ಸುಳ್ಯ: ಲಾರಿ ಪಲ್ಟಿ, ನಾಲ್ವರ ಸಾವು
ಸುಳ್ಯ: ಕೇರಳದ ಪಾಣತ್ತೂರು ಕಲ್ಲಪಳ್ಳಿ ಮರದ ದಿಮ್ಮಿಗಳನ್ನು ಸಾಗಿಸುತ್ತಿದ್ದ ಲಾರಿಯೊಂದು ಉರುಳಿ ಬಿದ್ದ ಪರಿಣಾಮ ನಾಲ್ವರು ಮೃತಪಟ್ಟಿದ್ದಾರೆ.
ಮೋಹನ್,ಬಾಬು, ಚೆಂಗಪ್ಪ, ನಾರಾಯಣ ಎಂಬುವವರು ಮೃತಪಟ್ಟಿದ್ದಾರೆ. ಇಬ್ಬರು ಗಾಯಾಳುಗನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ.
ಲಾರಿಗೆ ಮರದ ದಿಮ್ಮಿಗಳನ್ನು ಲೋಡ್ ಮಾಡಿದ್ದ ಕಾರ್ಮಿಕರು ಲಾರಿಯಲ್ಲಿ ಹೋಗುತ್ತಿರುವಾಗ ಲಾರಿ ಬ್ರೇಕ್ ವಿಫಲತೆಯಿಂದಾಗಿ ಇಳಿಜಾರಿನಲ್ಲಿ ವೇಗವಾಗಿ ಚಲಿಸುತ್ತಿದ್ದ ಲಾರಿ ಕೆಳ ಭಾಗದಲ್ಲಿ ಇದ್ದ ಮನೆಗೆ ಡಿಕ್ಕಿ ಹೊಡೆದು ಬಿದ್ದಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.