ಸುಬ್ರಹ್ಮಣ್ಯ: ‘ಮಹತೋಭಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಭಕ್ತರಿಗೆ ಬೆಳಿಗ್ಗಿನ ಉಪಾಹಾರ ಪ್ರಸಾದ ಕೊಡುವ ಯೋಜನೆ ಇದೇ 30ಕ್ಕೆ ಆರಂಭವಾಗಲಿದೆ’ ಎಂದು ಕುಕ್ಕೆಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಹರೀಶ್ ಇಂಜಾಡಿ ತಿಳಿಸಿದರು.

ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಮುಜರಾಯಿ ಸಚಿವರ ಸಲಹೆಯಂತೆ ಅಧಿಕಾರಿಗಳು ನಡೆಸಿದ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಷಣ್ಮುಖ ಭೋಜನ ಶಾಲೆಯಲ್ಲಿ ಬೆಳಿಗ್ಗೆ 8 ಗಂಟೆಯಿಂದ 10ರವರೆಗೆ ಉಪಾಹಾರ ಸಿಗಲಿದೆ ಎಂದರು.

ಏಕಕಾಲದಲ್ಲಿ 3 ಸಾವಿರ ಮಂದಿ ಕುಳಿತು ಭೋಜನ ಸ್ವೀಕರಿಸುವ ಭೋಜನಶಾಲೆಯ ಕಟ್ಟಡ ನಿರ್ಮಾಣದ ಮಾಸ್ಟರ್ ಪ್ಲಾನ್ ಮತ್ತು ನಕಾಶೆ ಸಿದ್ಧಪಡಿಸಲಾಗಿದೆ. 2-3 ವರ್ಷಗಳಲ್ಲಿ ಕಟ್ಟಡ ಸಿದ್ಧವಾಗಲಿದೆ. ಸುತ್ತುಪೌಳಿ, ಆಶ್ಲೇಷ ಬಲಿ ಸೇವೆಯ ಹೊಸ ಕಟ್ಟಡದ ಕೆಲಸವೂ ಶೀಘ್ರ ಆರಂಭ ಆಗಲಿದೆ ಎಂದು ಅವರು ತಿಳಿಸಿದರು.

ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿ ಅರವಿಂದ ಅಯ್ಯಪ್ಪ ಸುತಗುಂಡಿ, ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಅಶೋಕ್ ನೆಕ್ರಾಜೆ, ಲೀಲಾ ಮನಮೋಹನ್, ಸೌಮ್ಯಾ ಬಿ.ಕೆ, ಪ್ರವೀಣ್ ಪಿ, ಅಜಿತ್ ಕುಮಾರ್ ಹಾಗೂ ಮಾಸ್ಟರ್ ಪ್ಲಾನ್ ಸಮಿತಿ ಸದಸ್ಯರಾದ ಪವನ್ ಎಂ.ಡಿ, ಅಚ್ಯುತ ಗೌಡ ಆಲ್ಕಬೆ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.