ಸುಬ್ರಹ್ಮಣ್ಯ: ಮಂಗಳೂರು ವಿದ್ಯುತ್ ಸರಬರಾಜು ಕಂಪನಿಯಿಂದ ಅಗತ್ಯ ಇರುವ ಕಡೆ ವಿದ್ಯುತ್ ಮಾರ್ಗ, ವಿದ್ಯುತ್ ಪರಿವರ್ತಕ, ಕಂಬಗಳ ಬದಲಾವಣೆ ಕಾರ್ಯ ನಡೆಯುತ್ತಿದೆ. ಗ್ರಾಹಕರಿಗೆ ಸುರಕ್ಷತೆಯೊಂದಿಗೆ ಗುಣಮಟ್ಟದ ವಿದ್ಯುತ್ ಒದಗಿಸಲು ಆದ್ಯತೆ ನೀಡಲಾಗುತ್ತಿದೆ ಎಂದು ಮಂಗಳೂರು ಮೆಸ್ಕಾಂ ವೃತ್ತದ ಅಧೀಕ್ಷಕ ಎಂಜಿನಿಯರ್ ಕೃಷ್ಣರಾಜ ಹೇಳಿದರು.

ಸುಬ್ರಹ್ಮಣ್ಯ ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ಗುರುವಾರ ನಡೆದ ಸುಬ್ರಹ್ಮಣ್ಯ ಮೆಸ್ಕಾಂ ಉಪ ವಿಭಾಗ ಹಾಗೂ ಸುಳ್ಯ ಉಪ ವಿಭಾಗ ಮಟ್ಟದ ಜನ ಸಂಪರ್ಕ ಸಭೆಯಲ್ಲಿ ಅವರು ಮಾತನಾಡಿದರು.

ಸುಳ್ಯ ಹಾಗೂ ಸುಬ್ರಹ್ಮಣ್ಯ ಉಪ ವಿಭಾಗ ಮಟ್ಟದ ಮೆಸ್ಕಾಂ ಗ್ರಾಹಕರು ಸಮಸ್ಯೆ, ಆಗಬೇಕಾದ ಕೆಲಸ ಹಾಗೂ ಸುರಕ್ಷತೆ ಬಗ್ಗೆ ಅಧಿಕಾರಿಗಳ ಗಮನ ಸೆಳೆದರು.

ಸುಬ್ರಹ್ಮಣ್ಯ, ಗುತ್ತಿಗಾರು, ಪಂಜ, ನಿಂತಿಕಲ್ಲು, ಕಡಬಕ್ಕೆ ಮುಖ್ಯ ಕೇಂದ್ರವಾಗಿರುವ ಪಂಜದಲ್ಲಿ 110 ಕೆ.ವಿ ವಿದ್ಯುತ್ ಮುಖ್ಯಸ್ಟೇಷನ್ ಆಗಬೇಕೆಂದು ಗ್ರಾಹಕರಾದ ವಸಂತಕುಮಾರ ಕೆದಿಲ, ಮೆಸ್ಕಾಂ ಸಲಹಾ ಸಮಿತಿ ಸದಸ್ಯ ಜಮಾಲುದ್ದೀನ್ ಅಗ್ರಹಿಸಿದರು. ಉದಯಕುಮಾರ್ ದೇವಪ್ಪಜ್ಜನ ಸಮಸ್ಯೆ ವಿವರಿಸಿದರು.

ಗುತ್ತಿಗಾರು ಶಾಖೆಯ ಪವರ್ಮ್ಯಾನ್ಗಳ ಕಾರ್ಯವೈಖರಿ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು. ಐನೇಕಿದು, ಹರಿಹರ, ಬಾಳುಗೋಡು, ಕಲ್ಮಕಾರು, ಕೊಲ್ಲಮೊಗರು ಪ್ರದೇಶಗಳಲ್ಲಿ ಆಗುತ್ತಿರುವ ಸಮಸ್ಯೆ ಬಗ್ಗೆ ಹರೀಶ ಮೆಟ್ಟಿನಡ್ಕ, ಪರಮೇಶ್ವರ ಕೆಂಬಾರೆ, ದಿನೇಶ್ ಹಾಲೆಮಜಲು, ವಿಜಯಕುಮಾರ ಅಂಗಣ ಗಮನಸೆಳೆದರು.

ಮೆಸ್ಕಾಂ ಬಿಲ್ನಲ್ಲಿ ಆಗುತ್ತಿರುವ ವ್ಯತ್ಯಾಸದ ಬಗ್ಗೆ ದಿನೇಶ್ ಸರಸ್ವತಿ ಮಹಲ್ ವಿವರಿಸಿದರು.

ಮಲಯಾಳದಿಂದ ಐನೆಕಿದು–ಹರಿಹರದವರೆಗೆ ಮಾರ್ಗದ ಬದಿಯಲ್ಲಿ ವಿದ್ಯುತ್ ತಂತಿಗೆ ತಾಗಿಕೊಂಡು ಇರುವ ಮರದ ಕೊಂಬೆಗಳನ್ನು ತೆಗೆಯುವಂತೆ ಸತೀಶ ಕೂಜುಗೋಡು ಅಗ್ರಹಿಸಿದರು.

ದಕ್ಷಿಣ ಕನ್ನಡ ಜಿಲ್ಲಾ ಗ್ಯಾರಂಟಿ ಯೋಜನಾ ಸಮಿತಿ ಅಧ್ಯಕ್ಷ ಭರತ್ ಮುಂಡೋಡಿ, ಮೆಸ್ಕಾಂ ಸಲಹಾ ಸಮಿತಿ ಸದಸ್ಯರಾದ ದಿನೇಶ್ ಹಾಲೆಮಜಲು, ಕೃಷ್ಣಪ್ಪ ನಾಯ್ಕ, ಮೆಸ್ಕಾಂ ಪುತ್ತೂರು ವಿಭಾಗದ ಕಾರ್ಯನಿರ್ವಾಹಕ ಎಂಜಿನಿಯರ್ ರಾಮಚಂದ್ರ ಎ., ಸುಬ್ರಹ್ಮಣ್ಯ ಉಪ ವಿಭಾಗದ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಸತೀಶ ಸಪಲ್ಯ, ಸುಳ್ಯ ಉಪ ವಿಭಾಗದ ಹರೀಶ್ ನಾಯ್ಕ, ಸಹಾಯಕ ಎಂಜಿನಿಯರ್ಗಳಾದ ಹರಿಕೃಷ್ಣ ಕೆ.ಜಿ., ಚಿದಾನಂದ ಕೆ., ಸುಪ್ರೀತ್ ಕುಮಾರ್, ಕಿರಿಯ ಎಂಜಿನಿಯರ್ಗಳಾದ ಪ್ರಸಾದ ಕೆ.ವಿ., ಅಭಿಷೇಕ್, ಮಹೇಶ್, ಸುನಿತಾ, ಕಚೇರಿ ಹಿರಿಯ ಸಹಾಯಕರಾದ ಗಣೇಶ್, ಹಾಗೂ ಅನುರಾಧ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.