ಮಂಗಳೂರು: ನಗರದ ಹೊರವಲಯದಲ್ಲಿ ಬಿಎಂಡಬ್ಲ್ಯು ಕಾರೊಂದು ಶನಿವಾರ ಬೆಂಕಿಗಾಹುತಿಯಾಗಿದೆ.
ಈ ಕಾರು ಬಿ.ಸಿ.ರೋಡ್ ಗುರುದೀಪ್ ಎಂಬುವರಿಗೆ ಸೇರಿದ್ದಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
'ಗುರುದೀಪ್ ಅವರು ಬಿ.ಸಿ.ರೋಡ್ ನಿಂದ ನಗರಕ್ಕೆ ರಾಷ್ಡ್ರೀಯ ಹೆದ್ದಾರಿಯಲ್ಲಿ ಪ್ರಯಾಣಿಸುತ್ತಿದ್ದಾಗ ಅಡ್ಯಾರ್ ಸಹ್ಯಾದ್ರಿ ಕಾಲೇಜಿನ ಸಮೀಪ ಕಾರಿನಲ್ಲಿ ಬೆಂಕಿ ಕಾಣಿಸಿಕೊಂಡಿತು. ಕಾರಿನಲ್ಲಿ ಗುರುದೀಪ್ ಒಬ್ಬರೇ ಇದ್ದರು.
ತಕ್ಷಣವೇ ಅವರು ಕಾರನ್ನು ಹೆದ್ದಾರಿ ಪಕ್ಕದಲ್ಲಿ ನಿಲ್ಲಿ. ಕಾರಿನಿಂದ ಹೊರಗೆ ಇಳಿದಿದ್ದರು. ಕೆಲವೇ ಕ್ಷಣದಲ್ಲಿ ಬೆಂಕಿ ಇಡೀ ಕಾರಿಗೆ ವ್ಯಾಪಿಸಿತು. ಕಾರು ಸುಟ್ಟು ಕರಕಲಾಗಿದೆ' ಎಂದು ಪೊಲೀಸ್ ಮೂಲಗಳು ತಿಳಿಸಿವೆ