‌ನಲ್ಲಿ ಇತ್ತೀಚೆಗೆ ಮದುವೆ ನಡೆದ ಸಮಾರಂಭದಲ್ಲಿ ಪಾಲ್ಗೊಂಡಿದ್ದರು. ಕುಂಬಳೆಯ 20, ಮಂಗಲ್ಪಾಡಿಯ 11, ಕಾಞಂಗಾಡ್‌ನ ಏಳು, ಬದಿಯಡ್ಕ, ಉದುಮ ಮತ್ತು ಬೆಳ್ಳೂರು ಪ್ರದೇಶದ ತಲಾ ಆರು ಜನರಲ್ಲಿ ಶನಿವಾರ ಸೋಂಕು ದೃಢಪಟ್ಟಿದೆ. ಸೋಂಕಿತರ ಪ್ರಾಥಮಿಕ ಸಂಪರ್ಕದಲ್ಲಿದ್ದ 88 ಮಂದಿ, ವಿದೇಶಗಳಿಂದ ವಾಪಸಾಗಿದ್ದ 10 ಹಾಗೂ ಹೊರ ರಾಜ್ಯಗಳಿಂದ ಬಂದಿರುವ ಏಳು ಜನರಲ್ಲಿ ಶನಿವಾರ ಸೋಂಕು ದೃಢಪಟ್ಟಿದೆ ಎಂದು ಕಾಸರಗೋಡು ಜಿಲ್ಲಾಧಿಕಾರಿ ಡಾ.ಡಿ.ಸಜಿತ್‌ ಬಾಬು ತಿಳಿಸಿದ್ದಾರೆ.

ಕಾಸರಗೋಡು ಜಿಲ್ಲೆಯಲ್ಲಿ ಈವರೆಗೆ ಒಟ್ಟು 1,331 ಪ್ರಕರಣಗಳು ದೃಢಪಟ್ಟಿವೆ. ಶನಿವಾರ 23 ಮಂದಿ ಸೇರಿದಂತೆ ಒಟ್ಟು 719 ಜನರು ಗುಣಮುಖರಾಗಿದ್ದಾರೆ. 719 ಸಕ್ರಿಯ ಪ್ರಕರಣಗಳಿವೆ ಎಂದು ಮಾಹಿತಿ ನೀಡಿದ್ದಾರೆ.

ಮಹಿಳೆ ಸಾವು: ಕಾಸರಗೋಡಿನ 63 ವರ್ಷದ ಮಹಿಳೆಯಲ್ಲಿ ಸೋಂಕು ದೃಢಪಟ್ಟಿತ್ತು. ಚಿಕಿತ್ಸೆಗೆ ಸ್ಪಂದಿಸದೇ ಅವರು ಶನಿವಾರ ಮೃತಪಟ್ಟಿದ್ದಾರೆ. ಇದರೊಂದಿಗೆ ಜಿಲ್ಲೆಯಲ್ಲಿ ಕೋವಿಡ್‌ ಸೋಂಕಿತರ ಸಂಖ್ಯೆ ನಾಲ್ಕಕ್ಕೇರಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT