ಮಂಗಳೂರು: ನಗರದ ಬಜಿಲಕೇರಿಯಲ್ಲಿ ಸೋಮವಾರ ತಡರಾತ್ರಿ ಹಳೆಯ ವೈಷಮ್ಯದ ಕಾರಣದಿಂದ ಎರಡು ತಂಡಗಳ ನಡುವೆ ಮಾರಾಮಾರಿ ನಡೆದಿದ್ದು, ನಾಲ್ವರು ಗಾಯಗೊಂಡಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಎರಡೂ ತಂಡಗಳ 11 ಜನರನ್ನು ಮಂಗಳೂರು ಉತ್ತರ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಅಬ್ದುಲ್ ರಶೀದ್ ಮತ್ತು ಆತನ ತಂಡದವರು ಬಜಿಲಕೇರಿಗೆ ಬರುವುದನ್ನು ಅಜಯ್ ಪ್ರಸಾದ್ ಮತ್ತು ತಂಡ ವಿರೋಧಿಸುತ್ತಿತ್ತು. ಇದೇ ವಿಚಾರದಲ್ಲಿ ದ್ವೇಷ ಇತ್ತು. ಸೋಮವಾರ ತಡರಾತ್ರಿ ಬಜಿಲಕೇರಿಗೆ ಬಂದ ರಶೀದ್ ಮತ್ತು ತಂಡ ಅಜಯ್ ಹಾಗೂ ಆತನ ತಂಡದವರನ್ನು ಪ್ರಶ್ನಿಸಿದ್ದಾರೆ. ಈ ಸಂದರ್ಭದಲ್ಲಿ ಎರಡೂ ತಂಡಗಳ ನಡುವೆ ಮಾರಕಾಸ್ತ್ರಗಳಿಂದ ಮಾರಾಮಾರಿ ನಡೆದಿದೆ. ಅಬ್ದುಲ್ ರಶೀದ್, ಅಜಯ್ ಪ್ರಸಾದ್, ವಿಜಯ್ ಪ್ರಸಾದ್ ಮತ್ತು ಗುರುರಾಜ್ ಎಂಬುವವರು ಗಾಯಗೊಂಡಿದ್ದರು.

ತಕ್ಷಣ ಸ್ಥಳಕ್ಕೆ ತೆರಳಿ ಘರ್ಷಣೆ ನಿಯಂತ್ರಿಸಿದ ಪೊಲೀಸರು, ಎರಡೂ ತಂಡಗಳ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಒಂದು ಪ್ರಕರಣದಲ್ಲಿ ಅಬ್ದುಲ್ ರಶೀದ್, ಮೊಹಮ್ಮದ್ ಹಮೀಜ್, ಜಿಯಾದ್ ಅಯ್ಯೂಬ್, ಮೊಹಮ್ಮದ್ ಆಶಿಕ್, ಮೊಹಮ್ಮದ್ ಇಮ್ರಾನ್, ಸಫ್ವಾನ್, ಮೊಹಮ್ಮದ್ ನವಾಜ್, ನವಾಜ್ ಶರೀಫ್ ಎಂಬುವವರನ್ನು ಬಂಧಿಸಲಾಗಿದೆ. ಮತ್ತೊಂದು ಪ್ರಕರಣದಲ್ಲಿ ಅಜಯ್ ಪ್ರಸಾದ್, ವಿಜಯ್ ಪ್ರಸಾದ್, ಗುರುರಾಜ್‍ನನ್ನು ಬಂಧಿಸಲಾಗಿದೆ. ಇನ್ನೊಬ್ಬ ಆರೋಪಿ ತಲೆಮರೆಸಿಕೊಂಡಿದ್ದಾನೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.