ಭಾನುವಾರ, ಆಗಸ್ಟ್ 1, 2021
27 °C

ರಾಹುಲ್‌ ಗಾಂಧಿ ಗಡಿಗೆ ತೆರಳಿದ್ದರೇ: ಸಿದ್ದರಾಮಯ್ಯಗೆ ಕಟೀಲ್‌ ತಿರುಗೇಟು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಂಗಳೂರು: ‘ಚೀನಾ ಸೇನೆ ಒಳಬಂದಿದೆ ಎನ್ನಲು ರಾಹುಲ್ ಗಾಂಧಿ ಅಲ್ಲಿಗೆ ತೆರಳಿದ್ದರೆ? ಇಲ್ಲ’ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ, ಸಂಸದ ನಳಿನ್‌ಕುಮಾರ್‌ ಕಟೀಲ್‌, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ತಿರುಗೇಟು ನೀಡಿದ್ದಾರೆ.

‘ಚೀನಾ ಸೇನೆ ಎರಡು ಕಿ.ಮೀ. ಹಿಂದೆ ಸರಿದಿದೆ ಎಂದು ಹೇಳಲು ನೀವೇನು ರಕ್ಷಣಾ ಸಚಿವರೇ’ ಎಂದು ಬಿ.ಎಲ್‌. ಸಂತೋಷ್‌ ಅವರನ್ನು ಪ್ರಶ್ನಿಸಿದ್ದ ಸಿದ್ದರಾಮಯ್ಯ ಅವರ ಟ್ವೀಟ್‌ಗೆ ಉತ್ತರಿಸಿರುವ ನಳಿನ್‌, ‘ಗಡಿಯಲ್ಲಿ ಸ್ಥಿತಿಯೇನು? ಅದರ ಪ್ರಕ್ರಿಯೆಗಳೇನು ಅರಿಯಿರಿ. ತಂತ್ರಜ್ಞಾನದ ಯುಗದಲ್ಲಿ ಸುಳ್ಳು ಹೇಳಿ ಜನರನ್ನು ನಂಬಿಸಲು ಸಾಧ್ಯವಿಲ್ಲ’ ಎಂದಿದ್ದಾರೆ.

‘ಭಾರತೀಯರಿಗೆ ನಮ್ಮ ಪ್ರಧಾನಿ ಬಗ್ಗೆ ಅಪಾರ ನಂಬಿಕೆಯಿದೆ. ಹಾಗಾಗಿಯೇ ಜನ ಅವರ ಬೆಂಬಲಕ್ಕೆ ನಿಂತಿದ್ದಾರೆ. ಪಿಎಂ ಕೇರ್ ಫಂಡ್ ಕುರಿತು ಸೂಕ್ತ ಸಮಯದಲ್ಲಿ ಮಾಹಿತಿ ದೊರೆಯಲಿದೆ’ ಎಂದು ಹೇಳಿದ್ದಾರೆ.

‘ನೀವು ಡಿಕೆಶಿಗೆ ನೀಡುತ್ತಿರುವ ಬೆಂಬಲ ಎಂಥದ್ದು? ಕಾಂಗ್ರೆಸ್‌ನೊಳಗೆ ನೀವು ನಡೆಸಿದ ರಾಜಕೀಯವೇನು ಕಡಿಮೆಯೇ? ನಿಮ್ಮನ್ನು ಪಕ್ಷಕ್ಕೆ ಕರೆತರಲು ಕಾರಣೀಕರ್ತರಾದ ಎಚ್. ವಿಶ್ವನಾಥ ಅವರೇ ಪಕ್ಷ ತೊರೆಯುವಂತಾಯಿತಲ್ಲವೆ? ಎಲ್ಲರೂ ನಿಮ್ಮಂತೆ ಎಂದು ಭಾವಿಸಬೇಡಿ. ಬೇರೆಯವರ ಬಾಳೆಯಲ್ಲಿನ ನೊಣ ನೋಡುವುದು ಬಿಡಿ’ ಎಂದು ವಾಗ್ದಾಳಿ ನಡೆಸಿದ್ದಾರೆ.

‘ಕೋವಿಡ್ ಬಗ್ಗೆ ಮಾತನಾಡಲು ನಾವು ವೈದ್ಯರೂ ಅಲ್ಲ. ಈ ರೀತಿ ತರ್ಕದಿಂದ ಏನೂ ಉಪಯೋಗವಿಲ್ಲ’ ಎಂದು ನಳಿನ್‌ ಟ್ವೀಟ್‌ನಲ್ಲಿ ತಿಳಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು