ಮಂಗಳೂರು: ನಿಫಾ ಸೋಂಕಿನ ಶಂಕೆಯಲ್ಲಿ ಗೋವಾದ ವ್ಯಕ್ತಿಯೊಬ್ಬರು ಇಲ್ಲಿನ ವೆನ್ಲಾಕ್ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಗೋವಾದಲ್ಲಿ ಆರ್ಟಿ-ಪಿಸಿಆರ್ ಕಿಟ್ ತಯಾರಿಸುವ ಪ್ರಯೋಗಾಲಯದಲ್ಲಿ ಮೈಕ್ರೊ ಬಯಾಲಜಿಸ್ಟ್ ಆಗಿ ಕೆಲಸ ಮಾಡುತ್ತಿರುವ ಈ ವ್ಯಕ್ತಿಗೆ ಎರಡು ದಿನಗಳ ಹಿಂದೆ ಜ್ವರ ಬಂದಿತ್ತು. ಮತ್ತೆ ಪುನಃ ಜ್ವರ ಬಂದಿರುವ ಕಾರಣ, ಜ್ವರದ ಲಕ್ಷಣ ಆಧರಿಸಿ, ಈ ವ್ಯಕ್ತಿ ಪರೀಕ್ಷೆ ಮಾಡಿಸಿಕೊಂಡಿದ್ದಾರೆ. ಪುಣೆಯಿಂದ ಪರೀಕ್ಷಾ ವರದಿ ಇನ್ನೆರಡು ದಿನಗಳಲ್ಲಿ ಬರಬಹುದು ಎಂದು ಆರೋಗ್ಯ ಇಲಾಖೆ ಮೂಲಗಳು ತಿಳಿಸಿವೆ.

ಓದಿ:ನಿಫಾ: ಮೂಲ ಇನ್ನೂ ಪತ್ತೆಯಾಗಿಲ್ಲ

ಈ ವ್ಯಕ್ತಿ ಗೋವಾದಿಂದ ಕಾರವಾರಕ್ಕೆ ಬಂದು, ಅಲ್ಲಿಂದ ಮಣಿಪಾಲಕ್ಕೆ ತೆರಳಿ, ಮತ್ತೆ ಮಂಗಳೂರಿಗೆ ಬಂದಿದ್ದಾರೆ.

‘ಕಾರವಾರದ ವ್ಯಕ್ತಿ ಗೋವಾದ ಆರ್ಟಿ–ಪಿಸಿಆರ್ ಟೆಸ್ಟ್ ಕಿಟ್ ತಯಾರಿಕಾ ಪ್ರಯೋಗಾಲಯದಲ್ಲಿ ಕೆಲಸ ಮಾಡುತ್ತಿದ್ದಾರೆ. ಕಾರವಾರಕ್ಕೆ ಬೈಕ್ನಲ್ಲಿ ಮಳೆಯಲ್ಲಿಬಂದಿದ್ದರು. ಈ ವ್ಯಕ್ತಿಗೆ ನಿಫಾ ಸೋಂಕಿನ ಲಕ್ಷಣ ಇಲ್ಲದಿದ್ದರೂ ನಿರ್ಲಕ್ಷ್ಯ ಮಾಡಬಾರದೆಂದು, ಮಾದರಿಯನ್ನು ಪುಣೆಗೆ ಕಳುಹಿಸಲಾಗಿದೆ’ ಎಂದು ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ ತಿಳಿಸಿದ್ದಾರೆ.

‘ಪುಣೆಯಿಂದ ಆದಷ್ಟು ಬೇಗ ವರದಿ ತರಿಸುವ ವ್ಯವಸ್ಥೆ ಆಗಿದ್ದು, ಆ ವ್ಯಕ್ತಿಯ ಮನೆಯವರನ್ನು ಐಸೊಲೇಷನ್ನಲ್ಲಿ ಇಡಲಾಗಿದೆ. ಸಂಪರ್ಕಿತರನ್ನು ಸಹ ಪತ್ತೆ ಮಾಡಲಾಗಿದ್ದು, ಉಡುಪಿ, ಉತ್ತರ ಕನ್ನಡ ಜಿಲ್ಲಾಡಳಿತಕ್ಕೆ ತಿಳಿಸಲಾಗಿದೆ’ ಎಂದು ಅವರು ಪ್ರತಿಕ್ರಿಯಿಸಿದ್ದಾರೆ.

ಓದಿ:ಕೇರಳದಿಂದ ಬರುವ ರೋಗ ಲಕ್ಷಣ ಇದ್ದವರಿಗೆ ಪ್ರವೇಶವಿಲ್ಲ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.