ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಸ್ಟಾಡೋಮ್ ರೈಲು ಸಂಚಾರಕ್ಕೆ ಮಂಗಳೂರಿನಲ್ಲಿ ಸಂಸದ ನಳಿನ್ ಕುಮಾರ್ ಚಾಲನೆ

Last Updated 11 ಜುಲೈ 2021, 6:44 IST
ಅಕ್ಷರ ಗಾತ್ರ

ಮಂಗಳೂರು: ಯಶವಂತಪುರ- ಮಂಗಳೂರು ನಡುವೆ ಸಂಚರಿಸುವ ರೈಲಿಗೆ ಅಳವಡಿಸಲಾದ ವಿಸ್ಟಾಡೋಮ್ ಬೋಗಿಯ ಸಂಚಾರಕ್ಕೆ ಭಾನುವಾರ ಬೆಳಿಗ್ಗೆ 9.15ಕ್ಕೆ ಮಂಗಳೂರಿನಲ್ಲಿ ಸಂಸದ ನಳಿನ್ ಕುಮಾರ್ ಕಟೀಲ್ ಚಾಲನೆ ನೀಡಿದರು.

44 ಸೀಟುಗಳನ್ನು ಹೊಂದಿರುವ ಎರಡು ವಿಸ್ಟಾಡೋಮ್ ಬೋಗಿಯನ್ನು ಅಳವಡಿಸಲಾಗಿದ್ದು, ಒಟ್ಟು 75 ಪ್ರಯಾಣಿಕರು ಮುಂಗಡ ಬುಕ್ಕಿಂಗ್ ಮಾಡಿ, ಪ್ರಯಾಣ ಆರಂಭಿಸಿದ್ದಾರೆ.

ವಿಸ್ಟಾಡೋಮ್ ಬೋಗಿಯಲ್ಲಿ ಗಾಜಿನ ಚಾವಣಿ, 360 ಡಿಗ್ರಿ ತಿರುಗುವ 44 ಆಸನ, ಚಾರ್ಜರ್, ಜಿಪಿಎಸ್ ವ್ಯವಸ್ಥೆ, ಫ್ರಿಡ್ಜ್‌, ಮೈಕ್ರೋವೆವ್‌ ಸೇರಿದಂತೆ ಹಲವು ಸೌಲಭ್ಯಗಳನ್ನು ಈ ಬೋಗಿಗಳು ಹೊಂದಿವೆ. ಬೋಗಿಯಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಸಲಾಗಿದ್ದು, ಅಗ್ನಿ ಸುರಕ್ಷತಾ ಸಾಧನ, ಎಲ್‌ಇಡಿ ಪರದೆ, ಲಗೇಜ್ ಬಾಕ್ಸ್, ಪ್ರತಿ ಸೀಟ್‌ಗೂ ಮೊಬೈಲ್‌ ಚಾರ್ಜರ್‌ ವ್ಯವಸ್ಥೆ, ಸೀಟ್‌ಗಳಿಗೆ ಮಡಚುವ ಟೇಬಲ್‌ ವ್ಯವಸ್ಥೆಯನ್ನೂ ಮಾಡಲಾಗಿದೆ. ಅಂಗವಿಕಲರಿಗೆ ಬ್ರೈಲ್‌ ಸಿಗ್ನಲ್‌ ವ್ಯವಸ್ಥೆಯೂ ಇದೆ.

ನೈಋತ್ಯ ರೈಲ್ವೆ ಇದೇ ಮೊದಲ ಬಾರಿಗೆ ಕರ್ನಾಟಕದಲ್ಲಿ ರೈಲುಗಳಿಗೆ ವಿಸ್ಟಾಡಾಮ್ ಕೋಚ್ ಅಳವಡಿಕೆ ಮಾಡಿದೆ. ಗಾಜಿನ ಛಾವಣಿಯನ್ನು ಹೊಂದಿರುವ ಬೋಗಿಗಳ ಮೂಲಕ ನಿಸರ್ಗದ ಸೌಂದರ್ಯ ಸವಿಯಲು ಪ್ರಯಾಣಿಕರು ತುದಿಗಾಲಿನಲ್ಲಿ ನಿಂತಿದ್ದಾರೆ.

ಬೆಂಗಳೂರು-ಮಂಗಳೂರು ರೈಲು ಸಾಗುವ ಮಾರ್ಗದಲ್ಲಿ ಸಕಲೇಶಪುರ-ಕುಕ್ಕೆ ಸುಬ್ರಮಣ್ಯ ನಡುವೆ ಪಶ್ಚಿಮ ಘಟ್ಟದ ಹಸಿರು ಸೌಂದರ್ಯವನ್ನು ವಿಸ್ಟಾಡಾಮ್ ಕೋಚ್ ಮೂಲಕ ಪ್ರಯಾಣಿಕರು ಕಣ್ತುಂಬಿಕೊಳ್ಳಲು ಕಾತರರಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT