ಶುಕ್ರವಾರ, 4 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

‘ಕಣ್ಣಿನ ಆರೋಗ್ಯ: ಕಾಳಜಿ ಅಗತ್ಯ’

Published : 17 ಸೆಪ್ಟೆಂಬರ್ 2024, 4:48 IST
Last Updated : 17 ಸೆಪ್ಟೆಂಬರ್ 2024, 4:48 IST
ಫಾಲೋ ಮಾಡಿ
Comments

ಮೂಡುಬಿದಿರೆ: ಕಣ್ಣಿನ ಬಗ್ಗೆ ಇನ್ನೂ ಜನರಲ್ಲಿ ಜಾಗೃತಿ ಮೂಡಿಲ್ಲ. ಜಗತ್ತನ್ನು ಕಾಣಲು ಕಣ್ಣು ಬಹುಮುಖ್ಯ. ಆರೋಗ್ಯದ ಸಮಸ್ಯೆ ಬಂದಾಗ ಅಂಜಿಕೆ, ಭಯ ಪಡದೆ ವೈದ್ಯರ ಸೇವೆ ಪಡೆಯುವುದ ಅಗತ್ಯ ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ.ಮೋಹನ ಆಳ್ವ ಹೇಳಿದರು.

ಆಳ್ವಾಸ್ ಆಯುರ್ವೇದ ಮೆಡಿಕಲ್ ಕಾಲೇಜು ಆಸ್ಪತ್ರೆ, ಮಂಗಳೂರಿನ ಪ್ರಸಾದ್ ನೇತ್ರಾಲಯ ಸೂಪರ್ ಸ್ಪೆಷಾಲಿಟಿ ಕಣ್ಣಿನ ಆಸ್ಪತ್ರೆ, ನೇತ್ರಜ್ಯೋತಿ ಚಾರಿಟಬಲ್ ಟ್ರಸ್ಟ್, ದ.ಕ ಜಿಲ್ಲಾ ಹೆಗ್ಗಡೆ ಸಮಾಜ ಸಂಘ ಕೋಟೆಬಾಗಿಲು, ಗಾಣಿಗ ಯಾನೆ ಸಪಳಿಗ ಸೇವಾ ಸಂಘ ಮೂಡುಬಿದಿರೆ, ಮಿಜಾರು-ಎಡಪದವು, ಭಂಡಾರಿ ಸಮಾಜ ಸೇವಾ ಸಂಘ ಹಾಗೂ ಮಡಿವಾಳ ಸಮಾಜ ಸೇವಾ ಸಂಘ ಮೂಡುಬಿದಿರೆಯ ಆಶ್ರಯದಲ್ಲಿ ವಿದ್ಯಾಗಿರಿಯಲ್ಲಿ ಮಂಗಳವಾರ ನಡೆದ ನೇತ್ರ ತಪಾಸಣಾ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಉಚಿತ ನೇತ್ರ ಶಿಬಿರ ಒಂದು ವರ್ಷದವರೆಗೆ ನಡೆಯಲಿದೆ. ಈ ಅವಧಿಯಲ್ಲಿ ಸುಮಾರು 5 ಸಾವಿರ ಜನರ ತಪಾಸಣೆ ನಡೆಸಿ, 2500 ಜನರಿಗೆ ಕನ್ನಡಕ ವಿತರಿಸಿ, ಸುಮಾರು 500 ಜನರಿಗೆ ಶಸ್ತ್ರ ಚಿಕಿತ್ಸೆಯನ್ನು ಮಾಡುವ ಗುರಿ ಇದೆ ಎಂದರು.

ಈ ಹಿಂದೆ ನಡೆದಿದ್ದ ಶಿಬಿರದ ಫಲಾನುಭವಿಗಳಿಗೆ ಉಚಿತವಾಗಿ ಕನ್ನಡಕ ವಿತರಿಸಲಾಯಿತು. 178 ಮಂದಿ ಶಿಬಿರದ ಪ್ರಯೋಜನ ಪಡೆದುಕೊಂಡರು.

ದ.ಕ ಜಿಲ್ಲಾ ಹೆಗ್ಗಡೆ ಸಮಾಜ ಸಂಘದ ಅಧ್ಯಕ್ಷ ನವೀನ್ ಹೆಗ್ಡೆ, ಮೂಡುಬಿದಿರೆ ಸಪಳಿಗೆ ಯಾನೆ ಗಾಣಿಗರ ಸೇವಾ ಸಂಘದ ಅಧ್ಯಕ್ಷ, ರಾಜೇಶ್ ಬಂಗೇರ, ಮಿಜಾರು-ಎಡಪದವು ಗಾಣಿಗರ ಸೇವಾ ಸಂಘದ ಅಧ್ಯಕ್ಷ ಭಾಸ್ಕರ ಸಪಳಿಗ, ಮಡಿವಾಳ ಸಮಾಜ ಸೇವಾ ಸಂಘದ ಗೌರವಾಧ್ಯಕ್ಷ  ಶ್ಯಾಮ ಎಂ., ಪ್ರಸಾದ್ ನೇತ್ರಾಲಯದ ಕಣ್ಣಿನ ತಜ್ಞ ಡಾ.ವಿಷ್ಣು, ಪ್ರಾಚಾರ್ಯ ಡಾ.ಸಜಿತ್ ಎಂ., ಪುರಸಭೆ ಮಾಜಿ ಅಧ್ಯಕ್ಷ ಪ್ರಸಾದ್ ಕುಮಾರ್ ಭಾಗವಹಿಸಿದ್ದರು.

ಡಾ.ಮಂಜುನಾಥ್ ಭಟ್ ಸ್ವಾಗತಿಸಿ, ಡಾ.ವಿಕ್ರಮ್ ಕುಮಾರ್ ವಂದಿಸಿದರು. ಡಾ.ಗೀತಾ ಬಿ.ಮಾರ್ಕಂಡೆ ನಿರೂಪಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT