ಮಂಗಳೂರು: ಹಣಕ್ಕಾಗಿ ಪರಪುರುಷನ ಜೊತೆ ಬಲವಂತದಿಂದ ದೈಹಿಕ ಸಂಪರ್ಕ ನಡೆಸುವಂತೆ ಪತ್ನಿಗೆ ಸೂಚಿಸಿ, ಅದರ ವಿಡಿಯೊ ಚಿತ್ರೀಕರಣ ನಡೆಸಿದ ಆರೋಪಿಯನ್ನು ಹಾಗೂ ಆ ಮಹಿಳೆಗೆ ನೆರವಾಗುವ ಸೋಗಿನಲ್ಲಿ ತೆರಳಿ ಆಕೆಯ ಜೊತೆ ಬಲವಂತದಿಂದ ಲೈಂಗಿಕ ಸಂಪರ್ಕ ನಡೆಸಿದ ಆರೋಪದ ಮೇಲೆ ಕಾವೂರು ಠಾಣೆಯ ಕಾನ್ಸ್ಟೆಬಲ್ ಒಬ್ಬನನ್ನು ಕಂಕನಾಡಿ ನಗರ ಠಾಣೆಯ ಪೊಲೀಸರು ಬಂಧಿಸಿದ್ದಾರೆ.

ಕಾವೂರು ಠಾಣೆಯ ಕಾನ್ಸ್ಟೆಬಲ್ ಚಂದ್ರಾ ನಾಯ್ಕ್ ಬಂಧಿತ ಆರೋಪಿ ಎಂದು ನಗರ ಪೊಲೀಸ್ ಕಮಿಷನರ್ ಸುಧೀರ್ ಕುಮಾರ್ ರೆಡ್ಡಿ ತಿಳಿಸಿದ್ದಾರೆ.

‘ಗಂಡನು ಹಣಕ್ಕಾಗಿ ಒತ್ತಾಯಪೂರ್ವಕವಾಗಿ ಬೇರೊಬ್ಬ ಪುರುಷನೊಂದಿಗೆ ದೈಹಿಕ ಸಂಪರ್ಕ ನಡೆಸುವಂತೆ ಮಾಡಿ, ಅದರ ವಿಡಿಯೊ ಚಿತ್ರೀಕರಣ ಮಾಡಿದ್ದ. ತಾನು ಸೂಚಿಸಿದ ಇತರ ಪುರುಷರೊಂದಿಗೆ ದೈಹಿಕ ಸಂಪರ್ಕ ನಡೆಸಬೇಕು. ಇಲ್ಲವಾದಲ್ಲಿ ಆ ವಿಡಿಯೊವನ್ನು ಸಾಮಾಜಿಕ ಮಾಧ್ಯಮದಲ್ಲಿ ಹರಿಯಬಿಡುವುದಾಗಿ ಪತಿ ಬೆದರಿಸಿದ್ದ. ಸಂತ್ರಸ್ತೆ ತನಗೆ ಪರಿಚಯವಿದ್ದ ಕಾವೂರು ಪೊಲೀಸ್ ಠಾಣೆಯ ಕಾನ್ಸ್ಟೆಬಲ್ ಚಂದ್ರನಾಯ್ಕ್ಗೆ ಈ ಬಗ್ಗೆ ತಿಳಿಸಿದ್ದಳು. ಆತ ಸಂತ್ರಸ್ತೆಯ ಮನೆಗೆ ಹೋಗಿ ಗಂಡನ ಮೊಬೈಲ್ನಲ್ಲಿದ್ದ ಪೋಟೊ ಮತ್ತು ವಿಡಿಯೊವನ್ನು ಅಳಿಸಿದ್ದ’ ಎಂದು ಅವರು ಮಾಹಿತಿ ನೀಡಿದ್ದಾರೆ.

‘ಆನಂತರ ಸಂತ್ರಸ್ತೆಯ ಗಂಡನ ದುಷ್ಪ್ರೇರಣೆಯಂತೆ ಆರೋಪಿ ಕಾನ್ಸ್ಟೆಬಲ್ ಚಂದ್ರನಾಯ್ಕ್ ಆಕೆಯ ಇಚ್ಛೆಗೆ ವಿರುದ್ಧವಾಗಿ ದೈಹಿಕ ಸಂಪರ್ಕ ನಡೆಸಿದ್ದ. ಈ ಬಗ್ಗೆ ಸಂತ್ರಸ್ತೆ ತನ್ನ ಪತಿ ಮತ್ತು ಕಾನ್ಸ್ಟೆಬಲ್ ವಿರುದ್ಧ ಕಂಕನಾಡಿ ನಗರ ಠಾಣೆಗೆ ಮಂಗಳವಾರ ದೂರು ನೀಡಿದ್ದರು. ಸಂತ್ರಸ್ತೆಯ ಪತಿ ಹಾಗೂ ಆರೋಪಿ ಚಂದ್ರನಾಯ್ಕ್ ಇಬ್ಬರನ್ನೂ ಕಂಕನಾಡಿ ನಗರ ಠಾಣೆಯ ಪೊಲೀಸರು ಬಂಧಿಸಿದ್ದಾರೆ. ಪ್ರಕರಣದ ತನಿಖೆ ಪ್ರಗತಿಯಲ್ಲಿದೆ’ ಎಂದು ಅವರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.