ಬುಧವಾರ, 16 ಜುಲೈ 2025
×
ADVERTISEMENT
ADVERTISEMENT

ಕುಂಬಳೆ | ಟೋಲ್‌ಗೇಟ್‌ ನಿರ್ಮಾಣಕ್ಕೆ ಸಿದ್ಧತೆ: ಸ್ಥಳೀಯರ ಅಸಮಾಧಾನ, ಪ್ರತಿಭಟನೆ

ವೀಜಿ ಕಾಸರಗೋಡು
Published : 27 ಏಪ್ರಿಲ್ 2025, 6:00 IST
Last Updated : 27 ಏಪ್ರಿಲ್ 2025, 6:00 IST
ಫಾಲೋ ಮಾಡಿ
Comments
ಕ್ರಮ ಹಿಂತೆಗೆಯದಿದ್ದರೆ ಆಂದೋಲನ
ಕುಂಬಳೆಯ ಆರಿಕ್ಕಾಡಿಯಲ್ಲಿ ಟೋಲ್‌ಗೇಟ್‌ ನಿರ್ಮಾಣ ಅವೈಜ್ಞಾನಿಕವಾಗಿದೆ. ಈ ಕ್ರಮ ವಾಪಸ್ ಪಡೆಯದಿದ್ದರೆ ಸಾರ್ವಜನಿಕರನ್ನು ಒಗ್ಗೂಡಿಸಿ ಆಂದೋಲನ ನಡೆಸುವೆ. ಈಗಾಗಲೇ ಕೇಂದ್ರ ಸಚಿವ ನಿತಿನ್ ಗಡ್ಕರಿ, ಮುಖ್ಯಮಂತ್ರಿ ಪಿಣರಾಯಿ ವಿಜಯನ್, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ, ರಾಜ್ಯ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು, ಸಂಸದ ರಾಜ್ ಮೋಹನ್ ಉಣ್ಣಿತ್ತಾನ್ ಅವರ ಜೊತೆಗೆ ಮಾತುಕತೆ ನಡೆಸಿದ್ದೇನೆ ಎಂದು ಮಂಜೇಶ್ವರ ಶಾಸಕ ಎ.ಕೆ.ಎಂ.ಅಶ್ರಫ್ ತಿಳಿಸಿದ್ದಾರೆ.
ಕಾಮಗಾರಿಗೆ ಯೂತ್ ಲೀಗ್ ತಡೆ
ಈ ಕ್ರಮವನ್ನು ಪ್ರತಿಭಟಿಸಿ ಆರಿಕ್ಕಾಡಿಯಲ್ಲಿ ಟೋಲ್‌ಬೂತ್‌ ನಿರ್ಮಿಸುವ ಕಾಮಗಾರಿಗೆ ಮುಸ್ಲಿಂ ಯೂತ್ ಲೀಗ್ ಕಾರ್ಯಕರ್ತರು ತಡೆಒಡ್ಡಿ ಪ್ರತಿಭಟಿಸಿದರು. ಅಝೀಜ್ ಕಳತ್ತೂರು, ಎಂ.ಪಿ.ಖಾಲಿದ್ ನೇತೃತ್ವದಲ್ಲಿ ಈ ಪ್ರತಿಭಟನೆ ನಡೆಯಿತು. ನಂತರ ಕುಂಬಳೆ ಪೊಲೀಸರು, ಶಾಸಕ ಎ.ಕೆ.ಎಂ.ಅಶ್ರಫ್ ಅವರು ಮಾತುಕತೆ ನಡೆಸಿದ್ದು, ಪ್ರತಿಭಟನೆ ಕೈಬಿಡಲಾಗಿದೆ. ಜನತೆಯನ್ನು ಸುಲಿಯುವ ಕುತಂತ್ರದ ಫಲವಿದು. ತಕ್ಷಣ ಈ ಕ್ರಮ ಕೈಬಿಡದೆ ಇದ್ದರೆ ಉಗ್ರ ಹೋರಾಟ ನಡೆಸಲಾಗುವುದು ಎಂದು ಮುಸ್ಲಿಂ ಯೂತ್ ಲೀಗ್ ಮುಖಂಡ ಅಝೀಜ್ ಕಳತ್ತೂರು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT