ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುಕ್ಕೆ ಕ್ಷೇತ್ರದತ್ತ ಭಕ್ತರ ದಂಡು

ಚಂಪಾಷಷ್ಠಿ ಸಂಭ್ರಮ: ಮಹಾರಥೋತ್ಸವ 29ರಂದು
Last Updated 28 ನವೆಂಬರ್ 2022, 16:26 IST
ಅಕ್ಷರ ಗಾತ್ರ

ಸುಬ್ರಹ್ಮಣ್ಯ: ಕುಕ್ಕೆ ಸುಬ್ರಹ್ಮಣ್ಯದಲ್ಲಿ ಚಂಪಾಷಷ್ಠಿ ಮಹೋತ್ಸವ ಪ್ರಯುಕ್ತ ದೂರದ ಊರುಗಳಿಂದ ಭಕ್ತರ ದಂಡು ಕ್ಷೇತ್ರದತ್ತ ಹರಿದುಬರುತ್ತಿದೆ.

ಭಕ್ತರ ಅನುಕೂಲಕ್ಕೆ ದೇವಸ್ಥಾನದ ಬಳಿಯಲ್ಲಿ ಸುಬ್ರಹ್ಮಣ್ಯ ಪ್ರಾಥಮಿಕ ಆರೋಗ್ಯ ಕೇಂದ್ರದ ವತಿಯಿಂದ ತಾತ್ಕಾಲಿಕ ಹೊರರೋಗಿ ವಿಭಾಗ ತೆರೆಯಲಾಗಿದೆ. ವೈದ್ಯರು, ಸಿಬ್ಬಂದಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಇದರ ಬಳಿಯಲ್ಲಿ ಆರೋಗ್ಯ ಇಲಾಖೆಯ ವಸ್ತು ಪ್ರದರ್ಶನ ಮಳಿಗೆ ತೆರೆಯಲಾಗಿದೆ.

ಕೃಷಿ ಮೇಳ: ದೇವಸ್ಥಾನದ ಎದುರು ಭಾಗದ ರಸ್ತೆಯ ಮುಂಭಾಗದ ಪಾರ್ಕಿಂಗ್ ನಡೆಯುತ್ತಿದ್ದ ಪ್ರದೇಶದಲ್ಲಿ ಕೃಷಿ ಮೇಳ ವ್ಯವಸ್ಥೆ ಕಲ್ಪಿಸಲಾಗಿದೆ. ಕೃಷಿ ವಸ್ತು ಪ್ರದರ್ಶನ ಹಾಗೂ ಮಾರಾಟ ಮಳಿಗೆಗಳು ಇಲ್ಲಿ ಕಾರ್ಯಾಚರಿಸುತ್ತಿವೆ. ಜನರು ಕೃಷಿ ಮಳಿಗೆಗೆ ಭೇಟಿ ನೀಡಿ ಭಾಗವಹಿಸುತ್ತಿದ್ದಾರೆ.

ರಥೋತ್ಸವ: ಚಂಪಾಷಷ್ಠಿ ಜಾತ್ರಾ ಮಹೋತ್ಸವದ ದಿನವಾದ ಕಾರ್ತಿಕ ಶುದ್ಧ ಷಷ್ಠಿಯ ದಿನವಾದ ನ.29ರಂದು ಬೆಳಿಗ್ಗೆ 7.05ಕ್ಕೆ ಸುಬ್ರಹ್ಮಣ್ಯ ದೇವರು ಬ್ರಹ್ಮರಥದಲ್ಲಿ, ಪಂಚಮಿ ರಥದಲ್ಲಿ ಉಮಾಮಹೇಶ್ವರ ದೇವರು ಆಸೀನರಾಗಲಿದ್ದಾರೆ. ನಂತರ ಸುವರ್ಣ ವೃಷ್ಠಿಯಾಗಿ ಬಳಿಕ ಚಂಪಾಷಷ್ಠಿ ಮಹಾರಥೋತ್ಸವ ಜರುಗಲಿದೆ.

ಜಾತ್ರಾ ಮಹೋತ್ಸವದ ಅಂಗವಾಗಿ ವಿದ್ಯುದ್ದೀಪಾಲಂಕಾರದಿಂದ ಶೋಭಿಸು
ತ್ತಿದೆ. ಕುಕ್ಕೆ ಗೋಪುರವು ವರ್ಣಮಯ ವಾಗಿ ಕಂಗೊಳಿಸುತ್ತಿದೆ. ಕಾಶಿಕಟ್ಟೆ ಸೇರಿದಂತೆ ಕ್ಷೇತ್ರದಾದ್ಯಂತ ವಿದ್ಯುತ್ ವರ್ಣಾಲಂಕಾರ ಜಾತ್ರೆಗೆ ವಿಶೇಷ ಕಳೆ ನೀಡಿದೆ. ಇದರೊಂದಿಗೆ ಅಲ್ಲಲ್ಲಿ ಅಳವಡಿಸಿದ್ದ ಪ್ರಭಾವಳಿಗಳು ಮತ್ತು ದೇವರ ಕಲಾಕೃತಿಗಳು ಜಾತ್ರಾ ವೈಭವವನ್ನು ಹೆಚ್ಚಿಸಿದೆ.

ಬ್ರಹ್ಮರಥ ಎಳೆಯಲು ಉಪಯೋ ಗಿಸಿದ ಎಲ್ಲಾ ಬೆತ್ತವನ್ನು ದೇವಳವೇ ಉಪಯೋಗಿಸಲಿದೆ. ದೇವಳದಲ್ಲಿ ನಡೆ ಯುವ ಸೇವೆಗಳಿಗೆ ಕೊಡುವ ಮಹಾ ಪ್ರಸಾದದಲ್ಲಿ ಬೆತ್ತದ ತುಂಡನ್ನು ನೀಡಲಾಗುತ್ತಿದೆ. ಇದೀಗ ಕ್ಷೇತ್ರದಲ್ಲಿ ದಾಖಲೆಯ ಸೇವೆಗಳು ನೆರವೇರುವು
ದರಿಂದ ಪ್ರಸಾದದಲ್ಲಿ ಉಪಯೋಗಿಸಲು ಬೆತ್ತ ಕಡಿಮೆಯಾಗಬಾರದು ಎಂಬ ಕಾರಣದಿಂದ ಹಾಗೂ ಭಕ್ತರಲ್ಲಿ ಬೆತ್ತಕ್ಕಾಗಿ ಪೈಪೋಟಿ ನಡೆಯಬಾರದು ಎಂದು ರಥ ಎಳೆದ ಬೆತ್ತವನ್ನು ದೇವಳವೇ ಉಪಯೋಗಿಸಲಿದೆ. ರಥ ಎಳೆಯಲು ನೂಕುನುಗ್ಗಲು ಉಂಟಾಗು ವುದನ್ನು ತಪ್ಪಿಸಲು ರಥ ಎಳೆಯಲು ಪಾಸ್‌ನ ವ್ಯವಸ್ಥೆ ಮಾಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT