ಮಂಗಳೂರು: ಐಷಾರಾಮಿ ಬಹೇಮಿಯನ್ ಪ್ರವಾಸಿಗರ ಹಡಗು ‘ಸೆವೆನ್ ಸೀಸ್ ವೊಯೇಜರ್’ ಕೊಚ್ಚಿಗೆ ತೆರಳುವ ಮಾರ್ಗಮಧ್ಯೆ ನವ ಮಂಗಳೂರು ಬಂದರಿಗೆ ಶುಕ್ರವಾರ ತಲುಪಿತು.

ಈ ಋತುವಿನಲ್ಲಿ ಬಂದ ಎರಡನೇ ಹಡಗು ಇದು. ನಾರ್ವೆಯ ಕ್ರೂಸ್ ಲೈನ್ನ ಈ ಹಡಗು ಬೆಳಿಗ್ಗೆ 6.30ಕ್ಕೆ ಬಂದರಿಗೆ ಬಂದಿದ್ದು, ಅದರಲ್ಲಿ 650 ಪ್ರಯಾಣಿಕರು, 450 ಸಿಬ್ಬಂದಿ ಇದ್ದರು. ಈ ಹಡಗು ಫುಝೈರ್ನಿಂದ ಮುಂಬೈ, ಗೋವಾ, ಮಂಗಳೂರು, ಕೊಚ್ಚಿ ಮೂಲಕ ಕೊಲಂಬೊಗೆ ಸಂಜೆ 5.30ಕ್ಕೆ ವಾಪಸಾಯಿತು.

ಪ್ರವಾಸಿಗರನ್ನು ಭಾರತೀಯ ಸಂಪ್ರದಾಯದಂತೆ ಸ್ವಾಗತಿಸಲಾಯಿತು. ಸ್ಥಳೀಯ ಪ್ರಮುಖ ತಾಣಗಳಾದ ಕಾರ್ಕಳದ ಬಾಹುಬಲಿ, ಮೂಡುಬಿದಿರೆಯ ಸಾವಿರ ಕಂಬದ ಬಸದಿ, ಸೋನ್ಸ್ ಫಾರ್ಮ್, ಕಲ್ಬಾವಿ ಗೋಡಂಬಿ ಕಾರ್ಖಾನೆ, ಗೋಕರ್ಣನಾಥ ದೇವಸ್ಥಾನ ಹಾಗೂ ಸ್ಥಳೀಯ ಮಾರುಕಟ್ಟೆಗೆ ಪ್ರವಾಸಿಗರು ಭೇಟಿ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.