ಬಂಟ್ವಾಳ: ರಾಜ್ಯ ಧಾರ್ಮಿಕ ಪರಿಷತ್ತಿನ ಸದಸ್ಯ, ಕಲ್ಲಡ್ಕ ಸಮೀಪದ ಕಶೆಕೋಡಿ ಸೂರ್ಯನಾರಾಯಣ ಭಟ್ಟರ ಪುತ್ರಿ ಅನಘಾ ವೇದಾಧ್ಯಯನ ಮಾಡಿ, ತಂದೆಯೊಂದಿಗೆ ಪೌರೋಹಿತ್ಯ ನಡೆಸುವ ಮೂಲಕ ಗಮನ ಸೆಳೆದಿದ್ದಾರೆ.

ಆ ಮೂಲಕ ವೇದಾಧ್ಯಯನ ಮತ್ತು ಪೌರೋಹಿತ್ಯ ಕೇವಲ ಪುರುಷರಿಗೆ ಮಾತ್ರ ಎಂಬ ಅಘೋಷಿತ ನಿಯಮಕ್ಕೆ ಬದಲಾಗಿ ಈಕೆ ಸ್ವಇಚ್ಛೆಯಿಂದ ಪೌರೋಹಿತ್ಯದಲ್ಲಿ ತೊಡಗಿಸಿಕೊಂಡಿದ್ದಾರೆ.

ಕಶೆಕೋಡಿ ಮನೆಯಲ್ಲಿ ನಿತ್ಯವೂ ವೇದಾಧ್ಯಯನ ನಡೆಯುತ್ತಿದ್ದು, ಜೊತೆಗೆ ಸಂಗೀತ, ಗೀತಾಧ್ಯಯನಕ್ಕೂ ಹಲವು ಮಂದಿ ಬಾಲಕರು ಬರುತ್ತಾರೆ. ಈ ನಡುವೆ ತನ್ನ ಸಹೋದರ ಆದಿತ್ಯ ಕೃಷ್ಣನ ಜೊತೆಗೆ ವೇದಾಧ್ಯಯನ ನಡೆಸಲು ನನಗೂ ಅವಕಾಶ ನೀಡಬೇಕು ಎಂದು ಪುತ್ರಿ ಅನಘಾ ಬೇಡಿಕೆಯಂತೆ ತಂದೆ ಸೂರ್ಯನಾರಾಯಣ ಭಟ್ಟರು ಸಂತೋಷದಿಂದಲೇ ತರಬೇತಿ ಮತ್ತು ಮಾರ್ಗದರ್ಶನ ನೀಡಿದ್ದಾರೆ.

‘ನನಗೆ ಪೌರೋಹಿತ್ಯ ನಡೆಸುವ ಬಗ್ಗೆ ಯಾವುದೇ ಇಚ್ಛೆ ಇಲ್ಲ. ಆದರೆ, ತಂದೆಯೊಂದಿಗೆ ಮದುವೆ ಮತ್ತಿತರ ಪೌರೋಹಿತ್ಯ ನಡೆಸುವಷ್ಟು ಸಾಮರ್ಥ್ಯ ಹೊಂದಿದ್ದೇನೆ’ ಎಂದು ಅನಘಾ ಪ್ರತಿಕ್ರಿಯಿಸಿದ್ದಾರೆ.

‘ವೇದಾಧ್ಯಯನ ತರಬೇತಿಯಲ್ಲಿ ಅನಘಾ ಸಂಪೂರ್ಣ ತೊಡಗಿಸಿಕೊಂಡಿರುವುದನ್ನು ಕಂಡ ಆರ್ಎಸ್ಎಸ್ ಮುಖಂಡ ಡಾ.ಕೆ.ಪ್ರಭಾಕರ ಭಟ್ ಅವರು ನೀಡಿದ್ದ ಪ್ರೋತ್ಸಾಹ ಇತರ ಹೆಣ್ಮಕ್ಕಳಿಗೆ ಪ್ರೇರಣೆಯಾಗುವಂತೆ ಮಾಡಿದೆ’ ಎಂದು ಕಶೆಕೋಡಿ ಸೂರ್ಯನಾರಾಯಣ ಭಟ್ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.