ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉದ್ಯೋಗದಲ್ಲಿ ನಿರ್ಲಕ್ಷ್ಯ, ಪ್ರಾದೇಶಿಕತೆಗೆ ಧಕ್ಕೆ

ಜೆಡಿಎಸ್‌ ಪ್ರತಿಭಟನೆಯಲ್ಲಿ ಸಂಸದ ಪ್ರಜ್ವಲ್ ರೇವಣ್ಣ
Last Updated 24 ಜೂನ್ 2021, 5:01 IST
ಅಕ್ಷರ ಗಾತ್ರ

ಮಂಗಳೂರು: ‘ಇಲ್ಲಿನ 2,800 ಎಕರೆ ಜಮೀನು ಪಡೆದು ದೊಡ್ಡ ಕಂಪನಿಯಾಗಿ ಬೆಳೆದಿರುವ ಎಂಆರ್‌ಪಿಎಲ್‌, ತುಳುನಾಡಿನ ಯುವಕರಿಗೆ ಕೆಲಸ ನೀಡದೆ ಪ್ರಾದೇಶಿಕ ಭಾವನೆಗೆ ಧಕ್ಕೆ ಮಾಡುತ್ತಿದೆ ಎಂದು ಸಂಸದ ಪ್ರಜ್ವಲ್ ರೇವಣ್ಣ ಹೇಳಿದರು.

ಎಂಆರ್‌ಪಿಎಲ್ ಸೇರಿದಂತೆ ಮಂಗಳೂರಿನಲ್ಲಿ ಕಾರ್ಯಾಚರಿಸುತ್ತಿರುವ ಕೆಲವು ಬೃಹತ್ ಕಂಪನಿಗಳಲ್ಲಿ ಸ್ಥಳೀಯ ಯುವಕರಿಗೆ ಉದ್ಯೋಗ ನೀಡುವಂತೆ ಆಗ್ರಹಿಸಿ ಯುವ ಜೆಡಿಎಸ್ ಜಿಲ್ಲಾ ಘಟಕದ ವತಿಯಿಂದ ಬುಧವಾರ ನಡೆದ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು.

ಮನವಿ ಸಲ್ಲಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಇತ್ತೀಚೆಗೆ 230 ಮಂದಿ ಕೆಲಸಗಾರರನ್ನು ತೆಗೆದುಕೊಳ್ಳುವಾಗ ಕೇವಲ 4 ಮಂದಿ ಸ್ಥಳೀಯರನ್ನು ಪರಿಗಣನೆ ಮಾಡಲಾಗಿದೆ. ತುಳುನಾಡಿನ ಯುವಕರಿಗೆ ಉದ್ಯೋಗ ನೀಡಬೇಕು ಎಂದು ಈಗಾಗಲೇ ಒಮ್ಮೆ ನಾನು ಟ್ವೀಟ್ ಮೂಲಕ ಆಗ್ರಹಿಸಿದ್ದ ಸಂದರ್ಭದಲ್ಲಿ, ಇಲ್ಲಿನ ಜನ ಪತ್ರಿನಿಧಿಗಳು ಶೀಘ್ರವೇ ಸಿಹಿ ಸುದ್ದಿಯ ಆಶ್ವಾಸನೆ ನೀಡಿದ್ದರು. ಆದರೆ ಅದು ಹುಸಿಯಾಗಿದೆ’ ಎಂದರು.

ಯುವ ಜೆಡಿಎಸ್ ಜಿಲ್ಲಾ ಘಟಕದ ಅಧ್ಯಕ್ಷ ಅಕ್ಷಿತ್ ಸುವರ್ಣ ಮಾತನಾಡಿ, ತುಳುನಾಡಿನ ಯುವಕರಿಗೆ ಉದ್ಯೋಗ ಲಭಿಸಬೇಕು ಎನ್ನುವ ಹೋರಾಟದಲ್ಲಿ ಯುವ ಜೆಡಿಎಸ್ ಸಂಪೂರ್ಣ ಬೆಂಬಲ ವ್ಯಕ್ತಪಡಿಸುತ್ತಿದ್ದು, ಸಂಸದ ಪ್ರಜ್ವಲ್ ರೇವಣ್ಣ ನೇತೃತ್ವದಲ್ಲಿ ಸಾಂಕೇತಿಕವಾಗಿ ಮನವಿ ಸಲ್ಲಿಸಲಾಗಿದೆ. ಮುಂದಿನ ದಿನಗಳಲ್ಲಿ ತುಳುನಾಡಿನ ಯುವಕರಿಗೆ ನ್ಯಾಯ ದೊರೆಯದೇ ಹೋದಲ್ಲಿ ಬೃಹತ್ ಮಟ್ಟದ ಹೋರಾಟಕ್ಕೆ ಸಿದ್ದ ಎಂದರು.

ಜೆಡಿಎಸ್‌ ಜಿಲ್ಲಾ ಘಟಕದ ಅಧ್ಯಕ್ಷ ಮೊಹಮ್ಮದ್ ಕುಂಞಿ, ಹಿರಿಯ ಮುಖಂಡರಾದ ಎಂ.ಬಿ.ಸದಾಶಿವ, ಸುಶೀಲ್‌ ನೊರೊನ್ಹ, ರತ್ನಾಕರ ಸುವರ್ಣ, ವಸಂತ್ ಪೂಜಾರಿ, ಪುಷ್ಪರಾಜನ್ ಎನ್.ಪಿ., ಅಝೀಝ್ ಕುದ್ರೋಳಿ, ಸುಮತಿ ಹೆಗ್ಡೆ, ನಾಸೀರ್, ಯುವ ನಾಯಕರಾದ ರತೀಶ್ ಕರ್ಕೇರ, ಹಿತೇಶ್ ರೈ, ಫೈಝಲ್ ರೆಹಮಾನ್, ಸತ್ಯನಾರಾಯಣ್, ಫೈಝಲ್ ಮೊಹಮ್ಮದ್, ಸತ್ತಾರ್ ಬಂದರ್, ಸವಾಝ್ ಬಂಟ್ವಾಳ, ಪ್ರದೀಪ್ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT