ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೃಜೇಶ್ ಚೌಟ ಬಳಿ ₹ 71.81 ಲಕ್ಷ ಮೌಲ್ಯದ ಆಸ್ತಿ

Published 28 ಮಾರ್ಚ್ 2024, 17:01 IST
Last Updated 28 ಮಾರ್ಚ್ 2024, 17:01 IST
ಅಕ್ಷರ ಗಾತ್ರ

ಮಂಗಳೂರು: ಬಿಜೆಪಿ ಅಭ್ಯರ್ಥಿ ಬೃಜೇಶ್ ಚೌಟ (42 ವರ್ಷ) ಅವರು ಸ್ಥಿರಾಸ್ತಿ ಹಾಗೂ ಚರಾಸ್ತಿ ಸೇರಿ ಒಟ್ಟು ₹ 71.81 ಲಕ್ಷ ಆಸ್ತಿಯ ಒಡೆಯ. ಅವರ ಬಳಿ ಟೊಯೋಟಾ ಇನೋವಾ ಕ್ರಿಸ್ಟ ಕಾರು ಇದ್ದು, ಅದಕ್ಕೆ ₹ 9.62 ಲಕ್ಷ ಸಾಲವನ್ನು ಹೊಂದಿದ್ದಾರೆ.

ದಕ್ಷಿಣ ಕನ್ನಡ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಗುರುವಾರ ನಾಮಪತ್ರದ ಜೊತೆ ಸಲ್ಲಿಸಿರುವ ಪ್ರಮಾಣಪತ್ರದಲ್ಲಿ ಈ ಕುರಿತ ವಿವರಗಳಿವೆ.

ನಗರದ ಸೇಂಟ್‌ ಅಲೋಶಿಯಸ್‌ ಕಾಲೇಜಿನಲ್ಲಿ 2002ರಲ್ಲಿ ಬಿಎಸ್ಸಿ ಪದವಿ ಪಡೆದಿರುವ ಚೌಟ, 2010ರಲ್ಲಿ ಇಂದೋರ್ನ ಐಐಎಂನಲ್ಲಿ ಬಿಜಿನೆಸ್‌ ಮ್ಯಾನೇಜ್‌ಮೆಂಟ್‌ ಸರ್ಟಿಫಿಕೇಟ್‌ ಕೋರ್ಸ್ ಪಡೆದಿದ್ದಾರೆ.

ಬೃಜೇಶ್‌ ವಿರುದ್ಧ ನಂಜನಗೂಡು ಪೊಲೀಸ್‌ ಠಾಣೆಯಲ್ಲಿ 2017ರಲ್ಲಿ 1951ರ ಪ್ರಜಾಪ್ರತಿನಿಧಿ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ. ಅದರ ಮರುಪರಿಶೀಲನಾ ಅರ್ಜಿಯ ವಿಚಾರಣೆ ಹೈಕೋರ್ಟ್‌ನಲ್ಲಿ ಬಾಕಿ ಇದೆ.

ಚರಾಸ್ತಿ: ಚೌಟ ಅವರ ಬಳಿ ಒಟ್ಟು ₹ 27.31 ಲಕ್ಷ ಚರಾಸ್ತಿ ಇದೆ. ₹ 80 ಸಾವಿರ ನಗದು ಇದೆ. ನಗರದ ಮೂರು ಬ್ಯಾಂಕ್‌ಗಳಲ್ಲಿ ಒಟ್ಟು 1,15,939 ಠೇವಣಇ ಇದೆ. ಚುನಾವಣೆ ಸಲುವಾಗಿ ಹೊಸತಾಗಿ ಆರಂಭಿಸಿರುವ ಬ್ಯಾಂಕ್‌ ಖಾತೆಯಲ್ಲಿ ₹ 1 ಲಕ್ಷ ಠೇವಣಿ ಇದೆ. ಮೆ.ಆಲಿವ್‌ ಸ್ಟೀಲ್‌ ಸಲ್ಯೂಷನ್ಸ್‌ ಸಂಸ್ಥೆಯಲ್ಲಿ ₹ 7.20 ಲಕ್ಷ ಹೂಡಿಕೆ ಮಾಡಿದ್ದಾರೆ. ಅವರ ಟೊಯೋಟಾ ಇನೋವಾ ಕ್ರಿಸ್ಟ ಕಾರಿನ ಮೌಲ್ಯ ₹ 8.15 ಲಕ್ಷ. ಅವರ ಬಳಿ 137 ಗ್ರಾಂ ಚಿನ್ನಾಭರಣಗಳಿದ್ದು, ಅವುಗಳ ಮೌಲ್ಯ ಅಂದಾಜು ₹ 9 ಲಕ್ಷ.

ಸ್ಥಿರಾಸ್ತಿ:ಚೌಟ ಅವರು ತಲಪಾಡಿ ಬಳಿ ಹಿರಿಯರಿಂದ ಬಳುವಳಿಯಾಗಿ ಪಡೆದಿರುವ ಐದು ನಿವೇಶನಗಳಲ್ಲಿ (18 ಸೆಂಟ್ಸ್‌, 32 ಸೆಂಟ್ಸ್‌, 35 ಸೆಂಟ್ಸ್‌, 45 ಸೆಂಟ್ಸ್‌, 12 ಸೆಂಟ್ಸ್‌ ವಿಸ್ತೀರ್ಣದ್ದು) ಶೇ 25ರಷ್ಟು ಪಾಲನ್ನು ಹೊಂದಿದ್ದಾರೆ. ಈ ನಿವೇಶನಗಳ ಒಟ್ಟು ಮೌಲ್ಯ ₹ 1.74 ಕೋಟಿ ಇದ್ದು, ಅದರಲ್ಲಿ ಚೌಟ ಅವರ ಪಾಲಿನ ಆಸ್ತಿ ಮೌಲ್ಯ ಅಂದಾಜು ₹43.5 ಲಕ್ಷ.

ಚೌಟ ಅವರು ತಮ್ಮ ಹೆಸರಿನಲ್ಲಿ ವೆಬ್‌ಸೈಟ್ (https://captainbrijesh.in), ಎಕ್ಸ್‌ (ಟ್ವಿಟರ್‌) ಖಾತೆ (https://x.com/captbrijesh),ಇನ್ಸ್ಟಾಗ್ರಾಂ (https://www.instagram.com/captbrijeshchowta/), ಫೇಸ್‌ಬುಕ್‌ (https://www.facebook.com/captbrijeshchowta/) ಹಾಗೂ ಯೂಟ್ಯೂಬ್‌ (@CaptainBrijeshChowta) ಖಾತೆಗಳನ್ನು ಹೊಂದಿದ್ದಾರೆ.

ಸರ್ಕಾರಕ್ಕೆ ಯಾವುದೇ ಬಾಕಿ ಉಳಿಸಿಕೊಂಡಿಲ್ಲ. ಇನ್ನೂ ಮದುವೆಯಾಗಿಲ್ಲ. ಅವಲಂಬಿತರು ಯಾರೂ ಇಲ್ಲ. 2022–23ನೇ ನೇ ಸಾಲಿನಲ್ಲಿ ಆದಾಯ ತೆರಿಗೆ ಇಲಾಖೆಗೆ ಸಲ್ಲಿಸಿದ ವಿವರದಲ್ಲಿ ಅವರು ತಮಗೆ ವಾರ್ಷಿಕ ₹6,51,590 ಆದಾಯವಿದೆ. ಆದಾಯದ ಮೂಲ ಉದ್ದಿಮೆ ಎಂದು ಹೇಳಿಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT