ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಂದೇ ಸೂರಿನಡಿ ಮಂಡಿ, ಸೊಂಟದ ಆರೈಕೆ

ಕೆಎಂಸಿ ‘ಮೊಣಕಾಲು, ಸೊಂಟದ ಸಮಗ್ರ ಆರೈಕೆ’ ಕೇಂದ್ರಕ್ಕೆ ಚಾಲನೆ
Last Updated 18 ಡಿಸೆಂಬರ್ 2019, 11:56 IST
ಅಕ್ಷರ ಗಾತ್ರ

ಮಂಗಳೂರು: ಮಂಡಿ ಮತ್ತು ಸೊಂಟದ ಸಮಗ್ರ ಆರೈಕೆ ನೀಡುವ`ಮಂಡಿ (ಮೊಣಕಾಲು) ಮತ್ತು ಸೊಂಟದ ಆರೈಕೆಯ’ ಅತ್ಯಾಧುನಿಕ ಚಿಕಿತ್ಸಾ ಕೇಂದ್ರವನ್ನು ಮಂಗಳೂರಿನ ಅಂಬೇಡ್ಕರ್ ವೃತ್ತದಲ್ಲಿರುವ ಕೆಎಂಸಿ ಆಸ್ಪತ್ರೆಯಲ್ಲಿ ಬುಧವಾರ ಸ್ವೀಡನ್‌ನ ಗೋದೆನ್‌ಬರ್ಗ್‌ನ ಪ್ರೊಫೆಸರ್ ಮ್ಯಾಟ್ಸ್ ಬ್ರಿಟ್‌ ಬರ್ಗ್ ಅವರು ಉದ್ಘಾಟನೆ ಮಾಡಿದರು.

ಬಳಿಕ ನಡೆದ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಮಣಿಪಾಲ್ ಆಸ್ಪತ್ರೆ ಮುಖ್ಯಸ್ಥ ಡಾ. ಎಚ್. ಎಸ್.ಬಲ್ಲಾಳ್ ಮಾತನಾಡಿ, ಮನುಷ್ಯನ ಕೀಲುಗಳ ಸಂರಕ್ಷಣೆಗೆ ಈ ಕೇಂದ್ರ ಅತ್ಯಂತ ಪೂರಕವಾಗಿದೆ. ದಕ್ಷಿಣ ಕೊರಿಯಾದ ಸಿಯೋಲ್‌ನ ಫ್ರೊಫೆಸರ್ ಸೀಕ್-ಜಂಗ್ ಕಿಮ್ ಮತ್ತು ಯುಕೆ ಕ್ಯಾಂಟರ್‌ಬರಿಯ ಪ್ರೊಫೆಸರ್ ಎ. ಅನಂತರಾಮ ಶೆಟ್ಟಿ ಅವರು ಕೋಶ ಚಿಕಿತ್ಸೆ ಅಭಿವೃದ್ಧಿ ಪಡಿಸಿದವರಾಗಿದ್ದಾರೆ ಎಂದು ಹೇಳಿದರು.

ನೂತನ ಕೇಂದ್ರದ ಮೂಲಕ ದೇಶದಲ್ಲಿಯೇ ಮೊದಲ ಬಾರಿಗೆ ಮಂಡಿ(ಮೊಣಕಾಲು) ಮತ್ತು ಸೊಂಟದ ಚಿಕಿತ್ಸೆ ಬಗ್ಗೆ ಹೆಚ್ಚು ಆಸಕ್ತಿ ವಹಿಸಿ ಆರೈಕೆ ಕೇಂದ್ರವನ್ನು ಆರಂಭಿಸಿರುವ ಹೆಮ್ಮೆ ಕೆಎಂಸಿಗೆ ಸಲ್ಲುತ್ತದೆ. ಈ ಚಿಕಿತ್ಸಾ ಕೇಂದ್ರದ ಮೂಲಕ ಮಂಡಿ ಮತ್ತು ಸೊಂಟದ ಕೀಲುಗಳಿಗೆ ಸಮಗ್ರ ಆರೈಕೆ ಮಾಡುವಂತಹ ವ್ಯವಸ್ಥೆಯನ್ನು ಒಂದೇ ಸೂರಿನಡಿ ಕಲ್ಪಿಸಿಕೊಡಲಾಗಿದೆ ಎಂದು ಅವರು ತಿಳಿಸಿದರು.

ಪ್ರೊ.ಎ. ಅನಂತರಾಮ ಶೆಟ್ಟಿ ಅವರು ಮಾತನಾಡಿ, ಕೆಎಂಸಿ ಆಸ್ಪತ್ರೆಯಲ್ಲಿ ದೇಶದಲ್ಲಿಯೇ ಮೊದಲ ಬಾರಿಗೆ ಇಂತಹ ವಿಶಿಷ್ಟ ಆರೈಕೆ ಕೇಂದ್ರ ಆರಂಭಿಸಿರುವುದು ಈ ಭಾಗದ ಹೆಮ್ಮೆ. ಮಂಡಿ(ಮೊಣಕಾಲು) ಮತ್ತು ಸೊಂಟಕ್ಕೆ ಸಂಬಂಧಿಸಿದ ಚಿಕಿತ್ಸೆಗಳು ಇತ್ತೀಚಿನ ದಿನಗಳಲ್ಲಿ ಸುಲಭವಾಗುತ್ತಿದ್ದು, ಪ್ಯಾಕೇಜ್‌ ದರದಲ್ಲಿ ಶಸ್ತ್ರ ಚಿಕಿತ್ಸೆ ಮಾಡುವಂತಹ ವ್ಯವಸ್ಥೆ ಕೂಡಾ ಇದೆ. ತಂತ್ರಜ್ಞಾನದ ಬಳಕೆಯಿಂದಾಗಿ ಯಾವುದೇ ರೀತಿಯ ಶಸ್ತ್ರ ಚಿಕಿತ್ಸೆ ಮಾಡದೇ ಕೀಹೋಲ್ ಶಸ್ತ್ರಚಿಕಿತ್ಸೆಯ ಮೂಲಕ ಮಾಡುವ ವ್ಯವಸ್ಥೆ ಇದೆ ಎಂದು ಅವರು ಹೇಳಿದರು.

ಮಣಿಪಾಲ್ ಹೆಲ್ತ್ ಎಂಟರ್‌ಪ್ರೈಸಸ್‌ನ ವ್ಯವಸ್ಥಾಪಕ ನಿರ್ದೇಶಕ ದಿಲೀಪ್ ಜೋಸ್, ಮಂಗಳೂರಿನ ಕೆಎಂಸಿ ಆಸ್ಪತ್ರೆ ವೈದ್ಯಕೀಯ ಸೂಪರಿಂಟೆಂಡೆಂಟ್ ಡಾ.ಆನಂದ್ ವೇಣುಗೋಪಾಲ್, ಪ್ರಾದೇಶಿಕ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸಗೀರ್ ಸಿದ್ಧಿಕಿ, ಮೂಳೆ ರೋಗ ವಿಭಾಗ ಮತ್ತು ಬದಲಿ ಕೀಲು ಜೋಡಣೆ ಶಸ್ತ್ರಚಿಕಿತ್ಸಾ ಸಲಹಾ ತಜ್ಞ ಡಾ. ಸುರೇಂದ್ರ ಯು. ಕಾಮತ್, ಬದಲಿ ಸೊಂಟ ಮತ್ತು ಮಂಡಿ ಕೀಲು ಜೋಡಣೆ ಶಸ್ತ್ರ ಚಿಕಿತ್ಸಾ ತಜ್ಞ ಡಾ.ಯೋಗೀಶ್ ಡಿ. ಕಾಮತ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT