ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಪೂರ್ಣ ಜಾರಿಯಾಗದ ಸಂವಿಧಾನ: ಎಂ.ಗೋಪಿನಾಥ್

ಜೈಭೀಮ್ ಜನಜಾಗೃತಿ ಜಾಥಾದಲ್ಲಿ ಎಂ.ಗೋಪಿನಾಥ್ ಬೇಸರ
Last Updated 4 ನವೆಂಬರ್ 2022, 6:38 IST
ಅಕ್ಷರ ಗಾತ್ರ

ಬೆಳ್ತಂಗಡಿ: ‘ಸಂವಿಧಾನವು ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಜನರಿಗೆ ಬದುಕಲು ಕೊಟ್ಟು ಹೋದ ಹಕ್ಕುಪತ್ರ. ಆದರೆ, ಅದು ಪೂರ್ಣ ಪ್ರಮಾಣದಲ್ಲಿ ಜಾರಿಯಾಗದೆ ಶೇ 15ರಷ್ಟು ಮಂದಿಯ ಹಿತರಕ್ಷಣೆಗೆ ಬೇಕಾಗಿರುವಷ್ಟು ಮಾತ್ರ ಜಾರಿಯಾಗಿದೆ’ ಎಂದು ಬಹುಜನ ಸಮಾಜ ಪಕ್ಷದ (ಬಿಎಸ್‌ಪಿ) ಕರ್ನಾಟಕ ರಾಜ್ಯ ಸಂಯೋಜಕ ಎಂ. ಗೋಪಿನಾಥ್ ಹೇಳಿದರು.

ಪಕ್ಷ ಆಯೋಜಿಸಿರುವ ರಾಜ್ಯ ವ್ಯಾಪಿ ‘ಜೈಭೀಮ್ ಜನಜಾಗೃತಿ ಜಾಥಾ’ ಬೆಳ್ತಂಗಡಿಗೆ ಬಂದ ಸಂದರ್ಭದಲ್ಲಿ ನಡೆದ ಬಹಿರಂಗ ಸಭೆಯಲ್ಲಿ ಅವರು ಮಾತನಾಡಿದರು.

ಚಿಕ್ಕಮಗಳೂರು ಜಿಲ್ಲೆಯಿಂದ ಬಂದ ಜಾಥಾವನ್ನು ಉಜಿರೆಯಲ್ಲಿ ಸ್ವಾಗತಿಸಿ, ಬೆಳ್ತಂಗಡಿ ಬಸ್ ನಿಲ್ದಾಣದ ಬಳಿಗೆ ಕರೆತರಲಾಯಿತು. ಪಂಚ ರಾಜ್ಯಗಳ ಉಸ್ತುವಾರಿ ನಿತಿನ್ ಸಿಂಗ್, ರಾಜ್ಯ ಕಾರ್ಯದರ್ಶಿ ಕಾಂತಪ್ಪ ಆಲಂಗಾರ್, ಬಿಎಸ್‌ಪಿ ಜಿಲ್ಲಾ ಘಟಕದ ಅಧ್ಯಕ್ಷ ದಾಸಪ್ಪ ಎಡಪದವುಮಾತ ನಾಡಿದರು. ಮಂಜುಬಕ್ಕಿ ನೇತೃತ್ವದ ಕಲಾ ತಂಡದವರು ಬಹುಜನ ಗೀತೆ ಹಾಡಿದರು.

ಬಿಎಸ್‌ಪಿ ರಾಜ್ಯ ಉಸ್ತುವಾರಿ ದಿನೇಶ್ ಗೌತಮ್, ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಆರ್.ಮುನಿಯಪ್ಪ, ಜಾಕಿರ್ ಹುಸೇನ್, ವೇಲಾಯುಧನ್ , ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಿವಪ್ಪ ಗರ್ಡಾಡಿ, ಸಂಯೋಜಕ ನಾರಾಯಣ್ ಭೋದ್, ಖಜಾಂಚಿ ವಿಮಲಾ ಕೆ, ಕಚೇರಿ ಕಾರ್ಯದರ್ಶಿ ಶಿವರಾಮ್, ಮುಖಂಡ ರಾದ ಲೋಕೇಶ್ ಮುತ್ತೂರು, ನಿಶಾಂತ್, ಉಮೇಶ್ ಪಾಡ್ಯಾರು, ಸಂಜೀವ ನೀರಾಡಿ, ಸಂಜೀವ, ವಿಠಲ್ ಮುಂತಾದವರು ಇದ್ದರು.

ಗೋಪಾಲ್ ಮುತ್ತೂರು ನಿರೂಪಿಸಿದರು. ಪಿ.ಎಸ್. ಶ್ರೀನಿವಾಸ್ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT