ಬುಧವಾರ, 29 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೋದಿ ಅಲೆ ಇಲ್ಲ, ಗ್ಯಾರಂಟಿ ಅಲೆ ಇದೆ: ಮಿಥುನ್ ರೈ

Published 20 ಏಪ್ರಿಲ್ 2024, 12:39 IST
Last Updated 20 ಏಪ್ರಿಲ್ 2024, 12:39 IST
ಅಕ್ಷರ ಗಾತ್ರ

ಮೂಲ್ಕಿ: ‘ರಾಜ್ಯದಲ್ಲಿ ಮೋದಿ ಅಲೆಯೇ ಇಲ್ಲ; ಬದಲಾಗಿ ಕಾಂಗ್ರೆಸ್ ಸರ್ಕಾರದ ‌ಗ್ಯಾರಂಟಿಗಳ ಅಲೆ ಇದೆ. ಎಲ್ಲ ಸಮುದಾಯದವರು ಈ ಬಾರಿ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸುವುದರಿಂದ ಜಿಲ್ಲೆಯಲ್ಲಿ ಲೋಕಸಭಾ ಚುನಾವಣೆಯ ಕಾಂಗ್ರೆಸ್‌ ಅಭ್ಯರ್ಥಿ ಪದ್ಮರಾಜ್ ಆರ್‌. ಅವರ ಗೆಲುವಿಗೆ ಮೂಲ್ಕಿ ಮೂಡುಬಿದಿರೆ ಕ್ಷೇತ್ರದಲ್ಲಿ ದಾಖಲೆ ಮತಗಳು ನೆರವಾಗಲಿವೆ’ ಎಂದು ಕೆಪಿಸಿಸಿ ಕಾರ್ಯದರ್ಶಿ ಮಿಥುನ್ ರೈ ಹೇಳಿದರು.

ಮೂಲ್ಕಿ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಶೋಷಿತ ವರ್ಗ, ನೊಂದವರಿಗಾಗಿ ಸೇವೆ ನೀಡುತ್ತಿರುವ ಪದ್ಮರಾಜ್ ಅವನ್ನು ಜನ ಗೆಲ್ಲಿಸುವ ವಿಶ್ವಾಸ ಇದೆ’ ಎಂದರು.

‘ಹುಬ್ಬಳ್ಳಿಯ ನೇಹಾ ಹಂತಕನನ್ನು ಗಲ್ಲಿಗೇರಿಸಬೇಕು. ಬಿಜೆಪಿಯು ಇಂಥ ಘಟನೆಗಳಲ್ಲೂ ರಾಜಕೀಯ ನಡೆಸುತ್ತಿದೆ’ ಎಂದರು.

ಕೆಪಿಸಿಸಿ ಸದಸ್ಯ ಎಚ್.ವಸಂತ ಬೆರ್ನಾಡ್‌, ಮೂಲ್ಕಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮೋಹನ್ ಕೋಟ್ಯಾನ್, ಪ್ರಧಾನ ಕಾರ್ಯದರ್ಶಿ ಮಂಜುನಾಥ ಕಂಬಾರ, ಯುವ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಪೂಜಾರ್, ಮಾಧ್ಯಮ ವಕ್ತಾರ ಬಾಲಕೃಷ್ಣ ಕಾಮತ್, ಗುರುರಾಜ್ ಪೂಜಾರಿ ಸುದ್ದಿಗೋಷ್ಠಿಯಲ್ಲಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT