ಸೋಮವಾರ, ಆಗಸ್ಟ್ 3, 2020
27 °C
ಕೆಪಿಸಿಸಿ ಅಧ್ಯಕ್ಷರಿಗೆ ಪ್ರತಾಪ್‌ಸಿಂಹ ನಾಯಕ್‌ ತಿರುಗೇಟು

ಶಿವಕುಮಾರ್‌ಗೆ ಲೆಕ್ಕ ಕೇಳುವ ಭ್ರಮೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಂಗಳೂರು: ವಿಪತ್ತಿನ ಸಂದರ್ಭದಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸಕಾಲಿಕ ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದರೆ, ಕಾಂಗ್ರೆಸ್‌ ಮುಖಂಡರು ಆಧಾರ ರಹಿತ ಆರೋಪಗಳನ್ನು ಮಾಡುವ ಮೂಲಕ ಜನಸಾಮಾನ್ಯರ ದಿಕ್ಕುತಪ್ಪಿಸುವ ಕೆಲಸ ಮಾಡುತ್ತಿದ್ದಾರೆ ಎಂದು ವಿಧಾನ ಪರಿಷತ್ ಸದಸ್ಯ ಪ್ರತಾಪಸಿಂಹ ನಾಯಕ್ ದೂರಿದ್ದಾರೆ.

‘ಶುಕ್ರವಾರ ಜಿಲ್ಲೆಗೆ ಭೇಟಿ ನೀಡಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರಿಗೆ ಲೆಕ್ಕ ಕೇಳುವ ಭ್ರಮೆ ಹಿಡಿದಿದೆ. ಅವರ ಅಕ್ರಮ ಸಂಪತ್ತಿನ ಬಗ್ಗೆ ಸಿಬಿಐ ಲೆಕ್ಕ ಕೇಳಿತ್ತು. ಹೀಗಾಗಿ ಅವರಿಗೆ ಈಗ ನಿದ್ದೆಯಲ್ಲಿ ಹಾಗೂ ನಿದ್ದೆಯಿಂದ ಎದ್ದಾಗ ಲೆಕ್ಕದ ನೆನಪೇ ಬರುತ್ತಿದೆ’ ಎಂದು ಟೀಕಿಸಿದ್ದಾರೆ.

ಅಂದು ಸುಳ್ಯದ ಜನಸಾಮಾನ್ಯರೊಬ್ಬರು ವಿದ್ಯುತ್ ಲೆಕ್ಕ ಕೇಳಿದಾಗ, ಅಧಿಕಾರ ದುರುಪಯೋಗ ಪಡಿಸಿಕೊಂಡು ಅವರಿಗೆ ಪೊಲೀಸರ ಮೂಲಕ ಹಿಂಸೆ ಕೊಟ್ಟಿದ್ದನ್ನು ಜಿಲ್ಲೆಯ ಜನ ಇನ್ನೂ ಮರೆತಿಲ್ಲ. ಇಂತಹ ನಾಯಕರಿಂದ ಹೆಚ್ಚಿನದೇನೂ ನಿರೀಕ್ಷೆ ಮಾಡಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.