ಶನಿವಾರ, 24 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಚಿತ್ರಮಂದಿರದಲ್ಲಿ ತುಳು ಸಿನಿಮಾಕ್ಕೆ ಪ್ರಾಶಸ್ತ್ಯ ಸಿಗಲಿ’

‘ಮಿಸ್ಟರ್ ಮದಿಮಯೆ’ ತೆರೆಗೆ
Published 13 ಜನವರಿ 2024, 7:15 IST
Last Updated 13 ಜನವರಿ 2024, 7:15 IST
ಅಕ್ಷರ ಗಾತ್ರ

ಮಂಗಳೂರು: ಎಂಎಂಎಂ ಗ್ರೂಪ್ಸ್‌ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾದ, ನವೀನ್ ಜಿ. ಪೂಜಾರಿ ನಿರ್ದೇಶನದ ‘ಮಿಸ್ಟರ್ ಮದಿಮಯೆ’ ತುಳು ಸಿನಿಮಾ ಮಂಗಳೂರಿನ ಭಾರತ್ ಸಿನಿಮಾಸ್‌ನಲ್ಲಿ ತೆರೆ ಕಂಡಿತು.

ಚಿತ್ರ ನಿರ್ಮಾಪಕ ಟಿ.ಎ. ಶ್ರೀನಿವಾಸ್ ಮಾತನಾಡಿ, ‘ತುಳು ಸಿನಿಮಾಗಳಿಗೆ ಉಡುಪಿ, ಮಂಗಳೂರಿನಲ್ಲಿ ಚಿತ್ರಮಂದಿರಗಳನ್ನು ಕೊಡುತ್ತಿಲ್ಲ ಅನ್ನುವುದು ಬೇಸರದ ವಿಚಾರ. ಇಂತಹ ಬೆಳವಣಿಗೆ ನಿಲ್ಲಬೇಕು. ತುಳು ಭಾಷೆಯ ಸಿನಿಮಾಗಳಿಗೆ ಮೊದಲ ಪ್ರಾಶಸ್ತ್ಯ ಸಿಗಬೇಕು. ತುಳುವರು ಒಗ್ಗಟ್ಟಾಗಿ ಸಿನಿಮಾವನ್ನು ಗೆಲ್ಲಿಸಬೇಕು’ ಎಂದರು.

ಹಾಸ್ಯನಟ ಭೋಜರಾಜ್ ವಾಮಂಜೂರ್ ಮಾತನಾಡಿ, ‘ತುಳು ಭಾಷೆಯಲ್ಲಿ ಹೊಸಬರ ತಂಡ ಕಷ್ಟಪಟ್ಟು ಮಾಡಿರುವ ಸಿನಿಮಾ ಮಿಸ್ಟರ್‌ ಮದಿಮಯೆ. ಎಲ್ಲರೂ ಸಿನಿಮಾ ನೋಡಿ ಹೊಸ ಪ್ರತಿಭೆಗಳನ್ನು ಪ್ರೋತ್ಸಾಹಿಸಿ’ ಎಂದರು.

ಆರ್.ಕೆ. ನಾಯರ್ ಮಾತನಾಡಿ, ‘ತುಳುವರು ವಿಶ್ವದೆಲ್ಲೆಡೆ ಸದ್ದು ಮಾಡುತ್ತಿದ್ದಾರೆ. ತುಳು ಭಾಷೆ ಬೆಳವಣಿಗೆಗೆ ಇದರಿಂದ ಅನುಕೂಲವಾಗಲಿದೆ. ತುಳು ಭಾಷೆಯಲ್ಲಿ ಇನ್ನೂ ಹೆಚ್ಚಿನ ಸಿನಿಮಾಗಳು ಬರಲಿ’ ಎಂದು ಶುಭ ಹಾರೈಸಿದರು.

ತುಳು ಚಲನಚಿತ್ರ ನಿರ್ಮಾಪಕರ ಸಂಘದ ಅಧ್ಯಕ್ಷ ಆರ್. ಧನರಾಜ್, ಪ್ರಕಾಶ್ ಪಾಂಡೇಶ್ವರ್, ಇಸ್ಮಾಯಿಲ್ ಮೂಡುಶೆಡ್ಡೆ, ಮುಹಮ್ಮದ್ ಆತಿಫ್, ತಸ್ಲೀಮ್, ತಮ್ಮ ಲಕ್ಷ್ಮಣ, ರಾಜೇಶ್ ಗುರೂಜಿ, ರಾಹುಲ್ ಅಮೀನ್, ನಾಯಕ ನಟ ಸಾಯಿಕೃಷ್ಣ ಕುಡ್ಲ, ನಾಯಕಿ ಶ್ವೇತಾ ಸುವರ್ಣ, ಜ್ಯೋತಿಷ್ ಶೆಟ್ಟಿ, ನಿರ್ಮಾಪಕ ಮಿಥುನ್ ಕೆ ಎಸ್, ಚೇತನ್, ರಾಜೇಶ್ ಫೆರಾವೊ, ನಿರ್ದೇಶಕ ನವೀನ್ ಕೆ. ಪೂಜಾರಿ ಇದ್ದರು. ಮಧುರಾಜ್ ಗುರುಪುರ ಕಾರ್ಯಕ್ರಮ ನಿರೂಪಿಸಿದರು.

ಮಿಸ್ಟರ್ ಮದಿಮಯೆ ಸಿನಿಮಾ ಮಂಗಳೂರಿನಲ್ಲಿ ಬಿಗ್ ಸಿನಿಮಾಸ್, ಸಿನಿಪೊಲಿಸ್, ಪಿವಿಆರ್, ಸುರತ್ಕಲ್ ನಲ್ಲಿ ಸಿನಿಗ್ಯಾಲಕ್ಸಿ, ಪಡುಬಿದ್ರಿಯಲ್ಲಿ ಬಿಗ್ ಸಿನಿಮಾಸ್, ಪುತ್ತೂರಿನಲ್ಲಿ ಭಾರತ್ ಸಿನಿಮಾಸ್ , ಬೆಳ್ತಂಗಡಿಯಲ್ಲಿ ಭಾರತ್ , ಸುಳ್ಯದಲ್ಲಿ ಸಂತೋಷ್ ಚಿತ್ರಮಂದಿರದಲ್ಲಿ ತೆರೆ ಕಂಡಿದೆ. ಮಂಗಳೂರಿನ ‘ರೂಪವಾಣಿ’ ಮತ್ತು ಉಡುಪಿಯ ‘ಕಲ್ಪನಾ’ ಥಿಯೇಟರ್‌ನಲ್ಲಿ ಜ.19ರಂದು ಬಿಡುಗಡೆಗೊಳ್ಳಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT