ಸೋಮವಾರ, ಆಗಸ್ಟ್ 2, 2021
23 °C

ಎಂಆರ್‌ಪಿಎಲ್‌: ಯುವಜೆಡಿಎಸ್‌ ಪ್ರತಿಭಟನೆ ಇಂದು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಂಗಳೂರು: ಎಂಆರ್‌ಪಿಎಲ್‌ ಸೇರಿದಂತೆ ಕೆಲವು ಬೃಹತ್ ಕಂಪನಿಗಳಲ್ಲಿ ಸ್ಥಳೀಯ ತುಳುನಾಡಿನ ಯುವಕರಿಗೆ ಉದ್ಯೋಗ ನೀಡುವಂತೆ ಆಗ್ರಹಿಸಿ ದಕ್ಷಿಣ ಕನ್ನಡ ಜಿಲ್ಲಾ ಯುವ ಜೆಡಿಎಸ್‌ವತಿಯಿಂದ ಜೂನ್ 23 ರಂದು ಬೆಳಿಗ್ಗೆ 11 ಗಂಟೆಗೆ ಕಾಟಿಪಳ್ಳದಲ್ಲಿರುವ ಕಂಪನಿಯ ಮುಖ್ಯದ್ವಾರದ ಎದುರು ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ.

ಸ್ಥಳೀಯ ಯುವಕರಿಗೆ ಪ್ರತಿಬಾರಿ ಅನ್ಯಾಯವಾಗುತ್ತಿದ್ದು ಉತ್ತಮ ಶಿಕ್ಷಣವನ್ನು ಹೊಂದಿದ ಇಲ್ಲಿನ ಯುವಕರಿಗೆ ನೌಕರಿಯಲ್ಲಿ ಅವಕಾಶ ನೀಡಬೇಕು ಎಂದು ಪ್ರತಿಭಟನೆಯ ಮೂಲಕ ಸರ್ಕಾರ ಹಾಗೂ ಸ್ಥಳೀಯ ಸಂಸದರು ಶಾಸಕರಿಗೆ ಒತ್ತಾಯ ಮಾಡಲಾಗುವುದು.

ಪ್ರತಿಭಟನೆಯಲ್ಲಿ ಸಂಸದ, ಪಕ್ಷದ ರಾಜ್ಯ ಸಮಿತಿ ಪ್ರಧಾನ ಕಾರ್ಯದರ್ಶಿ ಪ್ರಜ್ವಲ್ ರೇವಣ್ಣ, ವಿಧಾನ ಪರಿಷತ್ ಸದಸ್ಯರಾದ ಭೋಜೆ ಗೌಡ ಮತ್ತು ಬಿ. ಎಂ. ಫಾರೂಕ್ ಹಾಗೂ ಇತರ ಹಿರಿಯ ನಾಯಕರು ಮತ್ತು ಪದಾಧಿಕಾರಿಗಳು ಭಾಗವಹಿಸಲಿದ್ದಾರೆ ಎಂದು ಜಿಲ್ಲಾ ಯುವ ಜನತಾದಳದ ಅಧ್ಯಕ್ಷರಾದ ಅಕ್ಷಿತ್ ಸುವರ್ಣ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು