ಮೂಡುಬಿದಿರೆ: ತೋಡಾರಿನ ಗುಡ್ಡ ಪ್ರದೇಶದಲ್ಲಿ ಅಕ್ರಮವಾಗಿ ಕಟ್ಟಿ ಹಾಕಿದ್ದ 14 ಗೋವುಗಳನ್ನು ಪೊಲೀಸರು ಶನಿವಾರ ರಕ್ಷಿಸಿದ್ದಾರೆ.

ತೋಡಾರಿನ ಹಿದಾಯತ್ ನಗರದ ಪೆರಾಡಿ ಕಂಪೌಂಡ್ನ ಅಬುಸಾಲಿ ಎಂಬುವರ ಮನೆ ಹತ್ತಿರದ ಗುಡ್ಡದಲ್ಲಿ ಹಂಡೇಲಿನ ಹಸನ್ ಬಾವಾ ಎಂಬುವರು 12 ಹೋರಿ ಮತ್ತು 2 ಕೋಣಗಳನ್ನು ಅಕ್ರಮವಾಗಿ ಕಟ್ಟಿ ಹಾಕಿದ್ದರು. ಅವುಗಳನ್ನು ಕಸಾಯಿ ಖಾನೆಗೆ ಮಾರಾಟ ಮಾಡುವ ಉದ್ದೇಶ ಇತ್ತು ಎನ್ನಲಾಗಿದೆ. ಈ ಬಗ್ಗೆ ಸಾರ್ವಜನಿಕರು ನೀಡಿದ ಮಾಹಿತಿಯ ಆಧಾರದಲ್ಲಿ ಮೂಡುಬಿದಿರೆ ಇನ್ಸ್ಪೆಕ್ಟರ್ ನಿತ್ಯಾನಂದ ಪಂಡಿತ್ ಮತ್ತು ಸಿಬ್ಬಂದಿ ದಾಳಿ ನಡೆಸಿ ಹಸುಗಳನ್ನು ರಕ್ಷಣೆ ಮಾಡಿ ಕೆಂಜಾರಿನ ಗೋಶಾಲೆಗೆ ಹಸ್ತಾಂತರಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.