ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂಗಳೂರು: ‘ಮಳೆಗಾಲದಲ್ಲಿ ವಿಮಾನ ನಿಲ್ದಾಣ ಮುಚ್ಚುವ ಪ್ರಸ್ತಾವ ಇಲ್ಲ’

Last Updated 9 ಆಗಸ್ಟ್ 2020, 13:52 IST
ಅಕ್ಷರ ಗಾತ್ರ

ಮಂಗಳೂರು: ಅಂತರ ರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಮಳೆಗಾಲದಲ್ಲಿ ಮುಚ್ಚುವ ಪ್ರಸ್ತಾವವಿಲ್ಲ ಎಂದು ವಿಮಾನ ನಿಲ್ದಾಣದ ಸಾರ್ವಜನಿಕ ಸಂಪರ್ಕ ಅಧಿಕಾರಿ ಸ್ಪಷ್ಟಪಡಿಸಿದ್ದಾರೆ.

ಅಂತರ ರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಎಂದಿನಂತೆ ವಿಮಾನ ಕಾರ್ಯಾಚರಣೆ ನಡೆಯಲಿದೆ. ದುಬೈಗೆ 165 ಪ್ರಯಾಣಿಕರನ್ನು ಹೊತ್ತ ವಿಮಾನ ಭಾನುವಾರ ಮಧ್ಯಾಹ್ನ ನಿಗದಿತ ಸಮಯವಾದ 12.40 ಕ್ಕೆ ಹೊರಟಿದೆ ಎಂದು ತಿಳಿಸಿದ್ದಾರೆ.

ವಂದೇ ಭಾರತ್ ಮಿಷನ್ ಮತ್ತು ಚಾರ್ಟರ್ಡ್ ವಿಮಾನಗಳು ನಿಗದಿಯಂತೆ ಹಾರಾಟ ನಡೆಸುತ್ತಿವೆ. ದುಬೈ ಮತ್ತು ದಮಾಮ್‌ನಿಂದ ಇಂಡಿಗೊ ವಿಮಾನಗಳು ಸಹ ಸಾಮಾನ್ಯವಾಗಿ ಕಾರ್ಯನಿರ್ವಹಿಸುತ್ತಿವೆ. ಸೋಮವಾರ ಮಸ್ಕತ್‌ನಿಂದ ನಿಗದಿಯಾಗಿದ್ದ ವಿಮಾನವನ್ನು ರದ್ದುಪಡಿಸಲಾಗಿದೆ. ಮುಂಬೈ, ಬೆಂಗಳೂರು ಮತ್ತು ಹೈದರಾಬಾದ್‌ನಿಂದ ವಿಮಾನಗಳು ಇಲ್ಲಿಗೆ ಬರುತ್ತಿದ್ದು, ಇಲ್ಲಿಂದ ಅಲ್ಲಿಗೂ ವಿಮಾನ ಹಾರಾಟ ನಡೆಸುತ್ತಿದೆ. ಶನಿವಾರ ಹವಮಾನ ತೊಂದರೆಯಿಂದಾಗಿ ಬೆಂಗಳೂರಿನಿಂದ ನಗರಕ್ಕೆ ಬಂದಿದ್ದ ವಿಮಾನವು ಲ್ಯಾಂಡ್‌ ಆಗಲು ಸಾಧ್ಯವಾಗದೇ ಬೆಂಗಳೂರಿಗೆ ಮರಳಿದೆ ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT