ಕೊಲ್ಲಮೊಗ್ರು ಗ್ರಾಮದ ಮಾಯಿಲಕೋಟೆ, ಕಡಂಬಳ ಪ್ರದೇಶಗಳಲ್ಲಿ ಸಂಜೆ 5 ರಿಂದ 6.30 ರವರೆಗೆ ಧಾರಾಕಾರ ಮಳೆಯಾಗಿದೆ. ಆ ಪ್ರದೇಶದ ಹೊಳೆಯಲ್ಲಿ ಭಾರಿ ಪ್ರಮಾಣದಲ್ಲಿ ನೀರು ಹರಿದು ಬಂದ ಪರಿಣಾಮ ಸೇತುವೆ ಮುಳುಗಡೆಯಾಗಿದೆ. ಈ ಪ್ರದೇಶದ ತೋಟ, ರಸ್ತೆಗಳಿಗೂ ನೀರು ನುಗ್ಗಿ ಸಮಸ್ಯೆ ಉಂಟಾಗಿದೆ. ಸುಳ್ಯ ತಾಲ್ಲೂಕಿನ ಹಲವೆಡೆ ಸಾಧಾರಣ ಮಳೆಯಾಗಿದೆ.