ಭಾನುವಾರ, 15 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಮುಡಿಪು: ಮಣ್ಣು ಪರೀಕ್ಷೆ, ಸಸ್ಯ ಪೋಷಕಾಂಶ ನಿರ್ವಹಣೆ ಕಾರ್ಯಾಗಾರ

Published : 9 ಆಗಸ್ಟ್ 2024, 8:20 IST
Last Updated : 9 ಆಗಸ್ಟ್ 2024, 8:20 IST
ಫಾಲೋ ಮಾಡಿ
Comments

ಮುಡಿಪು: ಪ್ರಗತಿ ಬಂದು ಸ್ವಸಹಾಯ ಸಂಘಗಳ ಒಕ್ಕೂಟ ಕೊಣಾಜೆ ವಲಯದ ಆಶ್ರಯದಲ್ಲಿ ಆಯ್ದ ರೈತರಿಗೆ 2024-25ನೇ ಸಾಲಿನ ಕೃಷಿ ವಿಸ್ತರಣಾ ಕಾರ್ಯಕ್ರಮದ ಅಂಗವಾಗಿ ಮಣ್ಣು ಪರೀಕ್ಷೆ ಹಾಗೂ ಸಸ್ಯ ಪೋಷಕಾಂಶ ನಿರ್ವಹಣೆ ಕುರಿತು ರೈತ ಕ್ಷೇತ್ರ ಪಾಠ ಶಾಲೆ ಕಾರ್ಯಕ್ರಮ ಪರಂಡೆಯಲ್ಲಿ ಗುರುವಾರ‌ ನಡೆಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೃಷಿಕ ರಾಮಕೃಷ್ಣ ವಹಿಸಿದ್ದರು. ಕಾರ್ಯಕ್ರಮವನ್ನು ವೇದಾವತಿ ಗಟ್ಟಿ ಉದ್ಘಾಟಿಸಿದರು.

ಕೆವಿಕೆ ಮಣ್ಣು ಪರೀಕ್ಷೆ ವಿಜ್ಞಾನಿ ಮಲ್ಲಿಕಾರ್ಜುನ ಮಾತನಾಡಿ, ಮಣ್ಣು ಪರೀಕ್ಷಯ ಮಹತ್ವ, ಮಣ್ಣು ಮಾದರಿ ಸಂಗ್ರಹ ವಿಧಾನ,‌ ಮಣ್ಣು ಮಾದರಿ ಸಂಗ್ರಹಿಸಲು ಕೈಗೊಳ್ಳಬೇಕಾದ ಮುನ್ನೆಚ್ಚರಿಕೆ ಕ್ರಮ, ಮಣ್ಣು ಪರೀಕ್ಷೆಯ ಪ್ರಯೋಜನದ ಬಗ್ಗೆ ಮಾಹಿರಿ ನೀಡಿದರು.

ಕೃಷಿ ಅಧಿಕಾರಿ ಮೋಹನ್ ಪ್ರಾಸ್ತಾವಿಕವಾಗಿ ಮಾತನಾಡಿದರು. ವಲಯ ಮೇಲ್ವಿಚಾರಕ ಮಾಧವ, ಸೇವಾ ಪ್ರತಿನಿಧಿಗಳಾದ ಚಿತ್ತರಂಜನ್ ಕಾವೂರು, ಸರಿತಾ, ನೌಷಾದ್ ಕೊಣಾಜೆ  ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT