ಕೋಟ್ಯಂತರ ರೂಪಾಯಿ ಸುರಿದರೂ ಮಹಾನಗರಗಳಲ್ಲಿ ಪರಿಹಾರ ಕಾಣದ ಕಸ ವಿಲೇವಾರಿ ಸಮಸ್ಯೆಗೆ ದಕ್ಷಿಣ ಕನ್ನಡ ಮತ್ತು ಉಡುಪಿಯಲ್ಲಿ ಅರ್ಥಪೂರ್ಣ ಉತ್ತರ ಕಂಡುಕೊಳ್ಳಲಾಗಿದೆ. 170 ಟನ್ ಪ್ಲಾಸ್ಟಿಕ್ ಬಳಸಿ ಮಂಗಳೂರಿನಲ್ಲಿ 50 ಕಿಲೋ ಮೀಟರ್ ಉದ್ದದ ಸರ್ವಿಸ್ ರಸ್ತೆಯನ್ನು ನಿರ್ಮಿಸಲಾಗಿದೆ. ರಾಷ್ಟ್ರೀಯ ಹೆದ್ದಾರಿ 66ರ ಪಕ್ಕದಲ್ಲಿ ತಲಪಾಡಿಯಿಂದ ನಂತೂರುವರೆಗೆ ಹಾಗೂ ಸುರತ್ಕಲ್ನಿಂದ ಸಾಸ್ತಾನದವರೆಗೆ ನಿರ್ಮಾಣ ಮಾಡಿರುವ ರಸ್ತೆಗೆ ಎಂಆರ್ಎಫ್ನಲ್ಲಿ ಸಂಗ್ರಹಿಸಿದ ಕಡಿಮೆ ಸಾಂದ್ರತೆಯ ಪಾಲಿಥಿಲೀನ್ ಅನ್ನು ಬಳಕೆ ಮಾಡಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.