ಉಜಿರೆ: ಬೆಳ್ತಂಗಡಿ ಜೈನ ಪೇಟೆಯಲ್ಲಿರುವ ರತ್ನತ್ರಯ ತೀರ್ಥಕ್ಷೇತ್ರದಲ್ಲಿ ಭಗವಾನ್ ಮಹಾವೀರ ಜಯಂತಿ ಆಚರಣೆ ಅಂಗವಾಗಿ ಗುರುವಾರ ತೋರಣಮುಹೂರ್ತ, ವಿಮಾನಶುದ್ಧಿ, ಭಗವಾನ್ ಮಹಾವೀರ ಸ್ವಾಮಿಗೆ ನವಕಲಾಶಾಭಿಷೇಕ, ಭಗವಾನ್ ಶಾಂತಿನಾಥ ಸ್ವಾಮಿಗೆ 108 ಕಲಶಗಳಿಂದ ಮಹಾಭಿಷೇಕ, ಪದ್ಮಾವತಿ ಅಮ್ಮನವರಿಗೆ ಅಲಂಕಾರ ಪೂಜೆ, ಬ್ರಹ್ಮಯಕ್ಷ ದೇವರಿಗೆ ವಿಶೇಷ ಪೂಜೆ ನಡೆಯಿತು.

ಬಸದಿಯ ಆಡಳಿತ ಮೊಕ್ತೇಸರ ಕೆ.ಜಯವರ್ಮರಾಜ ಬಳ್ಳಾಲ್ ನೇತೃತ್ವದಲ್ಲಿ ಪ್ರಧಾನ ಅರ್ಚಕ ಕೆ.ಜಯರಾಜ ಇಂದ್ರ, ಸಹ ಪುರೋಹಿತರು ಧಾರ್ಮಿಕ ವಿಧಿ-ವಿಧಾನಗಳನ್ನು ನೆರವೇರಿಸಿದರು.

ಭಗವಾನ್ ಮಹಾವೀರ ತೀರ್ಥಂಕರರ ಜೀವನ-ಸಾಧನೆ ಕುರಿತು ಉಪನ್ಯಾಸ ನೀಡಿದ ಅಳದಂಗಡಿ ಮಿತ್ರಸೇನ ಜೈನ್, ಮಹಾವೀರ ತೀರ್ಥಂಕರರು ಬೋಧಿಸಿದ ಅಹಿಂಸೆ, ಅನೇಕಾಂತವಾದ, ಬದುಕು ಮತ್ತು ಬದುಕಲು ಬಿಡು ಉಪದೇಶಗಳು ಸಾರ್ವಜನಿಕ ಮೌಲ್ಯ ಹೊಂದಿವೆ. ಸಕಲ ಪ್ರಾಣಿ–ಪಕ್ಷಿಗಳಿಗೂ ನಮ್ಮಂತೆಯೇ ಬದುಕುವ ಹಕ್ಕಿದೆ. ಮಹಾವೀರರು ಬೋಧಿಸಿದ ತತ್ವಗಳಿಂದ ವಿಶ್ವಶಾಂತಿಯೊಂದಿಗೆ ಸುಖ-ಶಾಂತಿ, ನೆಮ್ಮದಿಯ ಜೀವನ ಸಾಧ್ಯ ಎಂದು ಅವರು ಹೇಳಿದರು.

ಕೆ.ಜಯವರ್ಮರಾಜ ಬಳ್ಳಾಲ್, ಡಾ.ಕೆ.ಜೀವಂಧರ ಬಳ್ಳಾಲ್, ಕೆ.ರಾಜವರ್ಮ ಬಳ್ಳಾಲ್, ಬೆಂಗಳೂರಿನ ವಕೀಲ ಕೆ.ಬಿ.ಯುವರಾಜ ಬಳ್ಳಾಲ್, ವಿಜಯಾ ಬ್ಯಾಂಕ್ನ ನಿವೃತ್ತ ಪ್ರಬಂಧಕ ಎಂ.ಜಿನರಾಜ ಶೆಟ್ಟಿ, ಸುಮತಿ ಕೆ.ಆರ್.ಬಳ್ಳಾಲ್ದಿ, ವಿನಯಾ ಜೆ.ಬಳ್ಳಾಲ್, ಡಾ.ಪ್ರಿಯಾ ಬಳ್ಳಾಲ್, ಮಣಿಮಾಲ ಬಳ್ಳಾಲ್ ಭಾಗವಹಿಸಿದ್ದರು.

ಸಿಸಿಟಿವಿ ಕ್ಯಾಮೆರಾ ಕಳವು

ಉಜಿರೆ: ಮುಂಡಾಜೆ ಗ್ರಾಮದ ಸೀಟು ರಕ್ಷಿತಾರಣ್ಯದ ಬಸ್ ನಿಲ್ದಾಣದ ಪಕ್ಕದಲ್ಲಿ ಗ್ರಾಮ ಪಂಚಾಯಿತಿ ವತಿಯಿಂದ ಅಳವಡಿಸಿದ್ದ ಸಿಸಿಟಿವಿ ಕ್ಯಾಮೆರಾ ಬುಧವಾರ ರಾತ್ರಿ ಕಳವಾಗಿದೆ.

ಕಳವು ಮೊದಲಾದ ಅಪರಾಧಗಳ ಪತ್ತೆಗಾಗಿ ಒಂದು ತಿಂಗಳ ಹಿಂದೆ ಗ್ರಾಮದ ನಾಲ್ಕು ಆಯ್ದ ಸ್ಥಳಗಳಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಸಲಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.