ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂಗಳೂರು ಲಿಟ್ ಫೆಸ್ಟ್ ನಾಳೆಯಿಂದ

Last Updated 6 ಏಪ್ರಿಲ್ 2022, 10:18 IST
ಅಕ್ಷರ ಗಾತ್ರ

ಮಂಗಳೂರು: ಮಂಗಳೂರು ಲಿಟ್ ಫೆಸ್ಟ್‌ನ ನಾಲ್ಕನೇ ಆವೃತ್ತಿಯು ಏ.8 ಹಾಗೂ 9ರಂದು ನಗರದ ಓಶಿಯನ್ ಪರ್ಲ್ ಹೋಟೆಲ್‌ನಲ್ಲಿ ನಡೆಯಲಿದೆ.

ಪ್ರಾಚೀನ ಭಾರತೀಯ ಶಾಂತಿ, ಸಮೃದ್ಧತೆ ಹಾಗೂ ಸಮಷ್ಟಿ ಹಿತದ ಪರಿಕಲ್ಪನೆಯನ್ನು ಪ್ರದರ್ಶಿಸುವ ಉದ್ದೇಶದಿಂದ ನಡೆಯುವ ಈ ಲಿಟ್ ಫೆಸ್ಟ್‌ನಲ್ಲಿ, ಅನೇಕ ಸಮಕಾಲೀನ ವಿಚಾರಗಳನ್ನು ಚರ್ಚಿಸಲಾಗುತ್ತದೆ. ಶತಾವಧಾನಿ ಡಾ. ಆರ್. ಗಣೇಶ್ ಪಾಲ್ಗೊಳ್ಳುವರು.

‘ರಷ್ಯಾ-ಉಕ್ರೇನ್ ಬಿಕ್ಕಟ್ಟು ಭಾರತೀಯ ದೃಷ್ಟಿಕೋನ’ದ ಬಗ್ಗೆ ಡಾ.ದತ್ತೇಶ್ ಪ್ರಭು ಪಾರುಲ್ಕರ್, ಸುಮಿತ್ ಪಾಂಡೆ, ನಯನಾ ಆನಂದ್, ‘ಭಾಷೆ ಮತ್ತು ತಂತ್ರಜ್ಞಾನ’ ಕುರಿತು ಕೆ.ಪಿ.ರಾವ್ ಹಾಗೂ ಬೇಳೂರು ಸುದರ್ಶನ ಮಾತನಾಡುವರು. ‘ಕಾಶ್ಮೀರದ ಕಥೆಗಳು’ ಗೋಷ್ಠಿಯನ್ನು ಲೇಖಕಿ ಸಹನಾ ವಿಜಯ್ ಕುಮಾರ್ ಹಾಗೂ ಅಜೇಯ್ ಭಾರತಿ ನಿರ್ವಹಿಸುವರು. ‘ಭೋಸ್ ಅವರ ಇನ್ನೂ ಹೇಳದ ಕಥೆ’ ಎಂಬ ವಿಚಾರವಾಗಿ ಅನುಜ್ ಧರ್, ಚಂದ್ರಚೂಡ್ ಭೋಸ್, ನವನೀತ್ ಕೃಷ್ಣ ಚರ್ಚಿಸುವರು.

ಎರಡನೇ ದಿನದ ಕಾರ್ಯಕ್ರಮದಲ್ಲಿ ರೋಹಿತ್ ಚಕ್ರತೀರ್ಥ, ಅರವಿಂದ ಚೊಕ್ಕಾಡಿ ಮತ್ತು ಅಶ್ವಿನಿ ದೇಸಾಯಿ ಪಠ್ಯ ವಿಮರ್ಶೆ ಕೈಗೊಳ್ಳುವರು. ‘ಕನ್ನಡಿಗರ ಕಣ್ಣಲ್ಲಿ ಸಾಂಸ್ಕೃತಿಕ ಭಾರತ’ ಕುರಿತು ಡಾ. ಜೆ.ಬಿ.ಹರೀಶ, ಡಾ. ನಿರಂಜನ ವಾನಳ್ಳಿ ಮತ್ತು ಜಿ.ಆರ್.ಸಂತೋಷ್, ‘ಕಶ್ಮೀರ್ ಫೈಲ್ಸ್ ರೀಲ್ ಮತ್ತು ರಿಯಲ್’ ಕುರಿತು ಕಲಾವಿದ ಪ್ರಕಾಶ್ ಬೆಳವಾಡಿ, ‘ನಾಗರಿಕತೆಯ ನಿರೂಪಣೆ’ ಕುರಿತು ನಿತಿನ್ ಶ್ರೀಧರ್, ಸಾಯಿಸ್ವರೂಪ ಅಯ್ಯರ್, ಗಣತ್ರ ಸಮಾಲೋಚಿಸುವರು ಎಂದು ಸಂಘಟಕರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT