ಮಂಗಳವಾರ, ಏಪ್ರಿಲ್ 20, 2021
26 °C

ಪ್ರಭಾಕರ್ ಭಟ್ರೆ ನಿಮ್ಮ ಸಮುದಾಯದಲ್ಲಿ ಗೋವು ಭಕ್ಷಕರು ಯಾರು ಇಲ್ಲವೇ?: ಬಾವಾ ಸವಾಲು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಂಗಳೂರು: ಕಲ್ಲಡ್ಕ ಪ್ರಭಾಕರ್ ಭಟ್ರೆ ನಿಮ್ಮ ಸಮುದಾಯದಲ್ಲಿ ಗೋವು ಭಕ್ಷಕರು ಯಾರು ಇಲ್ಲವೆಂದು ದೇವಸ್ಥಾನದಲ್ಲಿ ಪ್ರಮಾಣ ಮಾಡ್ತೀರಾ? ಎಂದು ಮಾಜಿ ಶಾಸಕ ಮೊಯಿದ್ದೀನ ಬಾವಾ ಅವರು ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಸವಾಲು ಹಾಕಿದರು.

ಕೆಂಜಾರಿನಲ್ಲಿ ಇರುವಂತಹ ಗೋವುಗಳನ್ನು ಬೀದಿ ಪಾಲು ಮಾಡಿದ್ದೀರಿ. ಗೋವಿನ ಹೆಸರಲ್ಲಿ ಅಧಿಕಾರಕ್ಕೆ ಬಂದಿರುವ ನೀವು, ಮೊದಲು ಗೋವುಗಳ ವಾಸ್ತವ್ಯಕ್ಕೆ ಸೂಕ್ತ ಕ್ರಮ ತೆಗೆದುಕೊಳ್ಳಿ. ಗೋವುಗಳನ್ನು ಸುರಕ್ಷಿತವಾಗಿ ಇಡುವುದಕ್ಕೆ ಸರ್ಕಾರ ಹಾಗೂ ಶಾಸಕರು ಯಾವುದೇ ಕ್ರಮ ತೆಗೆದುಕೊಂಡಿಲ್ಲ. ಗೋವುಗಳಿಗೆ ತಾತ್ಕಾಲಿಕ ವ್ಯವಸ್ಥೆ ಕಲ್ಪಿಸುವುದಕ್ಕೆ ವೈಯಕ್ತಿಕವಾಗಿ ರೂ. 1 ಲಕ್ಷದ ಚೆಕ್ ನೀಡುತ್ತಿರುವೆ. ಇನ್ನೂ ವಿಧಾನ ಪರಿಷತ್ ಸದಸ್ಯ ಫಾರೂಕ್ ಅವರು, ಪರಿಷತ್ ನಿಧಿಯಿಂದ ರೂ. 5 ಲಕ್ಷ ನೀಡುವುದಾಗಿ ತಿಳಿಸಿದ್ದಾರೆ ಎಂದರು.

ಬಾವಾ ಅವರಿಗೆ ಚುನಾವಣೆಯಲ್ಲಿ ಮತ ಹಾಕಬೇಡಿ, ಅವರು ಆಯ್ಕೆಯಾದರೆ ಕೊಟ್ಟಿಗೆಯಲ್ಲಿ ಯಾವುದೇ ಗೋವುಗಳು ಉಳಿಯಲ್ಲ ಎಂದು ನನ್ನ ಬಗ್ಗೆ ಅಪಪ್ರಚಾರ ಮಾಡಿ ನೀವು ಗೋವಿನ ಹೆಸರಲ್ಲಿ ಅಯ್ಕೆಯಾಗಿದ್ದೀರಿ ಎಂದು ಶಾಸಕ ಭರತ್ ಶೆಟ್ಟಿ ಅವರ ವಿರುದ್ದ ಆಕ್ರೋಶ ಹೊರ ಹಾಕಿದರು. ಇಷ್ಟೇಲ್ಲ ನಡೆಯುತ್ತಿದ್ದರು ಸರ್ಕಾರ ಇಲ್ಲಿನ ಗೋವುಗಳ ರಕ್ಷಣೆಗೆ ಯಾವುದೇ ಕ್ರಮ ಕೈಗೊಂಡಿಲ್ಲ. ಈ ಬಗ್ಗೆ ಜಿಲ್ಲಾಧಿಕಾರಿ ಅವರ ಜತಗೆ ನಿರಂತರ ಸಂಪರ್ಕಸಲ್ಲಿ ಇದ್ದೇನೆ. ಗೋವುಗಳ ವಿಚಾರದಲ್ಲಿ ಜಾತಿ ರಾಜಕೀಯ ಮಾಡುವುದನ್ನು ಬಿಟ್ಟು, ಗೋವುಗಳ ರಕ್ಷಣೆಗೆ ಮುಂದಾಗಬೇಕು ಎಂದು ಅಗ್ರಹಿಸಿದರು.

ಕಪಿಲಾ ಗೋ ಶಾಲೆಯ ಮುಖ್ಯಸ್ಥ ಪ್ರಕಾಶ್ ಶೆಟ್ಟಿ ಮಾತನಾಡಿ, ಗೋವುಗಳ ರಕ್ಷಣೆಗೆ ವ್ಯವಸ್ಥೆ ಮಾಡಿ ಎಂದರೆ, ನೀವು ತಿನ್ನುವವರ ಜತೆಗೆ ಇದ್ದೀರಿ ಎನ್ನುತ್ತಾರೆ. ಆದರೆ ಅವರು ಗೋವು ಕಡೆಯುವವರ ಜತೆಗೆ ಇದ್ದಾರೆ ಎಂದು ಆಕ್ರೋಶ ಹೊರ ಹಾಕಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು