ಶುಕ್ರವಾರ, ಆಗಸ್ಟ್ 12, 2022
20 °C

ಪಿಯುಸಿ ಫಲಿತಾಂಶ | ಕಮ್ಮಾಜೆ ಮೊರಾರ್ಜಿ ಶಾಲೆ ಉತ್ತಮ ಸಾಧನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಂಗಳೂರು: ಸಮಾಜ ಕಲ್ಯಾಣ ಇಲಾಖೆ ನಡೆಸುವ ತಾಲ್ಲೂಕಿನ ಮೆನ್ನಬೆಟ್ಟು ಗ್ರಾಮದ ಕಮ್ಮಾಜೆಯಲ್ಲಿರುವ ಮೊರಾರ್ಜಿ ದೇಸಾಯಿ ಪದವಿಪೂರ್ವ ವಸತಿ ಕಾಲೇಜಿನ ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದಲ್ಲಿ ಸತತವಾಗಿ ನಾಲ್ಕನೇ ಬಾರಿಗೆ ಶೇ 100 ಫಲಿತಾಂಶ ದಾಖಲಾಗಿದೆ.

ಪರೀಕ್ಷೆಗೆ ಹಾಜರಾದ 70 ವಿದ್ಯಾರ್ಥಿಗಳಲ್ಲಿ 51 ವಿದ್ಯಾರ್ಥಿಗಳು ಅತ್ಯುನ್ನತ ಶ್ರೇಣಿ, ಉಳಿದ 19 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾರೆ. ಸೌಮ್ಯಾ ಎಸ್.ಎಂ. (594 ಅಂಕ), ರಾಜ್ಯದ ಮೊರಾರ್ಜಿ ದೇಸಾಯಿ ಪದವಿ ಪೂರ್ವ ಕಾಲೇಜುಗಳಿಗೆ ಪ್ರಥಮ ಸ್ಥಾನ ಗಳಿಸಿದ್ದಾರೆ. ಹಾಗೂ ಕಾಲೇಜಿಗೆ ಪ್ರಥಮ ಸ್ಥಾನ ಪಡೆದುಕೊಂಡಿದ್ದಾರೆ. ನಮಿತಾ ಎನ್.ಎಚ್, (585), ಶೈಲೇಶ್ ಕೆ. (585), ಅಂಜು ಜಾಕೋಬ್ (582), ಸುದೀಪ್ (581), ಪವರ್‌ ರಾಥೋಡ್ (578), ಪ್ರೇಮಾ ಬಿ.ಎಚ್ (575), ಸಂಗಮೇಶ್ (573), ಸಿಂಧು ಮೊಗೇರ (571), ಪ್ರಶಾಂತ್ ಮಗದಮ್ (570) ಉತ್ತಮ ಸಾಧನೆ ಮಾಡಿದ್ದಾರೆ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು